ಹೈಕ ಭಾಗಕ್ಕಿಲ್ಲ ನಿರೀಕ್ಷಿತ ಯೋಜನೆ
Team Udayavani, Feb 2, 2019, 6:47 AM IST
ಕೇಂದ್ರ ಸರ್ಕಾರದ ಐದು ವರ್ಷಗಳ ಆಡಳಿತಾವಧಿಯ ಕೊನೆಯ ಬಜೆಟ್ ಮೇಲೆ ಹಲವು ನಿರೀಕ್ಷೆ ಇಟ್ಟುಕೊಂಡಿದ್ದ ಹೈಕ ಭಾಗದ ಜನರು, ಶುಕ್ರವಾರ ಮಂಡನೆಯಾದ ಬಜೆಟ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರಾಜಕೀಯವಾಗಿ ಪರ-ವಿರೋಧ ವ್ಯಕ್ತವಾಗಿದ್ದರೂ, ಹೈಕ ಭಾಗಕ್ಕೆ ಯಾವುದೇ ಪ್ರಮುಖ ಯೋಜನೆಗಳು ಪ್ರಸ್ತಾವನೆಯಾಗಿಲ್ಲ ಎಂದು ಹಲವಾರು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಸಂಸತ್ತಿನಲ್ಲಿ ಶುಕ್ರವಾರ ಮಂಡನೆ ಆಗಿರುವ ಕೇಂದ್ರದ 2019-20ನೇ ಸಾಲಿನ ಮಧ್ಯಂತರ ಮುಂಗಡ ಪತ್ರ ಐತಿಹಾಸಿಕವಾಗಿದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಚುನಾವಣೆ ಬಜೆಟ್ ಎಂದು ಟೀಕಿಸಿದ್ದಾರೆ.
ರೈತಪರವಾದ ಕೆಲವು ಯೋಜನೆಗಳು ಹಾಗೂ ಅಂಗನವಾಡಿ- ಆಶಾ ಕಾರ್ಯಕರ್ತೆಯರು, ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರುವುದು ಮಾದರಿ ಕಾರ್ಯಗಳಾಗಿವೆ. ಅದೇ ರೀತಿ 60 ವರ್ಷ ನಂತರದವರಿಗೆ ಮಾಸಾಶನ ಹೆಚ್ಚಿಸಿರುವುದು, ಜಾನುವಾರು ಸಾಕಾಣಿಕೆಗೆ ಬೇಕಾದ ಸಂಪೂರ್ಣ ನೆರವು, ಆದಾಯ ಮಿತಿ ಡಬಲ್‌ಗೊಳಿಸಿರುವುದು, ಮೇಕ್ ಇನ್ ಇಂಡಿಯಾ ಅಡಿ 12 ಲಕ್ಷ ಯುವಕರಿಗೆ ಉದ್ಯೋಗ ಮುಂತಾದ ಅಂಶಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ವಿಶ್ಲೇಷಿಸಲಾಗಿದೆ.
ಉಜ್ವಲ ಯೋಜನೆ ಅಡಿ ಒಂದು ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ, ಏಳನೇ ವೇತನ ಆಯೋಗ ಜಾರಿ, ಅಲೆಮಾರಿ ಜನಾಂಗ ಗುರುತಿಸಿ ಅನುದಾನ ನೀಡುವ ಮುಖಾಂತರ ಸರ್ವರ ಹಿತ ಕಾಯಲು ಮುಂದಾಗಿರುವುದು ಸ್ಪಷ್ಟವಾಗಿದೆ ಎಂದು ವಿವರಣೆ ನೀಡಿದ್ದರೆ, ಇನ್ನು ಕೆಲವರು ಬಜೆಟ್‌ನ ಘೋಷಣೆಗಳು ಕಾರ್ಯರೂಪಕ್ಕೆ ಬರುವುದು ಅನುಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ವಿಭಾಗಕ್ಕೆ ಸಂಬಂಧಿಸಿದಂತೆ ಕೇಂದ್ರ ಮುಂಗಡ ಪತ್ರದಲ್ಲಿ ವಿಶೇಷವಾಗಿ ಯಾವುದನ್ನು ಪ್ರಸ್ತಾಪಿಸಿಲ್ಲ. ರೈಲ್ವೆ ಇಲಾಖೆ, ಕೈಗಾರಿಕೆ ವಲಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರ ವಿಷಯಗಳ ಕುರಿತು ಪ್ರಸ್ತಾಪಿಸಬೇಕಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಗಡ ಪತ್ರಕ್ಕೆ ಎಚ್ಕೆಸಿಸಿಐ ಮಿಶ್ರಪ್ರತಿಕ್ರಿಯೆ: ಮುಂಗಡ ಪತ್ರದಲ್ಲಿ ಕೆಲವು ಅಂಶಗಳು ಉತ್ತಮವಾಗಿವೆ. ಆದರೂ ಬಜೆಟ್‌ನಲ್ಲಿ ಹೈ.