ವಿಶ್ವದ ಅತೀ ಉದ್ದದ 36,000 ಕೋಟಿ ರೂ ಗಂಗಾ ಎಕ್ಸ್ಪ್ರೆಸ್ ವೇ ಯೋಜನೆ
Team Udayavani, Jan 29, 2019, 10:13 AM IST
ಪ್ರಯಾಗ್ರಾಜ್, ಉತ್ತರ ಪ್ರದೇಶ : ಪ್ರಯಾಗ್ರಾಜ್ ಅನ್ನು ಮೀರತ್ ಜತೆ ಜೋಡಿಸುವ ವಿಶ್ವದ ಅತೀ ಉದ್ದದ 600 ಕಿ.ಮೀ. ಗಂಗಾ ಎಕ್ಸ್ಪ್ರೆಸ್ ವೇ ನಿರ್ಮಾಣ ಯೋಜನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದು ಇಲ್ಲಿ ಕುಂಭಮೇಳದ ಸಂದರ್ಭದಲ್ಲಿ ನಡಸಿರುವ ಪ್ರಪ್ರಥಮ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದರು.
ಸಂಪುಟ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಆದಿತ್ಯನಾಥ್, ವಿಶ್ವದ ಅತೀ ಉದ್ದದ 600 ಕಿ.ಮೀ. ನ ಪ್ರಸ್ತಾವಿತ ಗಂಗಾ ಎಕ್ಸ್ಪ್ರೆಸ್ ವೇ ಯೋಜನೆ ಪ್ರಯಾಗ್ರಾಜ್ ಅನ್ನು ಪಶ್ಚಿಮ ಉತ್ತರ ಪ್ರದೇಶದೊಂದಿಗೆ ಜೋಡಿಸುತ್ತದೆ ಎಂದು ಹೇಳಿದರು.
ಮಹತ್ವಾಕಾಂಕ್ಷೆಯ ಪ್ರಸ್ತಾವಿತ ಗಂಗಾ ಎಕ್ಸ್ಪ್ರೆಸ್ ವೇ ಯನ್ನು 6,550 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುವುದು; ಇದರ ಅಂದಾಜು ವೆಚ್ಚ 36,000 ಕೋಟಿ ರೂ. ಇರುವುದು. ಆರಂಭದಲ್ಲಿ ಇದನ್ನು ಚತುಷ್ಪಥವಾಗಿ ನಿರ್ಮಿಸಲಾಗುವುದು ಮತ್ತು ಅನಂತರ ಅದನ್ನು ಷಟ್ಪಥಕ್ಕೆ ವಿಸ್ತರಿಸಲಾಗುವುದು ಎಂದು ಸಿಎಂ ಆದಿತ್ಯನಾಥ್ ಹೇಳಿದರು.
ಗಂಗಾ ಎಕ್ಸ್ಪ್ರೆಸ್ ವೇ ಹಾದು ಹೋಗುವ ಸ್ಥಳಗಳೆಂದರೆ ಮೀರತ್, ಆಮ್ರೋಹಾ, ಬುಲಂದ್ಶಹರ್, ಬುಡಾವೂ, ಶಹಜಹಾನ್ಪುರ, ಕನೋಜ್, ಉನ್ನಾವೋ, ರಾಯ್ಬರೇಲಿ, ಪ್ರತಾಪ್ಗ್ಢ. ಅಂತಿಮವಾಗಿ ಇದು ಪ್ರಯಾಗ್ರಾಜ್ ತಲುಪುವುದು ಎಂದು ಸಿಎಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.