ಸದ್ಬಳಕೆಯಾಗದೆ ಪಾಳುಬಿದ್ದ ಕದ್ರಿ ಸ್ಕೇಟಿಂಗ್ ರಿಂಕ್
Team Udayavani, Feb 1, 2019, 5:42 AM IST
ಮಹಾನಗರ: ಜನರ ತೆರಿಗೆ ಹಣ ಖರ್ಚು ಮಾಡಿ ಸುಮಾರು ಏಳು ವರ್ಷಗಳ ಹಿಂದೆ ನಿರ್ಮಾ ಣಗೊಂಡಿದ್ದ ಕದ್ರಿ ಸ್ಕೇಟಿಂಗ್ ರಿಂಕ್ ಸದ್ಬಳಕೆ ಯಾಗದೆ ಪಾಳುಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಈ ರೋಲರ್ ಸ್ಕೇಟಿಂ ಗ್ ರಿಂಕ್ ಒಂದು ವರ್ಷದಿಂದ ಬಳಕೆ ಯಾಗದೆ ಬಿದ್ದಿದ್ದು, ಅಲ್ಲಿನ ಅವ್ಯವಸ್ಥೆ ಸರಿಪಡಿಸಿ ಕ್ರೀಡಾಸಕ್ತರಿಗೆ ನೀಡುವಂತೆ ಸಾರ್ವಜನಿಕರು ಸಂಬಂಧಪಟ್ಟ ತೋಟಗಾರಿಕೆ ಇಲಾಖೆಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋ ಜನವಾಗಿಲ್ಲ. ಹೀಗಾಗಿ, ಕೆಲವು ವರ್ಷ ಗಳಿಂದ ಪ್ರತಿಷ್ಠಿತ ಕದ್ರಿ ಸ್ಕೇಟಿಂಗ್ ರಿಂಕ್ ಸಮಸ್ಯೆಯು ಅರಣ್ಯ ರೋದನವಾಗಿ ಬಿಟ್ಟಿರುವುದು ದುರದೃಷ್ಟಕರ.
ಸ್ಕೇಟಿಂಗ್ ಕ್ರೀಡಾಪಟುಗಳ ಅಭ್ಯಾಸಕ್ಕೆ ನೆಲೆಯಾಗಬೇಕಿದ್ದ ಇಲ್ಲಿನ ಸ್ಕೇಟಿಂಗ್ ರಿಂಕ್ ಸುತ್ತಮುತ್ತ ಅನೈತಿಕ ಚಟುವಟಿಕೆಗಳ ಬಳಸಿದ ವಸ್ತುಗಳು ರಾಶಿಬಿದಿದ್ದು, ದುವ್ಯರ್ವಹಾರ ನಡಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆೆ. ಸ್ಕೇಟಿಂಗ್ ರಿಂಕ್ ಸುತ್ತಮುತ್ತಲಿನ ಪ್ರದೇಶ ಈ ಹಿಂದೆ ಹಚ್ಚಹಸುರಾಗಿತ್ತು. ಇದೀಗ ಪಾಳು ಬಿದ್ದಿದ್ದು, ಸುತ್ತಮುತ್ತ ಗಿಡ ಗಂಟಿಗಳು, ಮರಗಳೆಲ್ಲ ಬಿಸಿಲಿನ ತಾಪಕ್ಕೆ ಸೊರಗಿ ಹೋಗಿದೆ. ಅಲ್ಲದೆ, ಬೀಡಿ-ಸಿಗರೇಟ್ ಪ್ಯಾಕೆಟ್, ಬಿಯರ್ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿ, ಚೀಲಗಳು ಸಹಿತ ಕಸ ಕಡ್ಡಿಗಳಿಂದ ಕೂಡಿದೆ.
ನಗರದಲ್ಲಿ ಸ್ಕೇಟಿಂಗ್ ತರಬೇತಿಗೆ ಸುಸಜ್ಜಿತ ರಿಂಕ್ ಆವಶ್ಯಕತೆ ಇದೆ ಎಂದು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ಮಹೇಶ್ ಕುಮಾರ್ ನೇತೃತ್ವದಲ್ಲಿ 2007ರಲ್ಲಿ ತೋಟಗಾರಿಕಾ ಇಲಾಖೆಗೆ ಮನವಿ ಮಾಡಲಾಗಿತ್ತು. ಜಾಗ ಗುರುತಿಸಿ 2008ರ ಬಳಿಕ ಕಾಮಗಾರಿ ಆರಂಭವಾಗಿದ್ದು, ಕುಂಟುತ್ತಾ ಸಾಗಿದ ಕಾಮಗಾರಿ 2011ರಲ್ಲಿ ಪೂರ್ಣಗೊಂಡಿತ್ತು. ಮೆಸ್ಕಾಂ ಸಹಾಯದಿಂದ 12 ಲಕ್ಷ ರೂ. ಮತ್ತು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ರಿಂಕ್ ನಿರ್ಮಾಣ ಮಾಡಲಾಗಿತ್ತು. ಕದ್ರಿ ಸ್ಕೇಟಿಂಗ್ ರಿಂಕ್ ಇರುವ ಜಾಗ ಒಟ್ಟಾರೆ 4 ಎಕ್ರೆ ಪ್ರದೇಶವಿದೆ. ಒಂದು ಎಕ್ರೆ ಪ್ರದೇಶ ಸ್ಕೇಟಿಂಗ್ ರಿಂಕ್ ಹೊಂದಿದೆ. ಜಿಲ್ಲಾ ಮಟ್ಟದ, ಶಾಲಾ ವಲಯದ ಅನೇಕ ಸ್ಕೇಟಿಂಗ್ ಪಂದ್ಯಾಟಗಳು ನಡೆದಿದೆ.
