ಆದಿ ಹರಿಕೃಷ್ಣ ಹಾಡಿಗೆ “ಕಿಸ್’ ಕೊಟ್ಟ ಯಶ್
Team Udayavani, Jan 30, 2019, 5:57 AM IST
ಎ.ಪಿ.ಅರ್ಜುನ್ ನಿರ್ದೇಶನದ “ಕಿಸ್’ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಹಾಡುಗಳ ಮೂಲಕ ಒಂದಷ್ಟು ಗಮನಸೆಳೆದಿರುವ “ಕಿಸ್’, ಈಗ ಮತ್ತೂಂದು ಹಾಡಿನೊಂದಿಗೆ ಸುದ್ದಿ ಮಾಡಿದೆ. ಹೌದು, ಯಶ್ ಅವರು ಚಿತ್ರದ ಹಾಡನ್ನು ಕೇಳಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ನಿರ್ದೇಶಕ ಎ.ಪಿ.ಅರ್ಜುನ್ ಬರೆದ “ನೀನೆ ಮೊದಲು, ನೀನೆ ಕೊನೆ, ಯಾರೂ ಬೇಡ ನನಗೆ, ಉಸಿರು ಇರುವ ಕೊನೆಯವರೆಗೂ ಇರಲೇಬೇಕು ನನ್ನ ಜೊತೆಗೆ, ನನ್ನನ್ನು ಪ್ರೀತಿಸು ಒಂದು ಬಾರಿ, ನಿನ್ನೆಲ್ಲಾ ಪ್ರೀತಿಯ ನನಗೆ ತೋರಿ..’ ಎಂಬ ಹಾಡನ್ನು ಶ್ರೇಯಾ ಘೋಶಾಲ್ ಹಾಡಿದ್ದಾರೆ.
“ಕಿಸ್’ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದರೂ, ಈ ರೊಮ್ಯಾಂಟಿಕ್ ಮೆಲೋಡಿ ಹಾಡಿಗೆ ಮಾತ್ರ ವಿ.ಹರಿಕೃಷ್ಣ ಪುತ್ರ ಆದಿ ಹರಿಕೃಷ್ಣ ಸಂಗೀತ ನೀಡಿರುವುದು ವಿಶೇಷ. “ಹಾಡು ಬಿಡುಗಡೆ ಮಾಡಿರುವ ಯಶ್, “ಹಾಡು ಚೆನ್ನಾಗಿ ಮೂಡಿಬಂದಿದೆ.
ವಿ.ಹರಿಕೃಷ್ಣ ಇದುವರೆಗೆ ಒಳ್ಳೆಯ ಹಾಡು ಕಟ್ಟಿಕೊಟ್ಟಿದ್ದಾರ. ಅವರ ಪುತ್ರ ಆದಿ ಹರಿಕೃಷ್ಣ ಸಹ ಅವರಂತೆಯೇ ಕೆಲಸ ಮಾಡಿ ತೋರಿಸಿದ್ದಾರೆ. ನಿರ್ದೇಶಕ ಅರ್ಜುನ್ ಎಲ್ಲಾ ಚಿತ್ರಗಳಲ್ಲೂ ಒಳ್ಳೆಯ ಹಾಡುಗಳಿಗೆ ಜಾಗ ಕಲ್ಪಿಸಿಕೊಟ್ಟಿರುತ್ತಾರೆ. ಈ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದ್ದಾರೆ ಯಶ್.
ಅಂದಹಾಗೆ, ವಿ.ಹರಿಕೃಷ್ಣ ಅವರ ಪುತ್ರ ಆದಿಗೆ ಅವರಿಗೀಗ 17 ವರ್ಷ. ಅವರೇ “ಕಿಸ್’ ಚಿತ್ರದ ಈ ಹಾಡಿಗೆ ರಾಗ ಸಂಯೋಜಿಸಿದ್ದಲ್ಲದೆ, ಸ್ವತಃ ಶ್ರೇಯಾ ಘೋಶಾಲ್ ಬಳಿ ಹಾಡಿಸಿಕೊಂಡು ಬಂದಿದ್ದಾರೆ. ಅವರ ಹಾಡು ಕೇಳಿರುವ ಬಹುತೇಕರಿಂದ ಮೆಚ್ಚುಗೆಯೂ ಸಿಕ್ಕಿದೆ.
ಇನ್ನು ಈ ಹಾಡಿನ ಮತ್ತೂಂದು ವಿಶೇಷವೆಂದರೆ, ಏಳು ಪ್ರಮುಖ ಜಾಗದಲ್ಲಿ ಚಿತ್ರೀಕರಿಸಲಾಗಿದೆ. ತಾಜ್‌ಮಹಲ್, ಜೈಸಲ್ಮೇರ್, ಕಿಶನ್‌ಗಢ, ಕುದುರೆ ಮುಖ, ಕೆಮ್ಮಣ್ಣುಗುಂಡಿ, ಕೇರಳ ಹಾಗೂ ಮಲೆನಾಡ ಬೆಟ್ಟದ ತುದಿಯಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ವಿರಾಟ್ ಹೀರೋ. ಅವರಿಗೆ ಶ್ರೀಲೀಲಾ ನಾಯಕಿ. ರಾಷ್ಟ್ರಕೂಟ ಪಿಕ್ಚರ್ ಬ್ಯಾನರ್‌ನಡಿ ವಿ.ರವಿಕುಮಾರ್ ಚಿತ್ರವನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.