ಮಂಗಳೂರಿನಿಂದ  ದಿಲ್ಲಿಯವರೆಗೆ ಜಾರ್ಜ್‌ ಪಯಣ


Team Udayavani, Jan 30, 2019, 12:50 AM IST

payana.jpg

ಜಾರ್ಜ್‌ಗೆ ಹೆಸರು ತಂದುಕೊಟ್ಟದ್ದು 1974ರ ರೈಲ್ವೆ ಮುಷ್ಕರ, 1976ರಲ್ಲಿ ಕೋಲ್ಕತಾದಲ್ಲಿ ಬಂಧನಕ್ಕೆ ಒಳಗಾಗಿದ್ದ ವೇಳೆ ಸಂಕೊಲೆಗಳಿಂದ ಕಟ್ಟಿಹಾಕಲಾಗಿದ್ದ ಕೈಗಳನ್ನು ಎತ್ತಿ ಹಿಡಿದ ಫೋಟೋ ಈ ದಿನಗಳಿಗೂ ಜನಪ್ರಿಯ. ಭೂಗತರಾಗಿ ನಡೆಸಿದ ಹೋರಾಟದ ಕ್ರಮಗಳು ಇನ್ನೂ ರಹಸ್ಯವಾಗಿಯೇ ಉಳಿದು ಕೊಂಡಿವೆ ಎನ್ನುವುದು ಸತ್ಯ

ಇದು ರಾಷ್ಟ್ರ ಕಂಡ ಮಹಾನ್‌ ನಾಯಕ ಜಾರ್ಜ್‌ ಫೆರ್ನಾಂಡಿಸ್‌ ಹೇಳಿದ್ದ ಮಾತುಗಳು. ದೇಶದ ರಕ್ಷಣಾ ಸಚಿವ ಸ್ಥಾನ ದಂಥ ಮಹತ್ವದ ಹುದ್ದೆಯನ್ನು ಏರಿದ್ದರೂ, ಅವರು ನಿರ್ವಹಿಸಿದ ಜೀವನ ಮಾತ್ರ ಸರಳ ಮತ್ತು  ಸುಂದರ ಎಂದರೆ ತಪ್ಪಾಗಲಾರದು. ಮಂಗಳೂರಿನ ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಲ್ಲಿ ಜನಿಸಿದ ಅವರು, ಮುಂಬೈ ನಲ್ಲಿ ಅಲ್ಲಿನ ವ್ಯವಸ್ಥೆಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತದ್ದು ಮತ್ತು ಸಾವಿರಾರು ಮಂದಿ ಕಾರ್ಮಿಕರಿಗೆ ಸರಿಯಾದ ರೀತಿಯ ಭದ್ರತೆ, ನೆಮ್ಮದಿಯ ಬದುಕು ನೀಡಲು ಅವರು ನಡೆಸಿದ ಹೋರಾಟ ಅವಿಸ್ಮರಣೀಯ.

ಅವರು ಕೃಷಿಕ, ಕಾರ್ಮಿಕ ಸಂಘಟನೆ ಗಳ ಪರ ಹೋರಾಟಗಾರ, ಪತ್ರಕರ್ತ, ರಾಜಕಾರಣಿ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಎಂದರೆ ಏನು ಎಂಬುದನ್ನು ಸ್ವಪ್ರಯತ್ನದಿಂದ ತಿಳಿದುಕೊಂಡು ಮಾಗಿದ ವ್ಯಕ್ತಿತ್ವ ಅವರದ್ದು. 

ಜಾನ್‌ ಜೋಸೆಫ್ ಫೆರ್ನಾಂಡಿಸ್‌ ಮತ್ತು ಅಲೀಸ್‌ ಮಾರ್ತಾ ಫೆರ್ನಾಂಡಿಸ್‌ ದಂಪತಿಯ ಹಿರಿಯ ಪುತ್ರನಾಗಿ 1930 ಜೂ.3ರಂದು ಜನಿಸಿದ್ದರು. ಅವರಿಗೆ ಅದೇ ಹೆಸರು ಇರಿಸಲು ಕಾರಣ ಏನು ಎಂಬುದೂ ಅತ್ಯಂತ ಕುತೂಹಲಕಾರಿ ಯಾಗಿದೆ. ಕಿಂಗ್‌ ಐದನೇ ಜಾರ್ಜ್‌ ಹುಟ್ಟಿದ್ದೂ ಅದೇ ದಿನ ಮತ್ತು ಅವರ ತಾಯಿ ಕಿಂಗ್‌ ಐದನೇ ಜಾರ್ಜ್‌ರ ತತ್ತಾ$Ìದರ್ಶಗಳನ್ನು ಗೌರವಿಸುತ್ತಿದ್ದರು. ಹೀಗಾಗಿ ದಂಪತಿ ಹಿರಿಯ ಪುತ್ರನಿಗೆ ಜಾರ್ಜ್‌ ಫೆರ್ನಾಂಡಿಸ್‌ ಎಂದು ಹೆಸರು ಇರಿಸಲು ತೀರ್ಮಾನಿಸಿದ್ದರು. 

