ನೋ ಹಾರ್ನ್ ಡೇ: ಪೊಲೀಸ್, ಆರ್‌ಟಿಒ ಅಧಿಕಾರಿಗಳ ಜತೆ ಸಭೆ
Team Udayavani, Feb 2, 2019, 4:56 AM IST
ಸ್ಟೇಟ್ಬ್ಯಾಂಕ್: ಶಾಸಕ ಡಿ. ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ‘ನೋ ಹಾರ್ನ್ ಡೇ’ ಅಭಿಯಾನದ ಅಂಗವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಟ್ರಾಫಿಕ್ ವಿಭಾಗ, ಬಸ್ ಮಾಲಕರ ಸಂಘ, ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳ ಜತೆ ಶಾಸಕ ವೇದವ್ಯಾಸ್ ಕಾಮತ್ ಶುಕ್ರವಾರ ಸಭೆ ನಡೆಸಿದರು.
ನಗರ ಪ್ರದೇಶದಲ್ಲಿ ಪ್ರತಿನಿತ್ಯ ವಾಹನಗಳ ಹಾರ್ನ್ ಶಬ್ದದಿಂದಾಗಿ ಉಂಟಾಗುವ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೋ ಹಾರ್ನ್ ಡೇ ಅಭಿಯಾನ ಪ್ರಾರಂಭಿಸಿಸಲಾಗಿದೆ. ಈ ಹಿಂದೆ ನಗರದ ಹಂಪನಕಟ್ಟೆ ವೃತ್ತದಿಂದ ಮುಂದುವರಿದು ಕ್ಲಾಕ್ ಟವರ್ ವೃತ್ತದವರೆಗಿನ ರಸ್ತೆಯನ್ನು, ಅತ್ತಾವರ ಕೆಎಂಸಿ ಆಸ್ಪತ್ರೆಯ ಉತ್ತರ ಬದಿಯ ಕಾಂಪೌಂಡು ಸಮೀಪದಿಂದ ಬಿಷಪ್ ವಿಕ್ಟರ್ ರಸ್ತೆಯ ತಿರುವಿನ ತನಕ ಶಬ್ದ ರಹಿತ ವಲಯ (ನೋ ಹಾರ್ನ್ ಝೋನ್) ಎಂದು ಅಧಿಸೂಚನೆ ಹೊರಡಿಸಲಾಗಿತ್ತಾದರೂ ಅದು ಯಶಸ್ವಿಯಾಗಿರಲಿಲ್ಲ. ಈಗ ಅದನ್ನು ಒಂದಷ್ಟು ವಿಸ್ತರಿಸಿ ಶಬ್ದ ರಹಿತ ವಲಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಆರ್‌ಟಿಒ ಕೂಡ ಕೈ ಜೋಡಿಸಿದರೆ ಇದನ್ನು ಸಾಕಾರಗೊಳಿಸಬಹುದು ಎಂದು ಶಾಸಕರು ಮನವಿ ಮಾಡಿದರು.
ಆಸ್ಪತ್ರೆ, ಶಾಲಾ ಕಾಲೇಜು ಪರಿಸ ರದಲ್ಲಿ ವಾಹನಗಳ ಕರ್ಕಶ ಹಾರ್ನ್ ಗಳಿಂದ ಸಮಸ್ಯೆಯಾಗುತ್ತಿದ್ದು, ಅವೆಲ್ಲವನ್ನೂ ದೃಷ್ಟಿಯಲ್ಲಿಟ್ಟು ಕೊಂಡು ಜನರು ಸ್ಪಂದಿಸಬೇಕು. ಯಾವುದೇ ಅಭಿಯಾನ ಸಾಕಾರಗೊಳ್ಳಬೇಕಾದರೆ ಜನರು ಮನಃಪೂರ್ವಕವಾಗಿ ಒಗ್ಗಿಕೊಳ್ಳುವಂತಾ ಗಬೇಕು. ಆಗ ಅಭಿಯಾನ ಯಶಸ್ವಿಯಾ ಗುತ್ತದೆ ಎಂದು ಶಾಸಕರು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿ ಉಮಾ ಪ್ರಶಾಂತ್, ಆರ್‌ಟಿಒ ಜಾನ್ ಮಿಸ್ಕಿತ್, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜ ವರ್ಮ ಬಲ್ಲಾಳ್, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.