ಮಹಾಮೈತ್ರಿ ಬಂದರೆ ದಿನಕ್ಕೊಬ್ಬ ಪ್ರಧಾನಿ


Team Udayavani, Jan 31, 2019, 12:30 AM IST

z-17.jpg

ಲಕ್ನೋ/ಕಾನ್ಪುರ: “ಮಹಾಮೈತ್ರಿಯೇನಾದರೂ ಅಧಿಕಾರಕ್ಕೆ ಬಂದರೆ ವಾರದ ಒಂದೊಂದು ದಿನ ಒಬ್ಬೊಬ್ಬರು ಪ್ರಧಾನಿಯಾಗಿರುತ್ತಾರೆ. ಭಾನುವಾರ ಮಾತ್ರ ಇಡೀ ದೇಶಕ್ಕೆ ರಜೆ ಇರುತ್ತದೆ.’  ಹೀಗೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಪಕ್ಷಗಳ ಮಹಾ ಘಟಬಂಧನದ ಕುರಿತು ವ್ಯಂಗ್ಯವಾಡಿದ್ದಾರೆ. ಲಕ್ನೋ ಮತ್ತು ಕಾನ್ಪುರದಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರನ್ನು ಭೇಟಿಯಾಗಿ ಅವರು ಮಾತನಾಡಿದ್ದಾರೆ. ಮಹಾಮೈತ್ರಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಪ್ರತಿಪಕ್ಷಗಳು ಮೊದಲು ತಮ್ಮ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕು. ಇಲ್ಲದಿದ್ದರೆ, ಮಹಾಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸೋಮವಾರ ಮಾಯಾವತಿ ಪಿಎಂ ಆದರೆ, ಮಂಗಳವಾರ ಅಖೀಲೇಶ್‌, ಬುಧವಾರ ಮಮತಾ, ಗುರುವಾರ ಶರದ್‌ ಪವಾರ್‌, ಶುಕ್ರವಾರ ದೇವೇಗೌಡ, ಶನಿವಾರ ಸ್ಟಾಲಿನ್‌ ಪ್ರಧಾನಿ ಆಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆಯೋಗಕ್ಕೆ ದೂರು?: ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ಅಮಿತ್‌ ಶಾ ರ್ಯಾಲಿ ಬಳಿಕ ಉಂಟಾದ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆಗೆ ಸಂಬಂಧಿಸಿ ಟಿಎಂಸಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬಿಜೆಪಿ ತಿಳಿಸಿದೆ.

ಮಮತಾ ಸವಾಲು: ಮಮತಾ ಬ್ಯಾನರ್ಜಿ ಅವರ ಕಲಾಕೃತಿಗಳನ್ನು ಚಿಟ್‌ಫ‌ಂಡ್‌ ಹಗರಣದ ಆರೋಪಿಗಳು ಖರೀದಿಸಿದ್ದಾರೆ ಎಂಬ ಅಮಿತ್‌ ಶಾ ಹೇಳಿಕೆಗೆ ದೀದಿ ಕಿಡಿಕಾರಿದ್ದಾರೆ. ನಾನು ಕಲಾಕೃತಿ ಮಾರಿ ಒಂದೇ ಒಂದು ಪೈಸೆ ಪಡೆದಿದ್ದನ್ನು ಸಾಬೀತುಪಡಿಸಿ ಎಂದು ಮಮತಾ ಸವಾಲು ಹಾಕಿದ್ದಾರೆ.

ಅರ್ಜಿಗೆ 25 ಸಾವಿರ ರೂ: ತಮಿಳುನಾಡಿನ ಎಐಎಡಿಎಂಕೆ ಲೋಕಸಭೆ ಚುನಾವಣೆ ಅಭ್ಯರ್ಥಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. 25 ಸಾವಿರ ರೂ.ಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು ಎಂದು ಹೇಳಿದೆ.

ವಾಯುಪಡೆ ಮಾರಾಟ: ರಾಹುಲ್‌
“ರಫೇಲ್‌ ಒಪ್ಪಂದವನ್ನು ನವೀಕರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಾಯುಪಡೆಯನ್ನು ಮಾರಾಟ ಮಾಡಿದ್ದಾರೆ ಹಾಗೂ ಯುವಕರಿಗೆ ಸಿಗಬೇಕಿದ್ದ ಉದ್ಯೋಗಾವಕಾಶವನ್ನು ತಮ್ಮ ಮಿತ್ರ ಅನಿಲ್‌ ಅಂಬಾನಿಯವರ ಕಂಪೆನಿಗೆ ಸಿಗುವಂತೆ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಯೂತ್‌ ಕಾಂಗ್ರೆಸ್‌ ಆಯೋಜಿಸಿದ್ದ ರಾಷ್ಟ್ರಮಟ್ಟದ ಯುವ ಕ್ರಾಂತಿ ಯಾತ್ರಾ ಅಭಿಯಾನದ ಸಮಾರೋಪದಲ್ಲಿ ಮಾತನಾಡಿದ ಅವರು, “ರಫೇಲ್‌ ಹಗರಣದ ಹಿಂದೆ ಅಡಗಿರುವ ಸತ್ಯವನ್ನು ಯಾರಿಂದಲೂ ಅದುಮಿಡಲು ಸಾಧ್ಯವಿಲ್ಲ. ಕಾಲ ಬಂದಾಗ ಅದು ತಾನೇ ತಾನಾಗಿ ಹೊರಬರುತ್ತದೆ. ಆದರೆ, ಪ್ರಧಾನಿ ಈ ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ’ ಎಂದರು.

ಟಾಪ್ ನ್ಯೂಸ್

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

Hard Disk: ಬಿಟ್ಕಾಯಿನ್‌ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್‌!

Central government appeals to Bangladesh to come forward to protect Hindus

Bangladesh: ಹಿಂದೂಗಳ ರಕ್ಷಣೆಗೆ ಮುಂದಾಗಿ: ಬಾಂಗ್ಲಾಕ್ಕೆ ಕೇಂದ್ರ ಸರ್ಕಾರ ಮನವಿ

Opposition leader’ letter for debate on the Constitution in both houses

Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ

Is Andhra Pradesh considering cancelling the agreement with Adani Group?

Andhra Pradesh: ಅದಾನಿ ಗ್ರೂಪ್‌ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dina Bhavishya

Daily Horoscope; ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ…

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.