ಕ ಭಾಗದ ನನೆಗುದಿಗೆ ಬಿದ್ದ ಯೋಜನೆಗಳು ಹಾಗೂ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ಏನನ್ನೂ ಪ್ರಸ್ತಾಪಿಸದಿರುವುದು ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್ಕೆಸಿಸಿಐ) ತನ್ನ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಎರಡು ಹೆಕ್ಟೇರ್‌ವರೆಗೆ ದೇಶದ ಸಣ್ಣ ರೈತರಿಗೆ ನೇರವಾಗಿ ಆರು ಸಾವಿರ ರೂ. ವರ್ಗಾವಣೆ ಮಾಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಪರಿಚಯಿಸಿ 2019-20 ಸಾಲಿನಲ್ಲಿ 75 ಸಾವಿರ ಕೋಟಿ ರೂ. ಪಿಎಂ ಕಿಸಾನ್ ಯೋಜನೆಗೆ ಮೀಸಲಿಟ್ಟಿರುವುದು, ಜಾನುವಾರ ಸಾಕಾಣಿಕೆಗೆ ಪ್ರೋತ್ಸಾಹ, ಮೀನುಗಾರಿಕೆ ಶೇ. 2ದರದಲ್ಲಿ ಕಿಸಾನ ಕ್ರೆಡಿಟ್ ಕಾರ್ಡ್‌ನಿಂದ ಸಾಲ ನೀಡುವುದು. ಶೇ. 3ದರದಲ್ಲಿ ಸಮಯಕ್ಕೆ ಸಾಲ ಪಾವತಿಸಿದ ರೈತರಿಗೆ ಮತ್ತೆ ಸಾಲ ನೀಡುವುದು, ನೈಸರ್ಗಿಕ ಹಾನಿಗೊಳಗಾದ ರೈತರಿಗೆ ಶೇ. 2ರ ಬಡ್ಡಿದರದಲ್ಲಿ ಸಾಲ ಮರುಪಾವತಿಗೆ ಅವಕಾಶ, ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ್ ಯೋಜನೆ ಮುಖಾಂತರ 60 ವರ್ಷ ಮೇಲಿರುವ ಕಾರ್ಮಿಕರಿಗೆ 3 ಸಾವಿರ ರೂ. ಪಿಂಚಣಿ ಘೋಷಣೆ ಸ್ವಾಗತಾರ್ಹವಾಗಿದೆ ಎಂದು ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ, ಆದಾಯ ತೆರಿಗೆ ಉಪ ಸಮಿತಿ ಅಧ್ಯಕ್ಷ ಗುರುದೇವ ದೇಸಾಯಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ತೆರಿಗೆ ಆದಾಯ ಮಿತಿ 2.50 ಲಕ್ಷ ರೂ.ದಿಂದ 5 ಲಕ್ಷ ರೂ. ವರೆಗೆ ಹೆಚ್ಚಳ ಮಾಡಿರುವುದು, ವೇತನದಾರರಿಗೆ ಮೌಲ್ಯವರ್ಧಿತ ತೆರಿಗೆ 40 ಸಾವಿರ ರೂ. ದಿಂದ 50 ಸಾವಿರ ರೂ. ಹೆಚ್ಚಳ ಮಾಡಿರುವುದು, ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಇಟ್ಟಂತಹ ಉಳಿತಾಯಕ್ಕೆ ಬಡ್ಡಿಗೆ 10 ಸಾವಿರ ರೂ.ದಿಂದ 40 ಸಾವಿರ ರೂ. ವರೆಗೆ ಟಿಡಿಎಸ್ ಇಲ್ಲದಿರುವುದು, ಬಾಡಿಗೆ ಮೇಲಿನ ಟಿಡಿಎಸ್ 1.80 ಲಕ್ಷ ರೂ.ದಿಂದ 2.40 ಲಕ್ಷ ರೂ. ವರೆಗೂ ಹೆಚ್ಚಳ ಮಾಡಿರುವುದು, ಮನೆ ಮಾರಿದ ನಂತರ ಹೊಸದಾಗಿ ಎರಡು ಮನೆಗಳ ದುರಸ್ಥಿ, ಖರೀದಿಗೆ ಅವಕಾಶ ನೀಡುವುದು, ಮನೆಗಳಿಂದ 2 ಕೋಟಿ ರೂ. ಉಳಿತಾಯ ಮಾಡುವುದು ಸೇರಿದಂತೆ ಇತರ ಅಂಶಗಳು ಸ್ವಾಗತಾರ್ಹ ಎಂದಿದ್ದಾರೆ.
