ಕರಾಳ ಪರಿಸ್ಥಿತಿಯಲ್ಲಿ ಕುರ್ಕಿಯಲ್ಲಿದ್ದ ಜಾರ್ಜ್‌


Team Udayavani, Jan 30, 2019, 5:20 AM IST

uvsam-3.jpg

ದಾವಣಗೆರೆ: ಧೀರ್ಘ‌ ಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ನವದೆಹಲಿಯಲ್ಲಿ ನಿಧನರಾದ ಕೇಂದ್ರದ ಮಾಜಿ ಸಚಿವ ಜಾರ್ಜ್‌ ಫರ್ನಾಂಡಿಸ್‌ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರ ಪರಮಾಪ್ತ ರಾಜ್ಯಸಭಾ ಮಾಜಿ ಸದಸ್ಯ ದಿ| ಕೆ.ಜಿ. ಮಹೇಶ್ವರಪ್ಪನವರ ಕುರ್ಕಿ ಗ್ರಾಮದ ಮನೆಯಲ್ಲಿ ಕೆಲ ಕಾಲ ಇದ್ದರು!.

ಮಾಜಿ ಪ್ರಧಾನಿ ಇಂದಿರಾಗಾಂಧಿಯವರು 1975ರಲ್ಲಿ ಘೋಷಿಸಿದ್ದ ತುರ್ತು ಪರಿಸ್ಥಿತಿ ವಿರುದ್ಧ ಜಾರ್ಜ್‌ ಫರ್ನಾಂಡಿಸ್‌ ಭೂಗತರಾಗಿ ಪ್ರಬಲ ಹೋರಾಟ ನಡೆಸಿದ್ದರು. ಅದರ ಭಾಗವಾಗಿ ಕೆ.ಜಿ. ಮಹೇಶ್ವರಪ್ಪ ಮನೆಯಲ್ಲಿ ಕೆಲ ದಿನಗಳ ಕಾಲ ತಂಗಿದ್ದರು. ಅವರೊಂದಿಗೆ ಕೇಂದ್ರದ ಮಾಜಿ ಸಚಿವ ದಿ| ಮಧು ದಂಡವತೆ ಮತ್ತು ಕಾರ್ಮಿಕ ಮುಖಂಡ ಮಧು ಲಿಮೆಯೆ ಇತರರು ಸಹ ಇದ್ದರು.

ಕುರ್ಕಿಯಲ್ಲಿದ್ದ ಸಂದರ್ಭದಲ್ಲಿ ಹೊಲ-ಗದ್ದೆಗೆ ಹೋಗಿ ಬರುತ್ತಿದ್ದ ಜಾರ್ಜ್‌ ಫರ್ನಾಂಡೀಸ್‌ ತಮಗೆ ಆಶ್ರಯ ನೀಡಿದ್ದ ಕುಟುಂಬದ ಸದಸ್ಯರೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದರು. ದಾವಣಗೆರೆಗೆ ಬಂದ ಸಂದರ್ಭದಲ್ಲಿ ಆ ಕುಟುಂಬದ ಸದಸ್ಯರೊಟ್ಟಿಗೆ ಮುಕ್ತವಾಗಿ ಮಾತುಕತೆ ನಡೆಸುತ್ತಿದ್ದರು.

ದಾವಣಗೆರೆಯೊಂದಿಗೆ ನಂಟು: ದಾವಣಗೆರೆಯೊಂದಿಗೆ ಬಹಳ ನಂಟು ಹೊಂದಿದ್ದ ಜಾರ್ಜ್‌ ಫರ್ನಾಂಡಿಸ್‌ ತುರ್ತು ಸಂದರ್ಭದಲ್ಲಿ ಮಾತ್ರವಲ್ಲ ಅನೇಕ ಸಲ ದಾವಣಗೆರೆಗೆ ಆಗಮಿಸಿದ್ದರು. ಜಿಲ್ಲಾ ಪಂಚಾಯತ್‌ ಆವರಣದಲ್ಲಿ 2008 ಫೆ. 6 ರ ಬುಧವಾರ ನಡೆದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ರವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದೇ ದಾವಣಗೆರೆಯ ಅವರ ಕೊನೆಯ ಭೇಟಿ.

