ಸಾಹಿತ್ಯ ಅಕಾಡೆಮಿಯಿಂದ ಹೊನ್ನ ಮಾತು ಯೋಜನೆ
Team Udayavani, Feb 1, 2019, 6:12 AM IST
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಸಾಹಿತ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ದಾಖಲಿಸಲು ಇದೇ ಮೊದಲ ಬಾರಿಗೆ “ಹೊನ್ನ ಮಾತು’ ಯೋಜನೆ ರೂಪಿಸಿದೆ.
“ಹೊನ್ನಮಾತು’ ಯೋಜನೆಯ ಮೊದಲ ಕಂತಿನಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಸಾಹಿತಿಗಳ ವಿಚಾರ ಮಂಡನೆ ದೃಶ್ಯೀಕರಣ ಮಾಡಲಾಗುವುದು. ಮೊದಲ ಕಂತು ಯಶಸ್ವಿಗೊಂಡರೆ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಲ್ಲಿ ನೆಲೆಸಿರುವ ಸಾಹಿತಿಗಳ ವಿಚಾರಗಳನ್ನು ದಾಖಲಿಸುವ ಪ್ರಯತ್ನಕ್ಕೆ ಅಕಾಡೆಮಿ ಮುಂದಾಗಲಿದೆ.
ಮೊದಲ ಕಂತಿನಲ್ಲಿ ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ನಿಸಾರ್ ಅಹಮದ್, ಕೆ.ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ ಹಾಗೂ ಚಂಪಾ ಅವರ ವಿಚಾರಧಾರೆಗಳು ಪ್ರಕಟಗೊಳ್ಳಲಿದೆ. ಕಳೆದ ಐದಾರು ತಿಂಗಳಿನಿಂದ ಅಕಾಡೆಮಿ ಈ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದು, ಫೆಬ್ರವರಿಯಲ್ಲಿ ದೃಶ್ಯೀಕರಣ ಮಾಡಲು ಸಿದ್ಧತೆ ನಡೆಸಿದೆ. ಮಾರ್ಚ್ ಮೊದಲ ವಾರದಲ್ಲಿ ಸಾಹಿತಿಗಳ ವಿಚಾರಗಳನ್ನು ಸಾಹಿತ್ಯಾಸ್ತಕರು ವೀಕ್ಷಿಸಬಹುದು.
“ಹೊನ್ನ ಮಾತು’ ಯೋಜನೆಯಲ್ಲಿ ಸಾಹಿತಿಗಳ ಜೀವನ ಸಾಧನೆಗಿಂತ ಮೀಗಿಲಾಗಿ ಅವರ ಸಾಹಿತ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ಪ್ರಧಾನವಾಗಿರಿಸಿಕೊಂಡು ದೃಶ್ಯೀಕರಣದ ಮೂಲಕ ಪ್ರಸ್ತುತಪಡಿಸಲಾಗುವುದು. ಯೂ ಟೂಬ್‌ನಲ್ಲೂ ಇದು ಲಭ್ಯವಾಗಲಿದೆ.
ಈ ಯೋಜನೆಯಡಿ ಸಾಹಿತಿಗಳ ಹುಡುಕಾಟ, ಸಂಶೋಧನೆ, ತಾತ್ವಿಕ ಪ್ರತಿಪಾದನೆ, ವೈಚಾರಿಕ ನೆಲೆಗಟ್ಟು, ಸಾಹಿತ್ಯ-ಸಿದ್ಧಾಂತದ ಕುರಿತು ತಮ್ಮ ಗ್ರಹಿಕೆಗಳನ್ನು ಅವರ ಮಾತುಗಳಲ್ಲಿಯೇ ತೆರೆದಿಡಲಿದ್ದಾರೆ. ಅಕಾಡೆಮಿ ಇಂತದ್ದೇ ನಿಗದಿತ ವಿಷಯದ ಬಗ್ಗೆ ಚರ್ಚಿಸಬೇಕೆಂದು ಒತ್ತಡ ಹೇರುವುದಿಲ್ಲ. ಪ್ರತಿಯೊಬ್ಬ ಸಾಹಿತಿಯೂ ಒಟ್ಟು 30 ನಿಮಿಷಗಳಲ್ಲಿ ತಮ್ಮ ವಿಚಾರಗಳನ್ನು ಪ್ರತಿಪಾದಿಸಲಿದ್ದಾರೆ.