ನಿರಾಸೆ: ಹೈ.ಕ ಭಾಗದ 371ನೇ (ಜೆ) ಕಲಂ ಜಾರಿಗೆ ಬಂದಿದ್ದರೂ, ವಿಶೇಷ ಸ್ಥಾನ ಕಲ್ಪಿಸಿದ್ದರೂ ಕೇಂದ್ರದಿಂದ ನಯಾಪೈಸೆ ಅನುದಾನ ನೀಡದಿರುವುದು, ಈಶಾನ್ಯ ರಾಜ್ಯಗಳಿಗೆ ನೀಡುವ ಅನುದಾನದಂತೆ ಹೈಕ ಭಾಗಕ್ಕೆ ನೀಡುವಂತೆ ಒತ್ತಾಯ ಮಾಡಲಾಗಿತ್ತು. ಆದರೆ ಇದನ್ನು ಪರಿಗಣಿಸಿಲ್ಲ. ಅದೇ ರೀತಿ ವಿಶೇಷ ಕೈಗಾರಿಕಾ ಬಂಡವಾಳ ಹೂಡಿಕೆ ವಲಯ (ನಿಮ್ಜ್) ಸ್ಥಾಪನೆ ನಿಟ್ಟಿನಲ್ಲಿ ಚಕಾರ ಎತ್ತದಿರುವುದು, ಮೇಕ್ ಇನ್ ಇಂಡಿಯಾ ಅಡಿ ಹೈ.ಕ ಭಾಗಕ್ಕೆ ವಿಶೇಷ ಆದ್ಯತೆ ನೀಡಬೇಕಿತ್ತು. 21 ಪ್ರತಿಶತ ಹೈ.ಕ ಭಾಗಕ್ಕೆ ಕೈಗಾರಿಕಾಭಿವೃದ್ಧಿಗೆ ಅನುದಾನ ಮೀಸಲಿಡುವ ಅಂಶಗಳಿಗೆ ಕೇಂದ್ರ ಸರ್ಕಾರ ಮಾನ್ಯತೆ ನೀಡದಿರುವುದು ಹಾಗೂ ಮುಖ್ಯವಾಗಿ ಇಎಸ್‌ಐ ವೈದ್ಯಕೀಯ ಸಂಕೀರ್ಣದಲ್ಲಿ 1400 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಏಮ್ಸ್ ಸ್ಥಾಪನೆ ಕುರಿತಾಗಿಯೂ ನಿರ್ಧಾರ ಪ್ರಕಟಿಸಿದಿರುವುದು ಬೇಸರ ತರಿಸಿದೆ ಎಂದು ವಿವರಣೆ ನೀಡಿದ್ದಾರೆ.
ಅದೇ ರೀತಿ ಕಲಬುರಗಿ ರೈಲ್ವೆ ವಿಭಾಗಕ್ಕೆ 2014ರಲ್ಲಿಯೇ ಅನುಮೋದನೆ ನೀಡಿ 5 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಪ್ರಸ್ತುತ ಬಜೆಟ್ದಲ್ಲಿ ಕೇವಲ ಒಂದು ಲಕ್ಷ ರೂ. ಇಡುವ ಮುಖಾಂತರ ಹೈ.ಕ ಭಾಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಪ್ರತಿಕ್ರಿಯಿಸಿದಲಾಗಿದೆ. ಸಹಭಾಗಿತ್ವ ಉದ್ದಿಮೆಗಳಲ್ಲಿನ ತೆರಿಗೆಯನ್ನು ಶೇ. 30ರಿಂದ ಶೇ. 25ಕ್ಕೆ ಇಳಿಸಲು ಮನವಿ ಮಾಡಲಾಗಿತ್ತು. ಆದರೆ ಇದನ್ನು ಸಾರಾಸಗಟಾಗಿ ತಳ್ಳಿ ಹಾಕಲಾಗಿದೆ. 40 ಎ(3) ಆದಾಯ ತೆರಿಗೆ ಕಾಯ್ದೆ ಅಡಿ ವಾಣಿಜ್ಯ ಮತ್ತು ವ್ಯವಹಾರ 10ಸಾವಿರ ರೂ.ದಿಂದ 50 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂಬುದನ್ನು ನಿರ್ಲಕ್ಷಿಸಲಾಗಿದೆ. ಇದೊಂದು ಬಜೆಟ್ ಅಭಿವೃದ್ಧಿಪರ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.