ಮಿಂಚಿನ ಭಾಷಣ: 2004 ರಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಈಗಿನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ದಾವಣಗೆರೆಗೆ ಆಗಮಿಸಿದ್ದರು. ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಚ್. ಆಂಜನೇಯ ಅವರ ಪರವಾಗಿ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಮಿಂಚಿನ ಭಾಷಣ ಮಾಡಿದ್ದರು. ಅಯೋಧ್ಯೆ ಹೋಟೆಲ್‌ನಲ್ಲಿ ತಂಗಿದ್ದ ಅವರು ಸುದ್ದಿಗೋಷ್ಠಿ ಸಹ ನಡೆಸಿದ್ದರು.

ಅವಘಡದಿಂದ ಪಾರು: ದಾವಣಗೆರೆಯಲ್ಲಿನ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಹಿಂದಿನ ದಿನ ಭರಮಸಾಗರದಲ್ಲಿ ಪ್ರಚಾರ ಸಭೆಗೆ ಹೆಲಿಕಾಪ್ಟರ್‌ನಲ್ಲಿ ತೆರಳುವಾಗ ಕೂದಲೆಳೆಯ ಅಂತರದಲ್ಲಿ ಅವಘಡದಿಂದ ಪಾರಾಗಿದ್ದರು ಎಂಬುದು ಗಮನಾರ್ಹ.

ಉತ್ತಮ ಒಡನಾಟ: ರಾಜ್ಯಸಭಾ ಮಾಜಿ ಸದಸ್ಯ ಕೆ.ಜಿ. ಮಹೇಶ್ವರಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ಜನತಾದಳದ ಮುಖಂಡ ಎಚ್.ಎಂ. ಸೋಮನಾಥಯ್ಯ, ಜೆ. ಸೋಮನಾಥ್‌ ಇತರರೊಂದಿಗೆ ಜಾರ್ಜ್‌ ಒಳ್ಳೆಯ ಒಡನಾಟ ಹೊಂದಿದ್ದರು.

ಜಾರ್ಜ್‌ ಫರ್ನಾಂಡಿಸ್‌, ಮಧು ದಂಡವತೆ ಕುರ್ಕಿಯ ನಮ್ಮ ಮನೆಗೆ ಒಟ್ಟು ಎರಡು ಬಾರಿ ಬಂದಿದ್ದರು. ಬಂದ ಸಂದರ್ಭದಲ್ಲಿ ಹೊಲ-ಗದ್ದೆ-ತೋಟ ಅಂತಾ ಹೋಗಿ ಬರುತ್ತಿದ್ದರು. ನಮ್ಮ ಕುಟುಂಬದವರೊಂದಿಗೆ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಅವರು ಬಹಳ ಸರಳ ರಾಜಕಾರಣಿ ಎಂದು ಕೆ.ಜಿ. ಮಹೇಶ್ವರಪ್ಪ ಅವರ ಅಣ್ಣನ ಮಗ ವೇದಮೂರ್ತಿ ಸ್ಮರಿಸಿದರು. ದೇಶದ ಬಹು ದೊಡ್ಡ ಕಾರ್ಮಿಕ ನಾಯಕ, ಜನತಾ ಪರಿವಾರದ ಮುಖಂಡರು, ರಕ್ಷಣಾ ಸಚಿವರಾಗಿದ್ದ ಸಂದರ್ಭದಲ್ಲೂ ತಮ್ಮ ಆತ್ಮೀಯರನ್ನು ಹೆಸರಿಡಿದು ಕರೆದು ಮಾತನಾಡಿಸುತ್ತಿದ್ದರು ಎಂದು ಎಚ್.ಎಂ. ಸೋಮನಾಥಯ್ಯ ಅವರ ಪುತ್ರ ಎಚ್.ಎಂ. ರುದ್ರಮುನಿಸ್ವಾಮಿ ಸ್ಮರಿಸುತ್ತಾರೆ.