ಜಾರ್ಜ್‌ ಚೆನ್ನಾಗಿ ಕಲಿತು ನ್ಯಾಯವಾದಿಯಾಗಬೇಕು ಎನ್ನುವುದು ತಂದೆ ಜಾನ್‌ ಜೋಸೆಫ್ ಫೆರ್ನಾಂಡಿಸ್‌ರ ಆಶಯವಾಗಿತ್ತು. ಅದನ್ನು ಜಾರ್ಜ್‌ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ರೋಮನ್‌ ಕ್ಯಾಥೊಲಿಕ್‌ ಪಂಗಡಕ್ಕೆ ಸೇರಿದವರಾಗಿರುವ ಜಾರ್ಜ್‌ ಧರ್ಮಗುರುವಾಗಬೇಕು ಎಂದು ಕುಟುಂಬ ಸದಸ್ಯರು ಒತ್ತಾಸೆ ವ್ಯಕ್ತಪಡಿಸಿದ್ದರಿಂದ 1946ರಲ್ಲಿ ಬೆಂಗಳೂರಿನಲ್ಲಿರುವ ಸೈಂಟ್‌ ಪೀಟರ್ಸ್‌’ ಸೆಮಿನರಿಯಲ್ಲಿ ಸೇರಿಕೊಂಡರು. ಮೂರು ವರ್ಷಗಳ ಕಾಲ ಅಲ್ಲಿ ಅಧ್ಯಯನ ನಡೆಸಿದ ಬಳಿಕ ತಾತ್ವಿಕ ಭಿನ್ನಾಭಿಪ್ರಾಯಗಳಿಂದ ಹೊರ ಬಂದರು.

ಚರ್ಚ್‌ನಲ್ಲಿರುವ ರೆಕ್ಟರ್‌ಗಳು ಸೆಮಿನರಿಯಲ್ಲಿರುವವರಿಗಿಂತ  ಉತ್ತಮ ರೀತಿಯ ಆಹಾರ ಸೇವಿಸುತ್ತಿದ್ದರು. ಜತೆಗೆ ಅವರು ಉನ್ನತ ವ್ಯವಸ್ಥೆಗಳನ್ನು ತಮಗಾಗಿ ರೂಪಿಸಿಕೊಂಡಿದ್ದರು. ಇಂಥ ಭೇದ ಭಾವದ ವಾತಾವರಣದಿಂದ ಬೇಸತ್ತು ಜಾರ್ಜ್‌ ಅಲ್ಲಿಂದ ಹೊರಟರು. 

ಬೆಂಗಳೂರಿನಲ್ಲಿ ಕಲಿಯುವಾಗ ಉಂಟಾದ ಅನುಭವವೇ ಅವರನ್ನು ಮುಂಬೈಗೆ ಕರೆ ತಂದಿತು. ಅಲ್ಲಿ ಹೊಟೇಲ್‌,  ರೆಸ್ಟಾರೆಂಟ್‌, ಸಾರಿಗೆ ಕ್ಷೇತ್ರದಲ್ಲಿನ ಕಾರ್ಮಿಕರನ್ನು ಒಗ್ಗೂಡಿಸಿ ಅವರಿಗಾಗಿ ಹೋರಾಟ ನಡೆಸಲು ಮುಂದಾಗಿ ಯಶಸ್ವಿಯೂ ಆದರು.

1949ರಲ್ಲಿ ಜಾರ್ಜ್‌ ಫೆರ್ನಾಂಡಿಸ್‌ ಮುಂಬೈ ಕೆಲಸಕ್ಕಾಗಿ ಬಂದರು. ಪತ್ರಿಕೆಯೊಂದರಲ್ಲಿ ಕರಡು ತಿದ್ದುವ ಕೆಲಸ ಅವರಿಗೆ ಸಿಕ್ಕಿತು. ಮುಂಬೈನ ಚೌಪಟ್ಟಿ ಯಲ್ಲಿ ನಿದ್ರಿಸುತ್ತಿದ್ದಾಗ ಪೊಲೀಸರು ಬಂದು ಎಬ್ಬಿಸಿ ಕಳುಹಿಸಿದ್ದುಂಟು. ಅವರಿಗೆ ಮಂಗಳೂರಿನವರೇ ಆದ ಪ್ಲಾಸಿಡ್‌ ಡಿ’ ಮೆಲ್ಲೋ ಮತ್ತು ಸಮಾಜವಾದಿ ರಾಮ್‌ ಮನೋಹರ್‌ ಲೋಹಿ ಯಾರ ಪರಿಚಯವಾಯಿತು. ಬಾಂಬೆ ಮುನಿಸಿಪಲ್‌ ಕಾರ್ಪೊರೇಷನ್‌ನ ಸದಸ್ಯರಾಗಿ 1961ರಿಂದ 1968ರ ವರೆಗೆ ಸೇವೆ ಸಲ್ಲಿಸಿದ್ದರು. 