ಸ್ಕೇಟಿಂಗ್ ಚಟುವಟಿಕೆ ಸ್ಥಗಿತ
ಈ ಜಮೀನನ್ನು ತೋಟಗಾರಿಕಾ ಇಲಾಖೆಯು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ಗ 20 ವರ್ಷಗಳವರೆಗೆ ಒದಗಿಸಿತ್ತು. 2011ರಿಂದ 2014ರ ವರೆಗೆ ನಗರದ ರೋಲರ್ ಸ್ಕೇಟಿಂಗ್ ಕ್ಲಬ್‌ನ ಮಹೇಶ್ ಕುಮಾರ್ ತರಬೇತಿ ನೀಡುತ್ತಿದ್ದರು. ಸ್ಕೇಟಿಂಗ್ ರಿಂಕ್ ನಿರ್ಮಾಣದಿಂದ ಸರಕಾರಕ್ಕೆ ಯಾವುದೇ ಆದಾಯ/ಲಾಭ ಇಲ್ಲವೆಂದು ತೋಟಗಾರಿಕಾ ಇಲಾಖೆಯು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ಗ ನೀಡಿದ ಅನುಮತಿಯ ಆದೇಶ ವನ್ನು ರದ್ದುಗೊಳಿಸಿತ್ತು. ಬಳಿಕ ರಿಂಕ್ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಮೂಲಕ ಬೇರೊಬ್ಬರಿಗೆ ವಹಿಸಿ ಕೊಡಲಾಗಿತ್ತು. ಕೆಲವು ವರ್ಷ ಸುಸೂತ್ರವಾಗಿ ಸಾಗಿ, ಒಂದು ವರ್ಷದಿಂದ ಸ್ಕೇಟಿಂಗ್ ಚಟುವಟಿಕೆ ನಿಂತಿದೆ.
ಮಹೇಶ್ ಕುಮಾರ್ ಹೇಳುವ ಪ್ರಕಾರ, ತೋಟಗಾರಿಕಾ ಇಲಾಖೆಯು ಈ ಸ್ಕೇಟಿಂಗ್ ರಿಂಕ್ ಅನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಆಸಕ್ತರಿಗೆ ವಹಿಸಿಕೊಡುವುದು ಸರಿಯಲ್ಲ. ಅಲ್ಲದೆ, ಇಲಾಖೆಯು ಒಂದು ವರ್ಷದ ಅವಧಿಗೆ ಟೆಂಡರ್ ನೀಡಿದರೆ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಏಕೆಂದರೆ, ಮಳೆಗಾಲದ ನಾಲ್ಕೈದು ತಿಂಗಳು, ಇಲ್ಲಿ ಸ್ಕೇಟಿಂಗ್ ಮಾಡಿ ಸುವುದಕ್ಕೆ ಸಾಧ್ಯವಾಗುವುದಿಲ್ಲ.
ಉಳಿದ ಏಳು ತಿಂಗಳಿನಲ್ಲಿ ಅಭ್ಯಾಸ ನಡೆಸಿ ವಿದ್ಯಾರ್ಥಿ ಗಳನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುವುದು ಕಷ್ಟ. ಇದರಿಂದ ಕ್ರೀಡಾಪಟುಗಳ ಭವಿಷ್ಯ ಹಾಳಾಗುತ್ತದೆ ಎಂದಿದ್ದಾರೆ.
ತುಂಡಾಡ ಗೇಟಿಗೆ ಭಧ್ರವಾದ ಬೀಗ
ಸ್ಕೇಟಿಂಗ್ ರಿಂಕ್ ಪ್ರವೇಶ ದ್ವಾರದಲ್ಲಿ ದೊಡ್ಡದಾದ ಗೇಟ್ ಅಳವಡಿಸಲಾಗಿದೆ. ಕೆಲವು ತಿಂಗಳುಗಳಿಂದ ಈ ಗೇಟ್ ತೆರೆದ ಸ್ಥಿತಿಯಲ್ಲಿದ್ದು, ತುಕ್ಕು ಹಿಡಿದಿದೆ. ವಿಶೇಷವೆಂದರೆ, ತುಂಡಾದ ಗೇಟ್‌ಗೆ ಬೀಗ ಜಡಿಯಲಾಗಿದ್ದು, ಒಂದು ಬದಿಯ ಗೇಟ್ನ್ನು ಪ್ರತ್ಯೇಖವಾಗಿ ತೆರೆದು ಇಡಲಾಗಿದೆ. ಇದೇ ಕಾರಣದಿಂದ ದಿನದ 24 ಗಂಟೆಯೂ ಗೇಟು ತೆರೆದಿರುತ್ತದೆ. ಇನ್ನು ಪಕ್ಕದಲ್ಲಿಯೇ ಗೋಡೆ ಕಟ್ಟಲಾಗಿದ್ದು, ಕೆಲವು ಮಂದಿ ಗೋಡೆ ಹಾರಿ ಕ್ರೀಡಾಂಗಣ ಪ್ರವೇಶಿಸುತ್ತಾರೆ.
ಕೂಡಲೇ ಕ್ರಮ
ಸ್ಕೇಟಿಂಗ್ ರಿಂಕ್ ಕ್ರೀಡಾಂಗಣದ ಅವ್ಯವಸ್ಥೆಯ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸ್ಕೇಟಿಂಗ್ ರಿಂಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
– ಜಾನಕಿ
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.