ಅವರು (ಜಾರ್ಜ್‌ ಫರ್ನಾಂಡಿಸ್‌) ಭರಮಸಾಗರಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಆಗ ನಾನು ನಮ್ಮ ತಂದೆಯವರೊಂದಿಗೆ ಭರಮಸಾಗರಕ್ಕೆ ಹೋಗಿದ್ದೆ. ಅಷ್ಟು ಜನರ ಮಧ್ಯದಲ್ಲೂ ನಮ್ಮ ತಂದೆಯವರನ್ನು ಗುರುತಿಸಿ, ಹತ್ತಿರ ಕರೆದು ಮಾತನಾಡಿಸಿದ್ದರು. ಅಂತಹ ಸರಳ, ಒಳ್ಳೆಯ ವ್ಯಕ್ತಿ ಅವರು ಎಂದು ರುದ್ರಮುನಿಸ್ವಾಮಿ ಹೇಳುತ್ತಾರೆ. ಜಾರ್ಜ್‌ ಫರ್ನಾಂಡಿಸ್‌ ಅವರಿಗೆ ಶೇಂಗಾ ಚಟ್ನಿಪುಡಿ… ಎಂದರೆ ಪಂಚಪ್ರಾಣ. ಅವರು ದಾವಣಗೆರೆ ಬಂದಾಗ ನಮ್ಮ ಮನೆಯಿಂದ ಊಟ ತೆಗೆದುಕೊಂಡು ಹೋಗುವಾಗ ಶೇಂಗಾ ಚಟ್ನಿಪುಡಿ ಇರಲೇಬೇಕಿತ್ತು. ಶೇಂಗಾ ಚಟ್ನಿಪಡಿಯನ್ನು ಬಹಳ ಇಷ್ಟಪಡುತ್ತಿದ್ದರು ಎಂದು ಕಂಚೀಕೆರೆ ಕೊಟ್ರೇಶ್‌ ಸ್ಮರಿಸಿದರು.

ನೊಂದು ಮಾತನಾಡಿದ್ದರು….
2007ರ ಮೇ. 21 ರಂದು ದಾವಣಗೆರೆಗೆ ಆಗಮಿಸಿದ್ದ ಜಾರ್ಜ್‌ ಫರ್ನಾಂಡಿಸ್‌ ಕೆ.ಜಿ. ಮಹೇಶ್ವರಪ್ಪ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂದರ್ಭದಲ್ಲಿ, ಅವರ ವಿರುದ್ಧ ಕೇಳಿ ಬಂದಿದ್ದ ಶವಪೆಟ್ಟಿಗೆ ಹಗರಣದ ಬಗ್ಗೆ ಬಹಳ ನೊಂದುಕೊಂಡೇ ಮಾತನಾಡಿದ್ದರು. ಭಾರತ-ಪಾಕ್‌ ಸಂಬಂಧದ ಬಗ್ಗೆ ಹೇಳಿದ್ದರು. ಆಗಲೇ ಅವರಿಗೆ ಅಲ್ಜಮೇರಿಯ… ಇದ್ದ ಕಾರಣ ಪದೆ ಪದೇ ಹೇಳಿದ್ದ ವಿಚಾರ ಪ್ರಸ್ತಾಪಿಸುತ್ತಿದ್ದರು.

