ಮಂಗನ ಕಾಯಿಲೆ ತಡೆಗೆ ಬಂತು ಹೊಸ ಮದ್ದು! 

Team Udayavani, Jan 30, 2019, 12:30 AM IST

e-18.jpg

ಶಿವಮೊಗ್ಗ: ಮಲೆನಾಡನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಹಾಗೂ ಕರಾವಳಿಯ ಕೆಲ ಭಾಗಗಳಲ್ಲಿ ಆತಂಕ ಸೃಷ್ಟಿಸಿರುವ ಮಂಗನ ಕಾಯಿಲೆ ತಡೆಗೆ ಹೊಸ ಔಷಧವೊಂದು ಸಿದ್ಧವಾಗಿದೆ. ಕಾಯಿಲೆ ಹರಡೋದನ್ನು ತಡೆಯಲು ಮದ್ದು ಕಂಡು ಹಿಡಿಯುವಲ್ಲಿ ಯುವಕನೊಬ್ಬ ಯಶಸ್ವಿಯಾಗಿದ್ದು, ಆಯುಷ್‌ ಇಲಾಖೆ ಪ್ರಮಾಣ ಪತ್ರ ದೊರೆತರೆ ಹೊಸ ಮದ್ದು ಜನರಿಗೆ ಸಿಗುವ ಕಾಲ ದೂರವಿಲ್ಲ.
ಮಲೆನಾಡಿನ ಬಹುಮುಖ್ಯ ಬೆಳೆಯಾದ ಅಡಕೆಯಿಂದ ಚಹಾಪುಡಿ ಸೇರಿ ಹಲವು ಹೊಸ ವಸ್ತುಗಳನ್ನು ಕಂಡುಹಿಡಿದು ಸಫಲರಾಗಿರುವ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಿವೇದನ್‌ ನೆಂಪೆ ಈಗ ಮಂಗನಕಾಯಿಲೆ ತಡೆಗೆ ಔಷಧ ಕಂಡುಹಿಡಿದಿದ್ದಾರೆ.

ಉಣ್ಣೆ ಕಡಿತಕ್ಕೆ ತಡೆ: ಈ ಕಾಯಿಲೆ ಉಣ್ಣೆ (ಉಣುಗು) ಕಚ್ಚುವುದರಿಂದ ಹರಡಲಿದ್ದು, ಮನುಷ್ಯನಿಗೆ ಉಣ್ಣೆ ಕಚ್ಚುವುದನ್ನು ತಡೆದರೆ ರೋಗ ಹರಡಲು ಸಾಧ್ಯವೇ ಇಲ್ಲ. ಉಣ್ಣೆ ಕಚ್ಚದಂತೆ ತಡೆಯಲು ಈಗಾಗಲೇ ಆರೋಗ್ಯ ಇಲಾಖೆಯಿಂದ ಡಿಎಂಪಿ ಎಣ್ಣೆ 
ಕೊಡಲಾಗುತ್ತಿದೆ. ಆದರೆ ಇದರ ಲಭ್ಯತೆ ಹಾಗೂ ಪರಿಣಾಮಗಳು ವ್ಯತಿರಿಕ್ತವಾಗಿರುವುದರಿಂದ ಬಳಕೆ ಪ್ರಮಾಣ ಕಡಿಮೆ. ಅನಿವಾರ್ಯವಾಗಿ ಬಳಸಿದರೂ ಚರ್ಮದ ಸಮಸ್ಯೆ, ಇತರೆ ವ್ಯಾಧಿಗಳು ಕಾಣಿಸಿಕೊಳ್ಳುವುದರಿಂದ ಜನ ಭಯದಿಂದಲೇ ಬಳಸುತ್ತಾರೆ. ಇದನ್ನು ಅರಿತ ಯುವಕ ಗಿಡಮೂಲಿಕೆಗಳಿಂದ ಔಷಧ (ಆಯಿಂಟ್‌ಮೆಂಟ್‌) ತಯಾರಿಸಿ ಅದನ್ನು ಬಳಸಿ ಯಶಸ್ವಿಯಾಗಿದ್ದಾನೆ.

ಏನಿದು ಮದ್ದು ?: ಥೈಮೋಕ್ವಿನನ್‌(thymoquinone) ಎಂಬ ಔಷಧಿ ಉಣ್ಣೆಯನ್ನು ಹತ್ತಿರಕ್ಕೆ ಬರದಂತೆ ತಡೆಯಲಿದೆ. ಈ ಥೈಮೋಕ್ವಿನನ್‌ ಎಂಬ ಔಷಧಿ ಮಲೆನಾಡು ಭಾಗದಲ್ಲಿ ಸಿಗುವ ಕಪ್ಪು ಜೀರಿಗೆ ಸಂಸ್ಕರಿಸಿದರೆ ಸಿಗಲಿದೆ. ಇದರ ಬಗ್ಗೆ ಕಾಲೇಜು
ದಿನಗಳಲ್ಲೇ ಸಂಶೋಧನೆ ನಡೆಸಿದ್ದ ನಿವೇದನ್‌ ಈಬಾರಿ ಮಹಾಮಾರಿ ಮಂಗನಕಾಯಿಲೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಮತ್ತೆ ಪರೀಕ್ಷೆಗಿಳಿದು ಪ್ರಾಥಮಿಕ ಹಂತದಲ್ಲಿ ಪಾಸಾಗಿದ್ದಾನೆ. ಕಪ್ಪು ಜೀರಿಗೆ citronella (ಥೈಮೋಕ್ವಿನನ್‌) ಜತೆ ಮಾಮೂಲಿ ಜೀರಿಗೆಯನ್ನು
ಸಂಸ್ಕರಿಸಿ ಇದಕ್ಕೆ ಬಳಸಲಾಗುತ್ತಿದೆ. ಜೆಲ್‌ ರೂಪದಲ್ಲಿ ಇರುವ ಅದನ್ನು ಮೈ, ಕೈಗೆ ಸವರಿಕೊಳ್ಳಬಹುದಾಗಿದೆ. 

