ಜಾರ್ಜ್ ಚಿತಾಭಸ್ಮ ಇಂದು ಹುಟ್ಟೂರು ಬಿಜೈ ಚರ್ಚ್ಗೆ
Team Udayavani, Feb 2, 2019, 12:30 AM IST
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಚಿತಾ ಭಸ್ಮವನ್ನು ದಿಲ್ಲಿಯಿಂದ ತಂದು ಫೆ. 2ರಂದು ಸಂಜೆ 3.30ಕ್ಕೆ ಅವರ ಮಾತೃ ಚರ್ಚ್ ಬಿಜೈ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನಲ್ಲಿ ಪ್ರಾರ್ಥನಾ ವಿಧಿಗಳೊಂದಿಗೆ ದಫನ ಮಾಡಲಾಗುವುದು ಎಂದು ಚರ್ಚ್ನ ಪ್ರಧಾನ ಗುರು ಫಾ| ವಿಲ್ಸನ್ ವೈಟಸ್ ಡಿ’ಸೋಜಾ ತಿಳಿಸಿದ್ದಾರೆ. ದಿ| ಜಾರ್ಜ್ ಅವರ ಸೋದರ ಮೈಕೆಲ್ ಫೆರ್ನಾಂಡಿಸ್ ಅವರು ಚಿತಾಭಸ್ಮವನ್ನು ತರಲಿದ್ದಾರೆ.
ಶ್ರದ್ಧಾಂಜಲಿ ಸಭೆ
ಹುಟ್ಟೂರ ಶ್ರದ್ಧಾಂಜಲಿ ಸಭೆಯನ್ನು ಸಿಟಿಜನ್ ಕೌನ್ಸಿಲ್ ಮಂಗಳೂರು ವತಿ ಯಿಂದ ಫೆ.2ರಂದು ಸಂಜೆ 5 ಗಂಟೆಗೆ ನಗರದ ಕೊಡಿಯಾಲಬೈಲ್ನಲ್ಲಿರುವ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಿಟಿಜನ್ ಕೌನ್ಸಿಲ್ ಅಧ್ಯಕ್ಷ ಚಿದಾನಂದ ಕೆದಿಲಾಯ ಅವರು ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಾರ್ಜ್ ಫೆರ್ನಾಂಡಿಸ್ ಅವರು ದೇಶ ಕಂಡ ಧೀಮಂತ ರಾಜಕಾರಣಿಗಳಲ್ಲಿ ಒಬ್ಬರು. ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ, ಸಮಾಜವಾದಿ, ರಾಜಕಾರಣಿಯಾಗಿ ಕ್ರಿಯಾಶೀಲರಾಗಿದ್ದರು ಎಂದರು. ಕೌನ್ಸಿಲ್ನ ಖಜಾಂಚಿ ಗೌತಮ್ ಪೈ, ಗ್ಲಾಡ್ವಿನ್ ಡಿ’ಸಿಲ್ವಾ, ರಾಜೇಶ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.