ಗದಗ-ವಾಡಿಗೆ 150 ಕೋಟಿ
ಕೊಪ್ಪಳ: ಬಹು ವರ್ಷಗಳ ಬೇಡಿಕೆಯಾಗಿದ್ದ ಗದಗ-ವಾಡಿ ರೈಲ್ವೆ ಹಳಿ ನಿರ್ಮಾಣಕ್ಕೆ ಕೇಂದ್ರದ ಬಜೆಟ್‌ನಲ್ಲಿ 150 ಕೋಟಿ ಅನುದಾನ ಮೀಸಲಿಟ್ಟಿದೆ. ಕಳೆದ ವರ್ಷವೂ ಸಹಿತ 150 ಕೋಟಿ ರೂ. ಘೋಷಣೆ ಮಾಡಿತ್ತು. ಹಾಗಾಗಿ ಈ ಯೋಜನೆ ವೇಗ ಪಡೆದುಕೊಳ್ಳಬೇಕಿದೆ. ಇನ್ನು ಹಲವೆಡೆ ರೈಲ್ವೆ ಕೆಳ, ಮೇಲ್ಸೇತುವೆ ನಿರ್ಮಾಣಕ್ಕೂ ಅನುದಾನ ಘೋಷಿಸಿದ್ದು, ಬಿಟ್ಟರೆ ಮತ್ತ್ಯಾವ ಮಹತ್ವದ ಯೋಜನೆಗಳು ಸಿಕ್ಕಿಲ್ಲ. ಹೌದು… ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ವೇಗ ಪಡೆದುಕೊಳ್ಳುವ ಅವಶ್ಯಕತೆಯಿದೆ. ಗದಗ-ವಾಡಿ ರೈಲು ನಿರ್ಮಾಣದಿಂದ ಜನ ಸಂಪರ್ಕ ಹಾಗೂ ವ್ಯಾಪಾರ ವಹಿವಾಟಿನ ಜೊತೆಗೆ ಜನ ಸಂಪರ್ಕಕ್ಕೂ ಅನುಕೂಲವಾಗಿದೆ. ಈ ಯೋಜನೆಯಡಿಯಲ್ಲಿ ಹಲವು ಹಳ್ಳಿಗಳಲ್ಲಿ ರೈಲು ಸಂಚಾರ ಮಾಡಲಿದೆ. ಈ ಭಾಗದ ಹಲವು ನಾಯಕರ ಕನಸಾಗಿದ್ದ ಗದಗ, ವಾಡಿ ಯೋಜನೆಗೆ ಈ ಹಿಂದೆಯೇ ಘೋಷಣೆ ಮಾಡಿದೆ. ಆದರೆ, ಅನುದಾನ ಮಾತ್ರ ಅಲ್ಪ ಪ್ರಮಾಣದಲ್ಲಿ ಮೀಸಲಿಡುತ್ತಾ ಸಾಗುತ್ತಿದೆ. ಹೀಗಾದರೆ ಕಾಮಗಾರಿಗಳಿಗೆ ವೇಗ ಪಡೆಯುವುದು ತುಂಬ ಕಷ್ಟವಾಗಲಿದೆ.
