ರಾಹುಲ್‌ಗೆ ಬಿಜೆಪಿ ಆಹ್ವಾನ


Team Udayavani, Jan 29, 2019, 8:11 AM IST

raga.jpg

ಪಣಜಿ : “ರಾಹುಲ್‌ ಅವರೇ, “ಅಟಲ್‌ ಸೇತು’ವನ್ನು ಒಮ್ಮೆ ನೋಡಬನ್ನಿ. ಆಗ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಹೇಗೆ ಭಾರತವನ್ನು ಬದಲಾಯಿಸುತ್ತಿದೆ ಎಂಬುದು ನಿಮಗೆ ತಿಳಿಯುತ್ತದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಬಿಜೆಪಿ ಟ್ವಿಟರ್‌ ಮೂಲಕ ಆಹ್ವಾನ ನೀಡಿದೆ. ಖಾಸಗಿ ಭೇಟಿ ನಿಮಿತ್ತ ತಾಯಿ ಸೋನಿಯಾ ಗಾಂಧಿ ಜತೆಗೆ ಗೋವಾಗೆ ಬಂದ ರಾಹುಲ್‌ಗೆ ಈ ಮೂಲಕ ಆಹ್ವಾನ ನೀಡಲಾಗಿದೆ.

ಮಾಂಡೋವಿ ನದಿಗೆ ಅಡ್ಡವಾಗಿ ಕಟ್ಟಿರುವ 5.1 ಕಿ.ಮೀ. ಉದ್ದದ ಕೇಬಲ್‌ ಸೇತುವೆಯ ಉದ್ಘಾಟನೆ ಭಾನುವಾರ ನೆರವೇರಿದ ಹಿನ್ನೆಲೆಯಲ್ಲಿ ಈ ಟ್ವೀಟ್‌ ಮಾಡಲಾಗಿದೆ. ಇನ್ನು ಸೇತುವೆ ಉದ್ಘಾಟನೆ ವೇಳೆ, ಉರಿ ಚಿತ್ರದ ಖ್ಯಾತ ಸಂಭಾಷಣೆ “ಹೌ ಈಸ್‌ ದ ಜೋಷ್‌’ ಎಂದು ಕೇಳಿದ್ದ ಪಾರೀಕರ್‌ ವಿರುದ್ಧ ಟ್ವಿಟರ್‌ನಲ್ಲಿ ಕಿಡಿಕಾರಿರುವ ಗೋವಾ ಕಾಂಗ್ರೆಸ್‌, “ಮೊದಲು ನೀವು ಹೋಶ್‌ಗೆ (ಪ್ರಜ್ಞಾವಸ್ಥೆಗೆ) ಬನ್ನಿ. ಆನಂತರ ಜೋಷ್‌ ಬಗ್ಗೆ (ಉತ್ಸಾಹ) ಮಾತನಾಡಿ.
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಸಾಲದ ಮೊತ್ತ ಏರುತ್ತಲೇ ಇದೆ. ಇನ್ನು, ಜನರಲ್ಲಿ ಉತ್ಸಾಹ ಹೇಗೆ ತಾನೇ ಬಂದೀತು” ಎಂದಿದೆ

ಆಡಿಯೋ ಟೇಪ್‌ ತಿರುಚಿದ್ದಲ್ಲ: ರಾಹುಲ್‌
“ರಫೇಲ್‌ ಒಪ್ಪಂದಕ್ಕೆ ಸಂಬಂಧಪಟ್ಟ ಕೆಲ ಮಹತ್ವದ ಕಡತಗಳ ಬಗ್ಗೆ ಬಹಿರಂಗಗೊಂಡಿದ್ದ ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ಗೋವಾ ಸಚಿವ ವಿಶ್ವಜಿತ್‌ ರಾಣೆ ಅವರದ್ದೇ ಆಗಿದ್ದು, ಇದು ಗೋವಾ ಮುಖ್ಯಮಂತ್ರಿ ಪಾರೀಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಹಿಡಿತ ಸಾಧಿಸಿರುವುದನ್ನು ಸಾಬೀತುಪಡಿಸುತ್ತದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಜತೆಗೆ, “ಆಡಿಯೋ ಕ್ಲಿಪ್‌ ಬಹಿರಂಗವಾಗಿ 30 ದಿನ ಕಳೆದಿದ್ದರೂ ಈವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿಲ್ಲ’ ಎಂದಿದ್ದಾರೆ. ಇತ್ತೀಚೆಗೆ, ಅಜ್ಞಾತ ವ್ಯಕ್ತಿಯೊಂದಿಗಿನ ಫೋನ್‌ ಸಂಭಾಷಣೆಯಲ್ಲಿ ಗೋವಾದ ಸಚಿವ ವಿಶ್ವಜಿತ್‌ ರಾಣೆ ಅವರು, ರಫೇಲ್‌ ಒಪ್ಪಂದ ಕುರಿತ ಕೆಲ ಮಹತ್ವದ ಕಡತಗಳು ತಮ್ಮ ಭದ್ರತೆಯಲ್ಲಿ ಇರುವುದಾಗಿ ಪಾರೀಕರ್‌ ತಿಳಿಸಿರುವುದಾಗಿ ಹೇಳಿದ್ದರು. ಈ ಆಡಿಯೋ ಕ್ಲಿಪ್‌ ಬಹಿರಂಗವಾಗುತ್ತಲೇ ಈ ಧ್ವನಿ ತಮ್ಮದಲ್ಲ ಎಂದು ರಾಣೆ ತಿಳಿಸಿದ್ದರು.

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.