![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 30, 2019, 8:55 AM IST
ಬೆಂಗಳೂರು: ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಅವರ ಸ್ವ ಕ್ಷೇತ್ರವಾದ ಹಗರಿಬೊಮ್ಮನಹಳ್ಳಿಯಲ್ಲಿ ಆನಂದ್ ಸಿಂಗ್ ಅಭಿಮಾನಿ ಬಳಗದವರು ಕಛೇರಿ ನಿರ್ಮಿಸಿದ್ದರಿಂದ ಮುನಿಸಿಕೊಂಡಿದ್ದ ಶಾಸಕ ಭೀಮಾ ನಾಯ್ಕ್ ಅವರನ್ನು ಸಮಾಧಾನಪಡಿಸುವಲ್ಲಿ ಕೆ.ಪಿ.ಸಿ.ಸಿ. ಯಶಸ್ವಿಯಾಗಿದೆ.
ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗಿದ್ದು, ಇದರಂತೆ ಭೀಮಾನಾಯ್ಕ್ ಕ್ಷೇತ್ರದಲ್ಲಿದ್ದ ತಮ್ಮ ಅಭಿಮಾನಿ ಬಳಗದ ಕಛೇರಿಯನ್ನು ತೆರವುಗೊಳಿಸಲು ಆನಂದ್ ಸಿಂಗ್ ಅವರು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದ್ದು. ಈ ಬೆಳವಣಿಗೆಯಿಂದ ಸಚಿವ ಭೀಮಾ ನಾಯ್ಕ್ ಅವರ ಕೋಪವನ್ನು ಶಮನಗೊಳಿಸುವಲ್ಲಿ ದಿನೇಶ್ ಗುಂಡೂರಾವ್ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಶಾಸಕ ಆನಂದ್ ಸಿಂಗ್ ಹಾಗೂ ಶಾಸಕ ಗಣೇಶ್ ಅವರ ನಡುವಿನ ಪ್ರಕರಣ ಮಾತ್ರ ಬಗೆಹರಿಯದೆ ಹಾಗೇ ಉಳಿದಿದೆ.
You seem to have an Ad Blocker on.
To continue reading, please turn it off or whitelist Udayavani.