ಹೆಚ್ಚಿನ ಮೊತ್ತ ನಿಗದಿ ಮಾಡಿದರೆ, ಯೋಜನೆಗಳು ತ್ವರಿತಗತಿಯಲ್ಲಿ ನಡೆಸಲು ಸಾಧ್ಯವಾಗಲಿದೆ. ಇದರ ಜೊತೆಗೆ ಬಜೆಟ್‌ನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಿಣಿಗೇರಾ ರೈಲ್ವೆ ಗೇಟ್-ನಂ.72, ಕುಷ್ಟಗಿ ರೈಲ್ವೆ ಗೇಟ್ ನಂ-66, ಹುಲಗಿ ರೈಲ್ವೆ ಗೇಟ್ ನಂ-79, ಮೇಲ್ಸೇತುವೆಗೆ ಗೆ 10 ಕೋಟಿ, ರೈಲ್ವೆ ಹಳಿಗಳ ಸುಧಾರಣೆಗೆ 50 ಕೋಟಿ, ಭಾನಾಪುರ ರೈಲ್ವೆ ಹಳಿ ಸೇತುವೆಗೆ 5 ಕೋಟಿ ರೂ., ಭಾಗ್ಯನಗರ ರೈಲ್ವೆ ಗೇಟ್ ನಂ-62ಗೆ 10 ಕೋಟಿ ಬಜೆಟ್‌ನಲ್ಲಿ ದೊರೆತಿದೆ. ರೈಲ್ವೆ ಕೆಳ ಹಾಗೂ ಮೇಲ್ಸೇತುವೆ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಆದರೆ, ಅನುದಾನ ಮಾತ್ರ ಕಡಿಮೆ ಪ್ರಮಾಣದಲ್ಲಿ ಮೀಸಲಿಟ್ಟಿರುವುದು ಬೇಸರದ ಸಂಗತಿ. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರೈಲ್ವೆ ಯೋಜನೆಗಳ ಘೋಷಣೆಗೆ ಮಹತ್ವ ಕೊಡಬೇಕಿತ್ತು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಕೇಂದ್ರದ 2019-20ನೇ ಸಾಲಿನ ಮಧ್ಯಂತರ ಮುಂಗಡ ಪತ್ರ ಐತಿಹಾಸಿಕದಿಂದ ಕೂಡಿದೆ. ಬಹು ಮುಖ್ಯವಾಗಿ ರೈತರ, ಕಾರ್ಮಿಕರ, ನೌಕರ ವರ್ಗದವರ, ಕಾರ್ಮಿಕರ ಅದರಲ್ಲೂ ಯುವಕರಿಗೆ ಉದ್ಯೋಗ ಸೃಷ್ಟಿ ನಿಟ್ಟಿನಲ್ಲಿ ಅಮೂಲಾಗ್ರ ಯೋಜನೆಗಳನ್ನು ಪ್ರಕಟಿಸಿರುವುದು ಸರ್ವ ಜನರ ಕಲ್ಯಾಣಾಭಿವೃದ್ಧಿ ಅಡಿಪಾಯ ಭದ್ರ ಪಡಿಸುವಂತಾಗಿದೆ. ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದ ತೆರಿಗೆ ಆದಾಯ ಮಿತಿ 2.50 ಲಕ್ಷ ರೂ.ದಿಂದ 5 ಲಕ್ಷ ರೂ. ವರೆಗೆ ಹೆಚ್ಚಳ ಮಾಡಿರುವುದು ಐತಿಹಾಸಿಕವಾಗಿದೆ. ವೇತನದಾರರಿಗೆ ಮೌಲ್ಯವರ್ಧಿತ ತೆರಿಗೆ 40 ಸಾವಿರ ರೂ.ದಿಂದ 50 ಸಾವಿರ ರೂ. ಹೆಚ್ಚಳ ಮಾಡಿರುವುದು, ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಇಟ್ಟಂತಹ ಉಳಿತಾಯಕ್ಕೆ ಬಡ್ಡಿಗೆ 10 ಸಾವಿರದಿಂದ 40 ಸಾವಿರ ರೂ. ವರೆಗೆ ಟಿಡಿಎಸ್ ಇಲ್ಲದಿರುವುದು ಎಲ್ಲರ ಹಿತ ಕಾಪಾಡಿದಂತಾಗಿದೆ.
•ದತ್ತಾತ್ರೇಯ ಪಾಟೀಲ ರೇವೂರ,•ರಾಜಕುಮಾರ ಪಾಟೀಲ ತೇಲ್ಕೂರ, •ಬಸವರಾಜ ಮತ್ತಿಮಡು, ಶಾಸಕರು
ಜಿಡಿಪಿ ಹೆಚ್ಚಿಸುವಲ್ಲಿ ಪೂರಕ
ಕೇಂದ್ರದ ಮುಂಗಡ ಪತ್ರ ಹಣದುಬ್ಬರ ನಿಯಂತ್ರಿಸಿ ಜಿಡಿಪಿಯನ್ನು ಸರ್ಕಾರ ದೃಢ ಹೆಜ್ಜೆ ಇಟ್ಟಿರುವುದನ್ನು ನಿರೂಪಿಸುತ್ತದೆ. ದೇಶದ ರೈತರ, ಬಡವರ, ಮಧ್ಯಮ ವರ್ಗದವರ ಹಾಗೂ ಹಿರಿಯ ನಾಗರಿಕರಿಗೆ ಪಿಂಚಣಿ ಜಾರಿ ತಂದು ಜೀವನ ಭದ್ರತೆಗೆ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ.