ಫ್ಲಾಷ್‌ ಬರೊಲ್ವ…
2004ರ ಲೋಕಸಭಾ ಚುನಾವಣಾ ಪ್ರಚಾರಕ್ಕೆಂದು ದಾವಣಗೆರೆಗೆ ಆಗಮಿಸಿದ್ದ ಜಾರ್ಜ್‌ ಫರ್ನಾಂಡಿಸ್‌(ಆಗ ರಕ್ಷಣಾ ಸಚಿವರು) ಅಯೋಧ್ಯೆ ಹೋಟೆಲ್‌ನಲ್ಲಿ ತಂಗಿದ್ದರು. ಸುದ್ದಿಗೋಷ್ಠಿಗೂ ಮುನ್ನ ಪತ್ರಕರ್ತರೊಬ್ಬರು ಡಿಜಿಟಲ್‌ ಕ್ಯಾಮೆರಾದಲ್ಲಿ ಫೋಟೋ ಸೆರೆ ಹಿಡಿಯುತ್ತಿದ್ದರು. ಫ್ಲಾಷ್‌ ಬರದೇ ಇರುವುದನ್ನು ಗಮನಿಸಿದ ಅವರು, ಯಾಕೆ ಫ್ಲಾಷ್‌ ಬರೊಲ್ವ… ಎಂದು ಆ ಪತ್ರಕರ್ತರನ್ನು ಕೇಳಿದ್ದರು ಮಾತ್ರವಲ್ಲ ಡಿಜಿಟಲ್‌ ಕ್ಯಾಮೆರಾದ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಹಿಂದಿನ ದಿನ ಭರಮಸಾಗರದಲ್ಲಿ ನಡೆದ ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಸಂಭವಿಸಬಹುದಾಗಿದ್ದ ಅವಘಡದಲ್ಲಿ ನೀವು ಪ್ರಾಣಾಪಾಯದಿಂದ ಪಾರಾಗಿದ್ದೀರಿ… ಎಂದು ಪತ್ರಕರ್ತರು ಹೇಳಿದಾಗ, ಹೌದಾ… ನನಗೆ ಗೊತ್ತೇ ಇಲ್ಲ… ಎಂದು ಅಚ್ಚರಿಯಿಂದ ಉದ್ಗರಿಸಿದ್ದರು.

ಕ್ಯೂ ನಿಲ್ಲಿಸಿದ್ದರು…
ದೆಹಲಿಯ ಆಸ್ಪತ್ರೆಯಲ್ಲಿ ತಮ್ಮ ಪರಮಾಪ್ತ ಕೆ.ಜಿ. ಮಹೇಶ್ವರಪ್ಪನವರಿಗೆ ಹೃದಯಕ್ಕೆ ಸಂಬಂಧಿತ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅಲ್ಲಿನ ವೈದ್ಯರು ರಕ್ತಕ್ಕಾಗಿ ಕೊಂಚ ಸತಾಯಿಸಿದ್ದರು. ಆಸ್ಪತ್ರೆಗೆ ಬಂದಿದ್ದ ಜಾರ್ಜ್‌ ಫರ್ನಾಂಡಿಸ್‌, ನಾಳೆ ಬೆಳಗ್ಗೆಯೇ ರಕ್ತದ ವ್ಯವಸ್ಥೆ ಮಾಡಿಸುತ್ತೇನೆ. ಮೊದಲು ಅವರಿಗೆ (ಕೆ.ಜಿ. ಮಹೇಶ್ವರಪ್ಪ) ಶಸ್ತ್ರಚಿಕಿತ್ಸೆ ಮಾಡುವಂತೆ ಹೇಳಿದ್ದರು. ಶಸ್ತ್ರಚಿಕಿತ್ಸೆ ನಡೆದ ಮರು ದಿನ ಬೆಳಗ್ಗೆಯೇ ರಕ್ತ ನೀಡಲು 50ಕ್ಕೂ ಹೆಚ್ಚು ಜನರನ್ನೂ ಕ್ಯೂನಲ್ಲಿ ನಿಲ್ಲಿಸಿದ್ದರು ಎಂದು ಕೆ.ಜಿ. ಮಹೇಶ್ವರಪ್ಪ ಅವರ ಪುತ್ರಿ ಉಷಾ ಸ್ಮರಿಸಿದರು.

ಟಾಪ್ ನ್ಯೂಸ್

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.