ರಾಷ್ಟ್ರೀಯ ಸೈಕ್ಲಿಂಗ್ ಕೂಟದಲ್ಲಿ ಸೈಕ್ಲಿಸ್ಟ್‌ಗಳ ಪರದಾಟ
Team Udayavani, Jan 31, 2019, 12:55 AM IST
ಜೈಪುರ: ರಾಜಸ್ಥಾನದ ಜೈಪುರದಲ್ಲಿ ಬುಧವಾರದಿಂದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಆರಂಭವಾಗಿದೆ. ಇದರಲ್ಲಿ ಭಾಗವಹಿಸುತ್ತಿರುವ ಸೈಕ್ಲಿಸ್ಟ್‌ಗಳ ಸಂಕಷ್ಟವನ್ನು ಮಾತ್ರ ದೇವರೇ ಸರಿಪಡಿಸಬೇಕು! ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿನ ವೆಲೊಡ್ರೋಮ್ (ಸೈಕ್ಲಿಂಗ್ ಅಂಕಣ) ಬಳಿ ರಾಜಸ್ಥಾನ ಸೈಕ್ಲಿಸ್ಟ್‌ಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಒಂದು ಚಿಕ್ಕ ಹಾಲ್‌ನಲ್ಲಿ 30 ಸ್ಪರ್ಧಿಗಳು ತಂಗಿದ್ದಾರೆ. ಅವರಿಗೆಲ್ಲ ಹಾಸಿಕೊಳ್ಳಲು ಸರಿಯಾದ ಹಾಸಿಗೆಗಳಿಲ್ಲ. ನೀಡಿರುವ ಹಾಸಿಗೆಗಳಿಗೆ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶವನ್ನು ತಡೆಯುವ ಶಕ್ತಿಯಿಲ್ಲ…ಹೀಗೆಂದು ಆಂಗ್ಲ ದಿನಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಅಚ್ಚರಿಯೆಂದರೆ ಮಾಡಿರುವ ವಸತಿ ವ್ಯವಸ್ಥೆಯಲ್ಲೂ ತಾರತಮ್ಯವಿದೆ. ಬೇರೆ ಬೇರೆ ತಂಡಗಳಲ್ಲಿರುವ ಅಂತಾರಾಷ್ಟ್ರೀಯ ಸೈಕ್ಲಿಸ್ಟ್‌ಗಳಿಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರ ತಂಡದಲ್ಲಿ ಮಯೂರ್ ಪವಾರ್, ಅಭಿಷೇಕ್ ಖಾಸಿತ್ ಎಂಬ ಅಂತಾರಾಷ್ಟ್ರೀಯ ಚಿನ್ನ ಗೆದ್ದಿರುವ ಇಬ್ಬರು ಸೈಕ್ಲಿಸ್ಟ್‌ಗಳಿದ್ದಾರೆ. ಅವರಿಗೆ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ 22 ಮಂದಿಯಿರುವ ಅವರ ತಂಡದ ಇತರೆ ಸದಸ್ಯರಿಗೆ, ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿರುವ ಪುಟ್ಟ ಹಾಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಹಲವು ಅಂತಾರಾಷ್ಟ್ರೀಯ ತಾರೆಯರೇ ಇರುವ, ರೈಲ್ವೇಸ್, ಸರ್ವಿಸಸ್‌ನಂತಹ ತಂಡಗಳು ತಮ್ಮ ವಸತಿ ವ್ಯವಸ್ಥೆಯನ್ನು ತಾವೇ ಮಾಡಿಕೊಂಡಿವೆ. ಸೂಕ್ತ ವಸತಿ ವ್ಯವಸ್ಥೆಯಿಲ್ಲದ ಸ್ಪರ್ಧಿಗಳು ತಮ್ಮ ಭವಿಷ್ಯದ ಬಗೆಗಿನ ಭೀತಿಯಿಂದ ಆಕ್ಷೇಪ ಎತ್ತಲು ಹಿಂಜರಿಯುತ್ತಿದ್ದಾರೆ.
ಈ ಬಗ್ಗೆ ರಾಜಸ್ಥಾನ ಸೈಕ್ಲಿಂಗ್ ಸಂಸ್ಥೆಯನ್ನು ಪ್ರಶ್ನಿಸಿದರೆ, ಅದರ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಮಗಿರುವ 75 ಲಕ್ಷ ರೂ. ಹಣದಲ್ಲೇ ಎಲ್ಲವನ್ನೂ ನಡೆಸಬೇಕು. ಇದರಲ್ಲಿ ಹಲವಾರು ವರ್ಷಗಳಿಂದ ಬಳಸದೇ ಹಾಗೇ ಉಳಿದುಕೊಂಡಿರುವ ವೆಲೊಡ್ರೋಮನ್ನೂ ನವೀಕರಣ ಮಾಡಬೇಕು ಎಂದು ತಮ್ಮ ಪರಿಸ್ಥಿತಿ ಹೇಳಿಕೊಳ್ಳುತ್ತಾರೆ.
ಸೈಕಲ್ ಬಿಟ್ಟಿರಲು ಸಿದ್ಧವಿಲ್ಲ: ಇದೇ ವೇಳೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ಸೈಕ್ಲಿಸ್ಟ್‌ಗಳು ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಒಪ್ಪುವುದಿಲ್ಲವಂತೆ. ಹೋಟೆಲ್‌ಗಳು ಸೈಕಲ್ ಒಳತರಲು ಅವಕಾಶ ನೀಡುವುದಿಲ್ಲ. ಆದರೆ ಸೈಕ್ಲಿಸ್ಟ್‌ಗಳು ಒಂದು ನಿಮಿಷವೂ ಸೈಕಲ್ ಬಿಟ್ಟು ಇರಲು ಸಿದ್ಧರಿಲ್ಲ. ಹೀಗಿದ್ದರೆ ವ್ಯವಸ್ಥೆ ಮಾಡುವುದು ಹೇಗೆ? ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ. ಕೇಂದ್ರ ಕ್ರೀಡಾಮಂತ್ರಿ ರಾಜ್ಯವರ್ಧನ್ ಸಿಂಗ್ ರಾಥೋಡ್, ಕ್ರೀಡಾಪಟುಗಳೇ ನಮ್ಮ ಕೇಂದ್ರವಾಗಬೇಕು ಎಂದು ಆಶಿಸಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಅಂತಹ ಪರಿಸ್ಥಿತಿಯಿಲ್ಲ ಎನ್ನುವುದು ಖೇದಕರ ಎಂದು ಕ್ರೀಡಾಭಿಮಾನಿಗಳು ಬೇಸರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.