ಬಸ್ ನಿಲುಗಡೆಗೆ ಆಗ್ರಹ
Team Udayavani, Jan 31, 2019, 11:02 AM IST
ಬನಹಟ್ಟಿ: ರಾಜ್ಯ ಮತ್ತು ಮಹಾರಾಷ್ಟ್ರ ರಸ್ತೆ ಸಾರಿಗೆಯ ಪ್ರತಿ ವೇಗದೂತ ಮತ್ತು ಸಾಮಾನ್ಯ ಬಸ್ ಹೊಸೂರಿನಲ್ಲಿ ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳೀಯ ವಿದ್ಯಾರ್ಥಿಗಳು, ಸಾರ್ವಜನಿಕರು, ಹೊಸೂರ ಗ್ರಾಮದ ವಿವಿಧ ಸಂಘಟನೆಗಳು ಬೆಳಗ್ಗೆ 5:30ಕ್ಕೆ ಪ್ರತಿಭಟನೆ ಆರಂಭಿಸಿದ್ದರಿಂದ ಪುಣೆ, ಸಾಂಗ್ಲಿ, ಮಿರಜ, ಬೆಳಗಾವಿ, ಹುಬ್ಬಳ್ಳಿ, ಗೋಕಾಕ, ಬಳ್ಳಾರಿ, ವಿಜಯಪುರ, ಕಲಬುರಗಿ ನಗರಗಳಿಗೆ ಹೋಗಬೇಕಾದ ಬಸ್‌ಗಳು ತಡವಾಗಿ ಸಂಚಾರ ಮಾಡಿದವು. ಆದರೆ ಪ್ರತಿಭಟನಾಕಾರರು ಯಾವುದೆ ಖಾಸಗಿ ವಾಹನ ತಡೆ ಹಿಡಿಯಲಿಲ್ಲ.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಹೊಸೂರಲ್ಲಿ ಯಾವುದೆ ಬಸ್ ನಿಲುಗಡೆಯಾಗುವುದಿಲ್ಲ. ರಬಕವಿ ಮತ್ತು ಬನಹಟ್ಟಿಯಲ್ಲಿ ಎರಡು ಕಡೆಗಳಲ್ಲಿ ಬಸ್ ನಿಲ್ಲುತ್ತವೆ. ಇದರಿಂದಾಗಿ ಬೇರೆ ಊರಿಗೆ ಹೋಗಲು ಬನಹಟ್ಟಿ ಇಲ್ಲವೆ ರಬಕವಿಯವರೆಗೆ ದ್ವಿಚಕ್ರ ವಾಹನ ಇಲ್ಲವೆ ಟಂಟಂಗಳಲ್ಲಿ ಸಂಚರಿಸಬೇಕಾಗಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಎರಡು ಕಿ.ಮೀ ದೂರದವರೆಗೆ ನಡೆದುಕೊಂಡು ಹೋಗಬೇಕಾಗಿದೆ. ಬಸ್ ನಿಲುಗಡೆಯಾಗದಿದ್ದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಪ್ರತಿ ಬಸ್ ನಿಲುಗಡೆಯಾಗುವವರೆಗೆ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಾರಿಗೆ ಇಲಾಖೆ ಅಧಿಕಾರಿ ಎ. ಆರ್. ತೇಲಿ ಮಾತನಾಡಿ, ಜಮಖಂಡಿ ಡಿಪೋ ಬಸ್ ನಿಲುಗಡೆ ಮಾಡಲು ಕ್ರಮ ಕೈಗೊಳ್ಳುವೆ. ಹೊಸೂರ ಬಸ್ ನಿಲ್ದಾಣದಲ್ಲಿಯೇ ಒಬ್ಬ ಕಂಟ್ರೋಲರ್‌ನ್ನು ನೇಮಕ ಮಾಡುವ ಭರವಸೆ ನೀಡಿದರು. ಪ್ರತಿಭಟನಾಕಾರರು ಎಲ್ಲ ಡಿಪೋಗಳ ವೇಗದೂತ ಮತ್ತು ಸಾಮಾನ್ಯ ಬಸ್ ನಿಲುಗಡೆಯಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತೇಲಿ ವಿವಿಧ ಡಿಪೋಗಳ ಅಧಿಕಾರಿಗಳ ಜೊತೆಗೆ ಮಾತನಾಡಿ ನಿಲುಗಡೆ ಮಾಡಲು ಸೂಚಿಸಿದರು. ನಂತರ ಎಲ್ಲ ರೀತಿಯ ಬಸ್‌ಗಳನ್ನು ಹೊಸೂರ ಗ್ರಾಮದಲ್ಲಿ ನಿಲುಗಡೆ ಮಾಡುವ ವ್ಯವಸ್ಥೆಯನ್ನು ಮಾಡಿದಾಗ ಪ್ರತಿಭಟನಾಕಾರರು ವಾಪಸ್ ಪಡೆದರು.
ಅರುಣ ಬುದ್ನಿ, ಶಿವರಾಜ ಕೊಣ್ಣೂರ, ಬಸವರಾಜ ಚಿಂಚಲಿ, ಅಲ್ಲಾವುದ್ದಿನ್ ಕುಳಲಿ, ಮಂಜುನಾಥ ಹಾವಿನಾಳ, ಹೊಸೂರಿನ ವಿವಿಧ ಸಂಘಟನೆಗಳು ಮತ್ತು ರಬಕವಿ ಬನಹಟ್ಟಿ ಎಬಿವಿಪಿ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.