ಆತಿಥೇಯ ಯುಎಇ-ಕತಾರ್ ಪಂದ್ಯದ ವೇಳೆ ಶೂ ಎಸೆತ
Team Udayavani, Feb 1, 2019, 12:55 AM IST
ಅಬುಧಾಬಿ: ಆತಿಥೇಯ ಯುಎಇ ಹಾಗೂ ಕತಾರ್ ನಡುವೆ ಬುಧವಾರ ನಡೆದ ಎಎಫ್ಸಿ ಏಷ್ಯಾಕಪ್ ಸೆಮಿಫೈನಲ್ ಪಂದ್ಯ ವಿವಾದಕ್ಕೆ ತುತ್ತಾಗಿದೆ. ಆತಿಥೇಯ ತಂಡವನ್ನು ಎದುರಾಳಿ ಕತಾರ್ 4-0ಯಿಂದ ಸೋಲಿಸಿದ ಬಳಿಕ ರೊಚ್ಚಿಗೆದ್ದ ಆತಿಥೇಯ ಅಭಿಮಾನಿಗಳು ಮೈದಾನದತ್ತ ಶೂ, ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಇದಕ್ಕೆ ಕಾರಣವಾದ ವ್ಯಕ್ತಿಗಳು ಯಾರು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಏಷ್ಯಾ ಫುಟ್‌ಬಾಲ್ ಸಂಸ್ಥೆ ಹೇಳಿದೆ.
2022ರ ವಿಶ್ವಕಪ್ ಫುಟ್‌ಬಾಲ್ ಆಯೋಜನೆ ಮಾಡುತ್ತಿರುವ ಕತಾರ್, ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಗೆದ್ದು ತನ್ನ ಸಾಮರ್ಥ್ಯ ಪ್ರದರ್ಶಿಸುವ ಉಮೇದಿನಲ್ಲಿದೆ. ಆದ್ದರಿಂದ ಆ ತಂಡದಲ್ಲಿ ಹಲವು ವಿದೇಶಿ ಆಟಗಾರರು ಆಡುತ್ತಿದ್ದಾರೆ! ಇದೇ ವೇಳೆ ಕತಾರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ, ಅದರ ಜೊತೆಗೆ ಹಲವು ಅರಬ್ ರಾಷ್ಟ್ರಗಳು ರಾಜತಾಂತ್ರಿಕ ಹಾಗೂ ಸಾರಿಗೆ ಸಂಬಂಧಗಳನ್ನು ಕಡಿದುಕೊಂಡಿವೆ. ಇತರೆ ಅರಬ್ ರಾಷ್ಟ್ರಗಳು ಬಿಗಿಯಾದ ನಿಲುವು ಹೊಂದಿದ್ದರೂ, ಕತಾರ್ ಬಗ್ಗೆ ಯುಎಇ ಸ್ವಲ್ಪ ಮೃದುಧೋರಣೆ ಹೊಂದಿದೆ. ಆದರೂ ಎರಡೂ ರಾಷ್ಟ್ರಗಳ ಸಂಬಂಧ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಈ ಎಲ್ಲವೂ ಅಭಿಮಾನಿಗಳ ವರ್ತನೆಗೆ ಹಿನ್ನೆಲೆಯಾಗಿದೆ.
ಆತಿಥೇಯ ಯುಎಇ ತನ್ನ ತಂಡಕ್ಕೆ ಅಭಿಮಾನಿಗಳ ಪೂರ್ಣ ಬೆಂಬಲವಿರಬೇಕು ಎಂಬ ಕಾರಣದಿಂದ ಸಾವಿರಾರು ಟಿಕೆಟ್‌ಗಳನ್ನು ತಾನೇ ಖರೀದಿಸಿತ್ತು. ಇದರರ್ಥ, ಮೊಹಮ್ಮದ್ ಬಿನ್ ಜಾಯೆದ್ ಮೈದಾನದಲ್ಲಿ ಹಾಜರಿದ್ದ 42,000 ಅಭಿಮಾನಿಗಳ ಪೈಕಿ ಶೇ.90ರಷ್ಟು ಮಂದಿ ಯುಎಇ ಬೆಂಬಲಕ್ಕಿದ್ದರು. ಆ ಪ್ರಮಾಣದ ಬೆಂಬಲದ ನಡುವೆಯೂ ತಮ್ಮ ತಂಡ ಹೀನಾಯವಾಗಿ ಸೋತಿದ್ದನ್ನು ಅಭಿಮಾನಿಗಳು ಅರಗಿಸಿಕೊಂಡಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.