ಕರುಣರತ್ನೆ ತಲೆಗೆ ಬಡಿದ ಕಮಿನ್ಸ್ ಬೌನ್ಸರ್:ಆಸ್ಪತ್ರೆಗೆ ದಾಖಲಾದ ಆಟಗಾರ
Team Udayavani, Feb 2, 2019, 10:18 AM IST
ಕ್ಯಾನ್ ಬೆರಾ: ಶ್ರೀಲಂಕಾ ತಂಡದ ಆರಂಭಿಕ ಆಟಗಾರ ದಿಮುತ್ತ ಕರುಣರತ್ನೆ ತಲೆಗೆ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಎಸೆದ ಬೌನ್ಸರ್ ಬಡಿದಿದ್ದು, ಕರುಣರತ್ನೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇನ್ನಿಂಗ್ಸ್ ನ 38ನೇ ಓವರ್ ನ ವೇಳೆ ಕಮಿನ್ಸ್ ಎಸೆದ ಬೌನ್ಸರ್ ಅನ್ನು ತಪ್ಪಿಸುವ ಪ್ರಯತ್ನ ಮಾಡಿದರೂ ಚೆಂಡು ಕರುಣರತ್ನೆ ತಲೆಗೆ ಬಡಿದಾಗಿತ್ತು. ತಕ್ಷಣ ಕುಸಿದು ಬಿದ್ದ ಅವರನ್ನು ಕೂಡಲೇ ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 524 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇದನ್ನು ಬೆನ್ನಟ್ಟಿದ ಶ್ರೀಲಂಕಾಗೆ ಆರಂಭಿಕರು ಉತ್ತಮ ಅಡಿಪಾಯ ಹಾಕಿದ್ದರು. 46 ರನ್ ಗಳಿಸಿದ್ದ ಕರುಣರತ್ನೆ ಬೌನ್ಸರ್ ಪೆಟ್ಟು ತಿಂದು ಆಸ್ಪತ್ರೆ ಪಾಲಾದರೆ, ಲಹಿರು ತಿರುಮನ್ನೆ 41 ರನ್ ಗಳಿಸಿ ಔಟಾದರು. ದಿನದ ಅಂತ್ಯಕ್ಕೆ ಲಂಕಾ ಮೂರು ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leh; ಐಸ್ ಹಾಕಿ ಲೀಗ್ ದ್ವಿತೀಯ ಆವೃತ್ತಿಯ ಟ್ರೋಫಿ- ಜೆರ್ಸಿ ಅನಾವರಣ
NZvsENG: 147 ವರ್ಷಗಳಲ್ಲೇ ಮೊದಲ ಬಾರಿ..; ಹೊಸ ದಾಖಲೆ ಬರೆದ ಕೇನ್ ವಿಲಿಯಮ್ಸನ್
SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್! ಆಗಿದ್ದೇನು?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
MUST WATCH
ಹೊಸ ಸೇರ್ಪಡೆ
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ
Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.