ಅಲಾಯ್‌ ವೀಲ್‌ ನಿರ್ವಹಣೆ ಹೇಗೆ? 

Team Udayavani, Feb 1, 2019, 7:54 AM IST

february-12.jpg

ಬೈಕ್‌ಗಳಲ್ಲಿ ಅಲಾಯ್‌ ವೀಲ್‌ ಮತ್ತು ರಿಮ್‌ಗಳೆಂಬ ಎರಡು ಮಾದರಿಗಳಲ್ಲಿ ವೀಲ್‌ ರಿಮ್‌ಗಳು ಬರುತ್ತವೆ. ಅಲಾಯ್‌ ವೀಲ್‌ ಈಗಿನ ತಲೆಮಾರಿನ ಬೈಕ್‌ಗಳಲ್ಲಿ ಸಾಮಾನ್ಯವಾಗಿದ್ದು, ಹೆಚ್ಚು ಮೈಲೇಜ್‌, ಬಾಳಿಕೆಗೆ ಪ್ರಸಿದ್ಧವಾಗಿವೆ. ಆದರೂ ಇವುಗಳ ನಿರ್ವಹಣೆ ಅಗತ್ಯ. ಈ ಹಿನ್ನೆಲೆಯಲ್ಲಿ ಅಲಾಯ್‌ ವೀಲ್‌ ವಿಶೇಷತೆಯೇನು? ನಿರ್ವಹಣೆ ಹೇಗೆ ಎಂಬುದರ ಬಗ್ಗೆ ನೋಡೋಣ.

ಅಲಾಯ್‌ ವೀಲ್‌ಗ‌ಳು ಮೆಗ್ನೀಶಿಯಂನ ಮಿಶ್ರಣದಿಂದ ನಿರ್ಮಾಣ ಮಾಡಿದರೆ, ರಿಮ್‌ ವೀಲ್‌ಗ‌ಳು ಅಲ್ಯುಮೀನಿಯಂನಿಂದ ಮಾಡಲಾಗುತ್ತದೆ. ಅಲಾಯ್‌ ವೀಲ್‌ಗ‌ಳು ಕಡಿಮೆ ಭಾರ ಮತ್ತು ಹೆಚ್ಚು ಕಾರ್ಯಕ್ಷಮತೆಯುಳ್ಳವು. ಟ್ಯೂಬ್‌ಲೆಸ್‌ ಟಯರ್‌ಗಳಿಗೆ ಇವುಗಳು ಉತ್ತಮ. ಆಫ್ರೋಡ್‌ಗೆ ಬಳಸುವ ಬೈಕ್‌ಗಳಿಗೆ, ಟೂರಿಂಗ್‌ ಬೈಕ್‌ಗಳಿಗೆ ರಿಮ್‌ ವೀಲ್‌ ಬಳಸುತ್ತಾರೆ. ಇವುಗಳು ಹೆಚ್ಚು ಭಾರ ಮತ್ತು ಕಠಿನ ರಸ್ತೆಗಳಲ್ಲೂ ಬಾಳಿಕೆ ಬರಬಲ್ಲವು.

ಅಲಾಯ್‌ನಿಂದ ಟಯರ್‌ ತೆಗೆಯದಿರಿ: ಅಲಾಯ್‌ ವೀಲ್‌ಗ‌ಳಲ್ಲಿರುವ ಟ್ಯೂಬ್‌ ಲೆಸ್‌ ಟಯರ್‌ ನಿರ್ವಹಣೆಯೂ ಸುಲಭ. ಪಂಕ್ಚರ್‌ ಆದರೆ ವೀಲ್‌ ಅನ್ನು ತೆಗೆಯದೆ ಅಲ್ಲೇ ಪಂಕ್ಚರ್‌ ಹಾಕಲು ಸಾಧ್ಯವಿದೆ. ಒಂದು ವೇಳೆ ಆಗಾಗ್ಗೆ ಟಯರ್‌ ಅನ್ನು ತೆಗೆದು ಪಂಕ್ಚರ್‌ ಹಾಕುತ್ತೀರಾದರೆ, ಇದರಿಂದ ಅಲಾಯ್‌ಗೆ ಹಾನಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಅಲಾಯ್‌ ವೀಲ್‌ ಬೆಂಡ್‌ ಬಂದರೆ ಅದನ್ನು ರಿಪೇರಿ ಮಾಡಿಸುವುದು ಸುಲಭವಲ್ಲ.