ಸೊಳ್ಳೆಗೂ ಮದ್ದು: ಸರಕಾರಿ ಆಸ್ಪತ್ರೆಯಲ್ಲಿ ಕೊಡುತ್ತಿರುವ ಡಿಎಂಪಿ ಆಯಿಲ್‌ ಮೂಲತಃ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಬಳಕೆಯಾಗುತ್ತಿತ್ತು. ಇದನ್ನು ಉಣ್ಣೆಗಳ ನಿಯಂತ್ರಣಕ್ಕೂ ಬಳಸಲಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯುವಕ ಉಣ್ಣೆ ಜತೆ
ಸೊಳ್ಳೆಗಳನ್ನೂ ನಿಯಂತ್ರಿಸಲು ಅದಕ್ಕೆ ಸಿಟ್ರೋನೆಲ್ಲ (ಸೊಳ್ಳೆಗಳನ್ನು ದೂರವಿಡುವ ಎಣ್ಣೆ) ಮಿಕ್ಸ್‌ ಮಾಡಿದ್ದಾನೆ. ಸಿಟ್ರೋನೆಲ್ಲ ಎಣ್ಣೆಯು ನೈಸರ್ಗಿಕವಾಗಿ ಸಿಗುವ ಹುಲ್ಲೆಣ್ಣೆಯಿಂದ ಸಂಸ್ಕರಿತವಾದದ್ದು.

ಸಂಶೋಧನೆಯಲ್ಲಿ ಯಶಸ್ವಿ: ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ನಿವೇದನ್‌ ನೆಂಪೆ ಕಾಲೇಜು ದಿನಗಳಲ್ಲಿ ಮಲೆನಾಡನ್ನು ಬಾ ಧಿಸುತ್ತಿರುವ ಮಂಗನ ಕಾಯಿಲೆ, ಹಂದಿಗೋಡು ಕಾಯಿಲೆ ಬಗ್ಗೆ ಸಂಶೋಧನೆ ಕೈಗೊಂಡು ಸ್ವಲ್ಪಮಟ್ಟಿನ ಯಶಸ್ಸು ಕಂಡಿದ್ದರು. ಈ ವರ್ಷ ಹಳೆ ಸಂಶೋಧನೆಗಳಿಗೆ ಮರುಚಾಲನೆ ನೀಡಿ ಯಶಸ್ಸು ಕಂಡಿದ್ದಾರೆ. ಮನೆಯ ಹಿರಿಯರು ಹೇಳುತ್ತಿದ್ದ ವಿಷಯಗಳೇ ಇವರ ಸಂಶೋಧನೆಗೆ ಸ್ಫೂರ್ತಿಯಾಗಿವೆ. ಅಲ್ಲದೇ ಥೈಮೋಕ್ವಿನನ್‌ ಔಷಧದ ಬಗ್ಗೆ ಈಗಾಗಲೇ ಸಾವಿರಾರು ಸಂಶೋಧನೆಗಳಾಗಿವೆ. ಇದನ್ನು ನೇರವಾಗಿ ತಿನ್ನಬಹುದು. ಮುಖಕ್ಕೂ ಹಚ್ಚಬಹುದು ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುತ್ತಾರೆ ನಿವೇದನ್‌.

ಮಲೆನಾಡಿನ ಕೆಲ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಬಗ್ಗೆ ಹೆಚ್ಚಿನ ಸಂಶೋಧನೆಗಳಾಗಿಲ್ಲ. ವೈರಸ್‌ ವಿರುದಟಛಿ ಔಷಧಿ ಕಂಡುಹಿಡಿಯುವಷ್ಟು ನಮ್ಮಲ್ಲಿ ಪರಿಕರಗಳಿಲ್ಲ. ಉಣ್ಣೆ ಮೂಲಕ ಹರಡುವ ಕಾಯಿಲೆ ಆಗಿರುವುದರಿಂದ ಅದು ಕಡಿಯದಂತೆ ಮಾಡಲು ಔಷಧ ಕಂಡುಹಿಡಿಯಲಾಗಿದೆ. ಆಯುಷ್‌ ಇಲಾಖೆ ಅನುಮತಿ ಕೊಟ್ಟರೆ ಉಚಿತವಾಗಿ ವಿತರಿಸಲಾಗುವುದು.
● ನಿವೇದನ್‌ ನೆಂಪೆ, ಯುವ ವಿಜ್ಞಾನಿ

● ಶರತ್‌ ಭದ್ರಾವತಿ

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

15-dk

Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ

14-

Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.