ಮುಂಬಯಿ ಶೇರು 64 ಅಂಕ ಕುಸಿತ, ನಿಫ್ಟಿ 10,652 ಮಟ್ಟಕ್ಕೆ
Team Udayavani, Jan 29, 2019, 11:13 AM IST
ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ವಹಿವಾಟನ್ನು 64.20 ಅಂಕಗಳ ನಷ್ಟದೊಂದಿಗೆ 35,592.50 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.35 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,652.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಚೀನ – ಅಮೆರಿಕ ವಾಣಿಜ್ಯ ಸುಂಕ ಬಿಕ್ಕಟ್ಟು ಕೊನೆಗೊಳ್ಳುವ ಲಕ್ಷಣ ತೋರಿಬಾರದ ಕಾರಣಕ್ಕೆ ಜಾಗತಿಕ ಶೇರು ಪೇಟೆಗಳು ಹಿನ್ನಡೆ ಕಂಡದ್ದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಕೂಡ ಇಂದು ನಷ್ಟಕ್ಕೆ ಗುರಿಯಾಯಿತು. ಆದರೆ ಬೆಳಗ್ಗೆ 368 ಅಂಕಗಳ ನಷ್ಟವನ್ನು ಕಂಡಿದ್ದ ಸೆನ್ಸೆಕ್ಸ್ ಅನಂತರ ನಿಧಾನಕ್ಕೆ ಚೇತರಿಸಿಕೊಂಡು ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಂಡದ್ದೇ ಒಂದು ಸಾಧನೆ ಎನಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,660 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,133 ಶೇರುಗಳು ಮುನ್ನಡೆ ಸಾಧಿಸಿದವು; 1,383 ಶೇರುಗಳು ಹಿನ್ನಡೆಗೆ ಗುರಿಯಾದವು; 144 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
Road Mishaps: ಬೆಂಗಳೂರಿನಲ್ಲಿ ಬೈಕ್ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು
Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್ಗೆ ದಂಡ
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
Udupi: “ವಕ್ಫ್ ‘ ಸಮಸ್ಯೆ ಶೀರ್ಘ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.