ಯೂ ಟೂಬ್, ಫೇಸ್‌ಬುಕ್ಕಿನಲ್ಲಿ ಲಭ್ಯ: ಸಾಹಿತಿಗಳ ಮನೆಯಲ್ಲಿ ದೃಶ್ಯೀಕರಣ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ವಿಡಿಯೋಗ್ರಾಫರ್‌ಗಳಿಗೆ ಗುತ್ತಿಗೆ ನೀಡಿದ್ದು, ಅವರು ದೃಶ್ಯೀಕರಣ, ಸಂಕಲನ (ಎಡಿಟಿಂಗ್) ಸೇರಿದಂತೆ ಎಲ್ಲ ಕಾರ್ಯಗಳನ್ನು ಮುಗಿಸಿ ಸಿಡಿ ರೂಪದಲ್ಲಿ ಸಾಹಿತಿಗಳ ವಿಚಾರ ದಾಖಲೆಯನ್ನು ಅಕಾಡೆಮಿಗೆ ನೀಡಲಿದ್ದಾರೆ. ನಂತರ ಅಕಾಡೆಮಿ ಅದನ್ನು ಯೂ ಟೂಬ್, ಅಕಾಡೆಮಿ ವೆಬ್‌ಸೈಟ್ ಹಾಗೂ ಫೇಸ್‌ಬುಕ್ಕಿಗೆ ಅಳವಡಿಸಲಿದೆ.
ಹೊನ್ನ ಮಾತು ಯೋಜನೆಯನ್ನು ನಿರಂತರವಾಗಿ ಮುಂದುವರಿಸಿ ಹೆಚ್ಚು ಸಾಹಿತಿಗಳ ವಿಚಾರಗಳನ್ನು ದಾಖಲಿಸುವ ಆಲೋಚನೆ ಅಕಾಡೆಮಿಗಿದೆ. ಸರ್ಕಾರದಿಂದ ಅಕಾಡೆಮಿಗೆ ದೊರೆಯುವ ಅನುದಾನ ಬಳಸಿಕೊಂಡು ಹೊನ್ನ ಮಾತು ಪ್ರಕಟಿಸಲಾಗುವುದು. ಒಬ್ಬ ಸಾಹಿತಿಯ ಅರ್ಧಗಂಟೆಯ ದೃಶ್ಯೀಕರಣ, ಸಂಕಲನ ಸೇರಿದಂತೆ ಎಲ್ಲ ಕಾರ್ಯ ಮುಗಿದು ಸಿಡಿ ರೂಪದಲ್ಲಿ ಹೊರಬರಲು 18 ರಿಂದ 20 ಸಾವಿರ ರೂ. ಖರ್ಚಾಗುವ ಸಾಧ್ಯತೆ ಇದೆ.
ಸಾಹಿತ್ಯದ ಪರಿಚಾರಿಕೆಯನ್ನು ಎಲ್ಲ ಮಾಧ್ಯಮಗಳ ಮೂಲಕ ನಡೆಸಬೇಕೆಂಬುದು ಅಕಾಡೆಮಿಯ ಉದ್ದೇಶ. ಅದರಲ್ಲಿ ದೃಶ್ಯ ಮಾಧ್ಯಮವೂ ಒಂದು. ಇವತ್ತಿನ ಸಂದರ್ಭದಲ್ಲಿ ವೈಚಾರಿಕ ಸಾಹಿತ್ಯಕ್ಕೆ ಬಹುಮಹತ್ವವಿದೆ. ತಂತ್ರಜ್ಞಾನದ ಜೊತೆಗಿನ ಅಕಾಡೆಮಿ ಸಂಬಂಧವನ್ನು ಮತ್ತಷ್ಟು ವಿಸ್ತಾರಗೊಳ್ಳುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ವ್ಯಕ್ತಿ ಚಿತ್ರಗಳಿಗಿಂತ ವ್ಯಕ್ತಿಯನ್ನು ವಿಚಾರದ ಮೂಲಕ ದಾಖಲಿಸುವುದು ಹೆಚ್ಚು ಪ್ರಾತಿನಿಧಿಕವಾಗಬಹುದೆಂದು “ಹೊನ್ನ ಮಾತು’ ಆರಂಭಿಸಲಾಗುತ್ತಿದೆ.
-ಡಾ.ಅರವಿಂದ ಮಾಲಗತ್ತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ
* ಶ್ರುತಿ ಮಲೆನಾಡತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.