ಜನಿವಾರಧಾರಿ ರಾಹುಲ್ ಹಿಂದೂ ನಂಬಿಕೆ ದಾಳಿಗೆ ಆಸ್ಪದ ನೀಡುವುದೇಕೆ? BJP
Team Udayavani, Jan 30, 2019, 10:28 AM IST
ಹೊಸದಿಲ್ಲಿ : ಚುನಾವಣೆ ಬಂದಾಗ ರಣತಂತ್ರವಾಗಿ ಜನಿವಾರ ಧರಿಸಿಕೊಳ್ಳುವ ರಾಹುಲ್ ಗಾಂಧಿ, ವಿಶ್ವಾದ್ಯಂತದ ಕೋಟ್ಯಂತರ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಶಶಿ ತರೂರ್ ಅವರಂತಹವರ ಹೇಳಿಕೆಗೆ ಹೇಗೆ ಆಸ್ಪದ ನೀಡುತ್ತಾರೆ ಎಂದು ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಪ್ರಶ್ನಿಸಿದ್ದಾರೆ.
ಚುನಾವಣೆ ಬಂದಾಗಲೆಲ್ಲ ರಾಜಕೀಯ ಲಾಭಕ್ಕಾಗಿ ತಾನೋರ್ವ ಹಿಂದು ಎಂದು ಹೇಳಿಕೊಂಡು ದೇವಾಲಯಗಳಿಗೆಲ್ಲ ಭೇಟಿ ಕೊಡುವ ರಾಹುಲ್ ಗಾಂಧಿ, ಶಶಿ ತರೂರ್ ಅವರಂತಹವರ ಹಿಂದೂ ಸಂಪ್ರದಾಯಗಳ ಮನ ನೋಯಿಸುವ ಟೀಕೆಗೆ ಹೇಗೆ ಆಸ್ಪದ ನೀಡುತ್ತಾರೆ; ಇದಕ್ಕೆ ರಾಹುಲ್ ಖುದ್ದು ಉತ್ತರ ನೀಡಬೇಕಿದೆ ಎಂದು ಸಚಿವೆ ಇರಾನಿ ಹೇಳಿದರು.
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಸಂಗಡಿಗರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಕುಂಭ ಪುಣ್ಯ ಸ್ನಾನ ಮಾಡಿರುವ ಫೋಟೋಗೆ ಕಾಂಗ್ರೆಸ್ ನಾಯಕ ಶಶಿ ತರೂರ್ “ಇಸ್ ಸಂಗಮ್ ಮೇ ಸಬ್ ನಂಗೇ ಹೇಂ (ಈ ಸಂಗಮದಲ್ಲಿ ಎಲ್ಲರೂ ನಗ್ನರಿದ್ದಾರೆ) ಎಂದು ಕ್ಯಾಪ್ಶನ್ ಬರೆದು ಕಟು ವ್ಯಂಗ್ಯದಿಂದ ಟೀಕಿಸಿದ್ದರು.
ಇದೇ ವೇಳೆ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಅವರು, ತರೂರ್ ಒಬ್ಬ ತುಂಬ ಸುಶಿಕ್ಷಿತ ಮತ್ತು ಗೌರವಾನ್ವಿತ ವ್ಯಕ್ತಿ. ಆದರೆ ಆಗೀಗ ಎಂಬಂತೆ ಹಿಂದೂ ಸಂಪ್ರದಾಯಗಳನ್ನು ಟೀಕಿಸುವ ಅವರಿಂದ ಈ ರೀತಿಯ ಹೇಳಿಕೆಗಳು ಬರುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.