•ಭಗವಂತ ಖೂಬಾ, ಸಂಸದರು, ಬೀದರ
ಬಜೆಟ್ ಓದಿ ಪ್ರತಿಕ್ರಿಯಿಸುತ್ತೇನೆ
ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರಿಂದ ಬಜೆಟ್ ಕಡೆ ಗಮನ ಹರಿಸಲು ಆಗಿಲ್ಲ.
•ಡಾ| ಉಮೇಶ ಜಾಧವ್, ಶಾಸಕ, ಚಿಂಚೋಳಿ
ಹೈ.ಕ ಭಾಗಕ್ಕೆ ನಿರಾಶಾದಾಯಕ
ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಕಾರ್ಯಾರಂಭ, ಇಎಸ್‌ಐ ಆಸ್ಪತ್ರೆಯಲ್ಲಿ ಏಮ್ಸ್ ಸ್ಥಾಪನೆ, ನಿಮl ಸ್ಥಾಪನೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತಾಗಿ ಮುಂಗಡ ಪತ್ರದಲ್ಲಿ ಚಕಾರ ಎತ್ತದಿರುವುದು ಈ ಭಾಗಕ್ಕೆ ಸಂಪೂರ್ಣ ನಿರಾಸದಾಯಕ ತಂದಿದೆ. ಬಹು ಮುಖ್ಯವಾಗಿ ಈ ಭಾಗದವರ ಭಾವನಗೆಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.
•ಲಕ್ಷ್ಮಣ ದಸ್ತಿ, ಅಧ್ಯಕ್ಷರು, ಹೈ.ಕ ಜನಪರ ಸಂಘರ್ಷ ಸಮಿತಿ
ಮಾನ್ಯತೆ ಇಲ್ಲದ ಬಜೆಟ್
ಕೇಂದ್ರ ಸರ್ಕಾರದ ಅವಧಿ ಮುಗಿದಿದೆ. ಇನ್ನೆನಿದ್ದರೂ ಚುನಾವಣೆಯೇ ಮಾತ್ರ. ಇಂತಹ ಸಮಯದಲ್ಲಿ ಬಜೆಟ್ದಲ್ಲಿ ಏನೇನು ಬೇಕು ಅದನ್ನೆಲ್ಲ ಹೇಳಲಾಗಿದೆ. ಜನಾಭಿಪ್ರಾಯ ಮೂಡಿಸುವಲ್ಲಿ ಬಾಲಿಷತನ ಹೇಳಿಕೆಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ ಈ ಬಜೆಟ್ ಮಾನ್ಯತೆ ಇಲ್ಲದ್ದಾಗಿದೆ. ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ನೀಡಲು ಮುಂದಾಗಿರುವುದು ದಿನಕ್ಕೆ ಕುಟುಂಬಕ್ಕೆ ನಾಲ್ಕೈದು ರೂ. ನೀಡಿದಂತಾಗಿದೆ. ಇದರ ಬದಲು ಕೃಷಿ ಉತ್ಪಾದನಾ ವಲಯ ಹೆಚ್ಚಿಸುವುದು, ಬೆಳೆಗಳಿಗೆ ಸೂಕ್ತ ಬೆಲೆ ನೀಡುವ ಕುರಿತಾಗಿ ಯಾವುದೇ ವಿಷಯ ಪ್ರಸ್ತಾಪಿಸಿಲ್ಲ. ಒಟ್ಟಾರೆ ಈ ಬಜೆಟ್ ಹಗಲಿನಲ್ಲಿ ಚಂದ್ರಮನನ್ನು ತೋರಿಸಿದಂತಿದೆ.
•ಮಾರುತಿ ಮಾನ್ಪಡೆ, ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rapper Badshah: ಬಾಲಿವುಡ್ ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂಬ್ ಸ್ಪೋಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.