ಧರ್ಮದ ಚೌಕಟ್ಟಿನಲ್ಲಿ ಕಾರ್ಯ ನಡೆಯಬೇಕು: ಪೇಜಾವರ ಶ್ರೀ
Team Udayavani, Feb 2, 2019, 12:30 AM IST
ಕುಂಬಳೆ: ಕಣ್ವತೀರ್ಥ ಶ್ರೀ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರದ ಸುತ್ತುಪೌಳಿಯ ಉದ್ಘಾಟನೆ ಮತ್ತು ಮಹಾಕಲಶಾಭಿÐಕ ಕಾರ್ಯಕ್ರಮವು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರ ನೇತೃತ್ವದಲ್ಲಿ ಬ್ರಹ್ಮಕಲಶ,ಆಶ್ಲೇಷ ಬಲಿ,ರಂಗಪೂಜೆ, ಶ್ರೀ ದೇವರಬಲಿ, ವೈದಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು. ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಮಾತನಾಡಿದರು.
ಧರ್ಮದ ಚೌಕಟ್ಟಿನಲ್ಲಿ ನಮ್ಮ ಕಾಯಕಗಳು ನಡೆಯಬೇಕು.ಅಧರ್ಮವನ್ನು ಮೆಟ್ಟಿ ನಿಲ್ಲಲು ಶಕ್ತಿ ನೀಡುವದೇ ನಾವು ಆರಾಧಿಸುವಂತ ದೇವ,ದೈವಗಳಿಂದ. ನಮ್ಮ ಕಾಯವು ಹಲವು ತಾಮಸ ಗುಣಗಳಿಂದ ಕೂಡಿದ್ದರೂ ದೇವ ದೈವಾರಾಧನೆಯಿಂದ ತಪೋಗುಣ ಜಾಗೃತವಾಗಿರುತ್ತದೆ.ಇಲ್ಲದೇ ಇದ್ದರೆ ದುರ್ಗುಣಗಳು,ರಾಕ್ಷಸಿ ಪ್ರವೃತ್ತಿಗಳು ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.
ಪೇಜಾವರ ಕಿರಿಯ ಪೀಠ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನಗಳನ್ನು ನುಡಿಯುತ್ತಾ ನಾವು ಉತ್ತಮ ಕರ್ಮಗಳನ್ನು ಮಾಡಿದರೆ ಮನುಷತ್ವ. ಮನುಷ್ಯನು ತನ್ನ ಕರ್ಮಫಲಗಳಿಂದ ಸುಖ ದುಃಖಗಳನ್ನು ಇಲ್ಲಿಯೇ ಅನುಭವಿಸುತ್ತಾನೆ. ದುರ್ಗುಣಗಳಿಗೆ ತಲೆ ಬಾಗದೆ ಸದ್ಗುಣ ಗಳಿಗೆ ಶಿರ ನಮಿಸ ಬೇಕು.ನಾಡಿನ ಸುಖ ಶಾಂತಿ ಸಮೃದ್ಧಿಗಳಿಗಾಗಿ ದೇಗುಲ ಗಳಲ್ಲಿ ಬ್ರಹ್ಮಕಲಶಾಧಿ ಕಾರ್ಯಗಳನ್ನು ನೆರವೇರಿಸುತ್ತೇವೆ ಎಂದು ಹೇಳಿದರು.ಮಧುಸೂಧನ ಆಚಾರ್ಯ ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರಿಬೈಲು ಗೋಪಾಲ ಶೆಟ್ಟಿಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಗಣ್ಯರ ಉಪಸ್ಥಿತಿ
ಧಾರ್ಮಿಕ ಮುಂದಾಳು,ದಾನಿ ಬಿ.ವಸಂತ ಪೈ ಬದಿಯಡ್ಕ ಅವರ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಸಾಮಾಜಿಕ ಮುಂದಾಳುಗಳಾದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು,ಸುಧಾಕರ ಅಡ್ಯಂತಾಯ ತಲಪ್ಪಾಡಿಗುತ್ತು,ವಿಜಯಕುಮಾರ್ ಬಾಂಞಿ ಹಿತ್ತಿಲು,ಮಂಜು ಭಂಡಾರಿ ಉದ್ಯಾವರಗುತ್ತು,ಉದ್ಯಾವರ ಕೇÒತ್ರದ ತಂತ್ರಿ ಗೋಪಾಲಕೃಷ್ಣ ಆಚಾರ್ಯ,ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.