ಅವರಿಗೆ ಹೆಸರು ತಂದುಕೊಟ್ಟದ್ದು 1974ರ ರೈಲ್ವೇ ಮುಷ್ಕರ. ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಮತ್ತು ದೇಶದಲ್ಲಿಯೇ ಆ ಕಾಲಕ್ಕೆ ಭಾರಿ ಎಂದು ಜನಪ್ರಿಯತೆ ಪಡೆದಿದ್ದ ಪ್ರತಿಭಟನೆ, ಮುಷ್ಕರ ಅದಾಗಿತ್ತು. ರೈಲ್ವೆಯಲ್ಲಿನ ಕೆಲಸಗಾರರಿಗೆ ಸರಿಯಾದ ರೀತಿಯಲ್ಲಿ ಸಂಬಳ ಪಾವತಿಯಾಗುತ್ತಿಲ್ಲ ಎಂಬ ಕಾರಣಕ್ಕಾಗಿ 1974 ಮೇ 8ರಿಂದ 1974 ಮೇ 27ರ ವರೆಗೆ ಮುಷ್ಕರ ನಡೆಸಲಾಯಿತು. ದೇಶಾದ್ಯಂತ ಅವರ ಪರವಾಗಿ ಪ್ರತಿಭಟನೆಗಳು ನಡೆದವು. 

ಈ ಪ್ರತಿಭಟನೆಯೇ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲು ಕಾರಣವಾಯಿತು. ಮುಂದಿನ 1 ವರ್ಷದ ಅವಧಿಯಲ್ಲಿ ಜಾರ್ಜ್‌ ಭೂಗತರಾಗಿಯೇ ಇಂದಿರಾ ಗಾಂಧಿ ಸರಕಾರದ ವಿರುದ್ಧ ಹೋರಾಟ ನಡೆಸಿದ್ದರು. ಅವರನ್ನು 1976 ಜೂ.10ರಂದು ಕೋಲ್ಕತಾದಲ್ಲಿ ಬಂಧಿಸಲಾಯಿತು. ಕೈಗಳಿಗೆ ಕಟ್ಟಿದ್ದ ಸಂಕೊಲೆಯನ್ನು ಎತ್ತಿಹಿಡಿದ ಕಪ್ಪು ಬಿಳುಪಿನ ಫೋಟೋ ಈಗಲೂ ಇತಿಹಾಸದ ಪುಟಗಳಲ್ಲಿನ ಪ್ರಮುಖದ್ದಾಗಿ ದಾಖಲಾಗಿದೆ. ತುರ್ತು ಪರಿಸ್ಥಿತಿ ಹಿಂಪಡೆದ ಸಂದರ್ಭದಲ್ಲಿಯೇ 1977ರ ಜನವರಿಯಲ್ಲಿ ನಡೆದಿದ್ದ ಚುನಾವಣೆಯಲ್ಲಿ ಜೈಲಿಂದಲೇ ಸ್ಪರ್ಧಿಸಿ, ಮುಜಾಫ‌ರ್‌ಪುರದಿಂದ ಗೆದ್ದಿದ್ದರು. ಅನಂತರ ಮೊರಾರ್ಜಿ ದೇಸಾಯಿ ನೇತೃತ್ವದ ಸರಕಾರದಲ್ಲಿ ಸಚಿವರೂ ಆಗಿದ್ದರು. 

ಟಾಪ್ ನ್ಯೂಸ್

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hrb

Hebri; ಬೈಕ್‌ಗೆ ಕಾರು ಢಿಕ್ಕಿ: ಯುವಕ ಸಾ*ವು

police

Mudbidri; ಎಂಟು ತಿಂಗಳ ಹಿಂದೆ ಬ್ಯಾಟರಿ ಕಳವು: ಇಬ್ಬರು ಆರೋಪಿಗಳ ಬಂಧನ

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.