ಗುಡುಗಳಲೆ ಜಯದೇವ ಜಾನುವಾರು ಜಾತ್ರೆಗೆ ಚಾಲನೆ
Team Udayavani, Jan 31, 2019, 1:00 AM IST
ಶನಿವಾರಸಂತೆ ಆಧುನಿಕತೆಯ ಸ್ಪರ್ಶದಿಂದ ಗ್ರಾಮೀಣ ಜಾನಪದ ಸೊಗಡು ಕಣ್ಮರೆಯಾಗುತ್ತಿದೆ ಎಂದು ಮನೆಹಳ್ಳಿ ಮಠದ ಮಹಾಂತಶಿವಲಿಂಗ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಸಮಿಪದ ಗುಡುಗಳಲೆ ಜಯದೇವ ಜಾನುವಾರು ಜಾತ್ರಾ ಮೈಧಾನದ ಸಭಾಂಗಣದಲ್ಲಿ ಇತಿಹಾಸ ಪ್ರಸಿದ್ದ 74ನೇ ಗುಡುಗಳಲೆ ರೀಜಯದೇವ ಜಾನುವಾರುಗಳ ಜಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ-ಹಿಂದೆ ಧಾರ್ಮಿಕ, ಜಾನಪದ, ಸಂಸ್ಕ್ರತಿಯ ತಳಹದಿಯಲ್ಲಿ ಸಾಮಾಜಿಕ ಜೀವನ ಸಾಗುತ್ತಿತ್ತು ಆದರೆ ಈಗ ವೈಜ್ಞಾನಿಕ ತಳಹದಿಯಲ್ಲಿ ನಾವೆಲ್ಲಾರೂ ಜೀನವ ಸಾಗಿಸುತ್ತಿದ್ದೇವೆ ಇದರಿಂದ ಧಾರ್ಮಿಕ, ಸಂಸ್ಕಾರ, ಸಂಸ್ಕೃತಿಯ ಮೌಲ್ಯಗಳು ಕುಸಿಯುತ್ತಿದೆ ಎಂದರು. ಇಂದಿನ ಜಾತ್ರಾ ಮಹೋತ್ಸವಗಳು ಸಹ ಆಧುನಿಕತೆಗೆ ಬದಲಾಗುತ್ತಿದ್ದು ವಿಜ್ಞಾನದ ಪರಂಪರೆಯಾಗಿ ಮಾರ್ಪಾಡಾಗುತ್ತಿದೆ, ಆದರೆ ಇದು ಕ್ಷಣಿಕಗಷ್ಟೆ ಸಿಮೀತವಾಗಿದ್ದು ಹಿಂದಿನ ಜಾನಪದ, ಜಾತ್ರಾ ಮಹೋತ್ಸವಗಳಂತಹ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಜಾನುವಾರು ಜಾತ್ರಾ ಮಹೋತ್ಸವವನ್ನು ಪ್ರತಿವರ್ಷವೂ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಹಿರಿಯ ಮುಖಂಡ ಎಸ್.ಕೆ.ವೀರಪ್ಪ ಮಾತನಾಡಿ-ಹಿಂದೆ ಗುಡುಗಳಲೆ ಜಾನುವಾರುಗಳ ಜಾತ್ರೆ ವೈಭವದಿಂದ ನಡೆಯುತಿತ್ತು, ಜಾತ್ರೆಯಲ್ಲಿ ಸಾವಿರಾರು ಜಾನುವಾರುಗ ಸೇರುತ್ತಿತ್ತು ಆದರೆ ಈಗ ರೈತಾಪಿ ಜನರು ಜಾನುವಾರು ಸಾಕಾಣಿಕೆಯನ್ನು ಕಮ್ಮಿ ಮಾಡಿರುವುದ್ದರಿಂದ ಜಾತ್ರೆ ಯಲ್ಲಿ ಜಾನುವಾರುಗಳ ಸಂಖ್ಯೆ¿ ಇಳಿಕೆಯಾಗುತ್ತಿದೆ ಜಾತ್ರಾ ಸಮಿತಿ ವೈಭವವನ್ನು ಮರುಕಳಿಸಲು ಪ್ರಯತ್ನ ಪಡುತ್ತಿರುವುದು ಶ್ಲಾಘನಿಯ ಎಂದರು. ಎಎಸ್‌ಐ ಚಲುವರಾಜು, ಪ್ರಮುಖ ಕೆ.ವಿ.ಮಂಜುನಾಥ್ ಮಾತನಾಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಸರೋಜಮ್ಮ, ತಾ.ಪಂ.ಸದಸ್ಯ ಅನಂತ್‌ಕುಮಾರ್, ಹಂಡ್ಲಿ ಗ್ರಾ.ಪಂ.ಅಧ್ಯಕ್ಷ ಸಂದೀಪ್, ಶ್ರೀಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಕಾರ್ಯದರ್ಶಿ.ಉಮಾಶಂಕರ್ ಪ್ರಮುಖಸಂಗಯ್ಯ, ಅವರದಾಳು ರಾಜಶೇಖರ್, ಗ್ರಾ.ಪಂ.ಪಿಡಿಒ ಸ್ಮಿತಾ, ಗ್ರಾ.ಪಂ.ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.