ಪ್ರಶರ್‌ ಸರಿಯಾಗಿಡಿ
ಅಲಾಯ್‌ ವೀಲ್‌ಗ‌ಳಲ್ಲಿ ಏರ್‌ ಪ್ರಶರ್‌ ಸರಿಯಾಗಿಡಬೇಕು. ತುಸು ಕಡಿಮೆಯಾದರೆ, ಅದರಿಂದ ವೀಲ್‌ ಗೆ ಹಾನಿಯಾಗುತ್ತದೆ. ಸುಗಮ ಚಾಲನೆಗೆ ಅಲಾಯ್‌ಗೆ ನೈಟ್ರೋಜನ್‌ ಹಾಕಿಸುವುದು ಪರಿಣಾಮಕಾರಿ.

ಸುತ್ತಿಗೆ ಬಳಸಬೇಡಿ
ಒಂದು ವೇಳೆ ಅಲಾಯ್‌ನಿಂದ ಟಯರ್‌ ತೆಗೆಯಬೇಕು ಎಂದಿದ್ದರೆ ಸುತ್ತಿಗೆ ಅಥವಾ ಹೊಡೆಯುವ ವಸ್ತು ಬಳಸಿ ಟಯರ್‌ ಕೀಳದಿರಿ.

ಕಡಿಮೆ ಸುತ್ತಳತೆಯ ಟಯರ್‌ ಬೇಡ
ಸುಂದರವಾಗಿ ಕಾಣುತ್ತದೆ ಎಂದು ಕಡಿಮೆ ಸುತ್ತಳತೆಯ ಟಯರ್‌ ಅನ್ನು ಅಲಾಯ್‌ ರಿಮ್‌ಗೆ ಅಳವಡಿಸಬಾರದು. ಇದರಿಂದ ಅಲಾಯ್‌ ಬದಿಗೆ ಒತ್ತಡ ಬಿದ್ದು ಹಾನಿಯಾಗುತ್ತದೆ.

ಹೊಂಡಗುಂಡಿಯಲ್ಲಿ ಜಾಗ್ರತೆ
ಹೊಂಡ ಗುಂಡಿಯ ರಸ್ತೆಯಲ್ಲಿ ಚಾಲನೆ ವೇಳೆ ತುಸು ಜಾಗರೂಕರಾಗುವುದು ಒಳ್ಳೆಯದು. ಒಂದು ವೇಳೆ ಅಲಾಯ್‌ ರಿಮ್‌ನ ಬದಿಗಳಿಗೆ ಹಾನಿಯಾದರೆ ಬೇಗನೆ ಬೆಂಡ್‌ ಬರುವ, ಗಾಳಿ ಕಡಿಮೆಯಾಗಿದ್ದರೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಅಲಾಯ್‌ಗೆ ಡಿಸ್ಕ್ ಬೆಸ್ಟ್‌
ಅಲಾಯ್‌ ರಿಮ್‌ ಇರುವ ಬೈಕ್‌ ಖರೀದಿಸುತ್ತೀರಿ ಎಂದಾದರೆ, ಡಿಸ್ಕ್ ಇರುವ ಬೈಕ್‌ ಅನ್ನೇ ಖರೀದಿಸಿ. ಅಲಾಯ್‌ ರಿಮ್‌ನ ಬೇಸ್‌ನಲ್ಲೇ ಡ್ರಮ್‌ ಇರುವುದರಿಂದ ಇದಕ್ಕೆ ಹಾನಿಯಾದರೆ, ಅಲಾಯ್‌ ರಿಮ್‌ಗೂ ಹಾನಿಯಾಗುತ್ತದೆ. ಆದರೆ ಡಿಸ್ಕ್ ನಲ್ಲಿ ಹೀಗಾಗಲು ಸಾಧ್ಯವಿಲ್ಲ.

ಆಫ್ರೋಡ್‌ಗೆ ಸೂಕ್ತವಲ್ಲ
ಕಡಿದಾದ ಮಣ್ಣಿನ ಮಾರ್ಗ, ಗುಡ್ಡ ಬೆಟ್ಟಗಳಲ್ಲಿ ಚಾಲನೆಗೆ ಅಲಾಯ್‌ರಿಮ್‌ಗಳು ಸೂಕ್ತವಲ್ಲ. ರಸ್ತೆ ಬದಿಯಲ್ಲಿರುವ ಕಲ್ಲುಗಳು ತಾಗಿದರೆ ಇದಕ್ಕೆ ಹಾನಿಯಾಗುತ್ತದೆ. ಜತೆಗೆ ತೀರಾ ಒತ್ತಡ ಸಹಿಸುವುದು ಕಷ್ಟ. ಆದ್ದರಿಂದ ಇಂತಹ ಮಾರ್ಗಗಳಲ್ಲಿ ಬಳಕೆ ಕಡಿಮೆ ಮಾಡಬೇಕು.

  ಈಶ

ಟಾಪ್ ನ್ಯೂಸ್

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.