ಸಹೃದಯ ಕಲಾಬಂಧುಗಳೇ…ಸಂಧಿಕಾಲ
Team Udayavani, Feb 3, 2019, 12:30 AM IST
ಕಳೆದ ಸಂಚಿಕೆಯಿಂದ ಮುಂದುವರಿದುದು
ಶಂಭು ಹೆಗಡೆಯವರಿಗೆ ವಿನ್ಯಾಸದ ದೃಷ್ಟಿ ಇತ್ತು ಎಂದು ಮೊದಲೇ ಹೇಳಿದ್ದೇನೆ. ದೆಹಲಿಯಲ್ಲಿ ಹೆಗಡೆಯವರು ಕಲಿತ ಮೂರು ವರುಷದ ಕೊರಿಯೋಗ್ರಫಿ ಯಕ್ಷಗಾನಕ್ಕೆ ಆದ ಒಂದು ದೊಡ್ಡ ಲಾಭವೆನ್ನಬೇಕು. ಮಾಯಾ ರಾವ್ ಗುರುವಾದರೆ ರಾಜಾ ರೆಡ್ಡಿ ಮತ್ತು ರಾಧಾ ರೆಡ್ಡಿಯಂಥವರು ಸಹಪಾಠಿಗಳು. ಎಲ್ಲರೂ ತಮ್ಮ ತಮ್ಮ ಕಲಾಕ್ಷೇತ್ರದ ಶಿಖರವೇ ಸರಿ. ಹೆಗಡೆಯವರು ಅಲ್ಲಿ ಭಾರತೀಯ ಜಾನಪದ ಮತ್ತು ಶಿಷ್ಟ ಕಲೆಗಳನ್ನು ಅರ್ಥಮಾಡಿಕೊಂಡರು. ಆತನ ಮಿಂಚಿನ ನಡೆ, ಪ್ರತ್ಯುತ್ಪನ್ನಮತಿತ್ವ, ನಟನೆ ಮತ್ತು ನಟನ ಸಂಬಂಧದ ಕಲ್ಪನೆ ಮತ್ತು ಕತೆಯನ್ನು ನಟಿಸುವ ರೀತಿ ಬಹಳ ವಿಶಿಷ್ಟವಾದದ್ದು ಎಂದು ಅವರ ಗುರುಗಳಾದ ಮಾಯಾರಾವ್ ಮತ್ತು ಅಣ್ಣ ಮಹಾಬಲ ಹೆಗಡೆಯವರು ಹೇಳುತ್ತಿದ್ದರು. ದೆಹಲಿಯಲ್ಲಿ ಕಲಿತು ಬಂದ ನಂತರ ಯಕ್ಷಗಾನ ಕಲೆಯನ್ನು ನೋಡುವ ದೃಷ್ಟಿ ಬೇರಾಯಿತು ಎಂದು ಹೇಳುವುದಕ್ಕಿಂತ, ಅದು ಇನ್ನೂ ಎತ್ತರಕ್ಕೆ ತಲುಪಿತು ಎನ್ನಬೇಕು. ಯಕ್ಷಗಾನದ ಒಟ್ಟೂ ಚೌಕಟ್ಟಿಗೆ ಭಂಗ ಬಾರದಂತೇ ಹೇಗೆ ಹೊಸದಾಗಿ ಅಭಿವ್ಯಕ್ತಿಸಬೇಕು ಎನ್ನುವ ಅರಿವು ಮತ್ತು ಕಾಳಜಿ ಇದ್ದಿದ್ದರಿಂದ ತೆರೆಯನ್ನು ಬಳಸುವ ರೀತಿ, ನೃತ್ಯ ಭಂಗಿಗಳ ಸುಧಾರಣೆ, ಧೀರ, ಸೌಮ್ಯ, ಉಗ್ರ, ದುಷ್ಟ ಪಾತ್ರಗಳಿಗೆ ಮಿಲಿತವಾಗುವ ಆಹಾರ್ಯ ಮತ್ತು ಒಟ್ಟು ಆಕೃತಿಗಳು ಪರಿಷ್ಕರಣಗೊಂಡವು. ಕಥಾಭಾಗವನ್ನು ಒಟ್ಟೂ ಒಂದು ಕಲಾಕೃತಿಯನ್ನಾಗಿ ಮಾಡುವ ರೀತಿಗೆ ಒತ್ತು ಕೊಡಲಾಯಿತು.
ಹೆಗಡೆಯವರ ಎಲ್ಲ ನಿಲುವುಗಳು ವಿಶಿಷ್ಟ , ಮತ್ತು ಅದಕ್ಕೆ ಬದ್ಧ ಕೂಡ. ಮತ್ತೆ ಅವಕ್ಕೆ ಫಾ‚ರಿನ್ ಸ್ಕಾಲರ್‌ಗಳ ಮೊಹರು ಬೇಕಾಗಿರಲಿಲ್ಲ. ಉದಾಹರಣೆಗೆ ಅವರಲ್ಲಿ ನಿಮಗೆ ಯಾವ ಪಾತ್ರದ ನಿರ್ವಹಣೆ ಇಷ್ಟವೆಂದು ಕೇಳಿದರೆ ಉತ್ತರ ಸಿಗುತ್ತಿರಲಿಲ್ಲ. ಅವರು ಪ್ರೇಕ್ಷಕನಿಗೆ ಯಾವುದು ಹೆಚ್ಚು ಇಷ್ಟವೋ ಅದೇ ನನಗೆ ಇಷ್ಟವೆನ್ನುವುದು ಅಷ್ಟು ಸಮಂಜಸವಲ್ಲ, ಹೆಚ್ಚಾಗಿ ಪಾತ್ರದ ಮಿತಿ ಎಂದು ಬಿಡುತ್ತೇವೆ ಅದನ್ನು ಕಲಾವಿದನ ಮಿತಿಯೆನ್ನಬೇಕು, ಒಂದನ್ನು ಇಷ್ಟಪಟ್ಟರೆ ಆತ ಇನ್ನೊಂದು ಪಾತ್ರವನ್ನು ನಿರ್ವಹಿಸುವಾಗ ನ್ಯಾಯ ಒದಗಿಸಲಾರ. ಹಾಗಾಗಿ, ಕಲಾವಿದ ಈ ದಿನ ತಾನು ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಮತ್ತು ಅದಕ್ಕೆ ಹೇಗೆ ನ್ಯಾಯ ಒದಗಿಸಲಿ ಎಂದು ಚಿಂತಿಸಬೇಕು, ಒಂದು ಪಾತ್ರ ಪಂಥಾಹ್ವಾನ ನೀಡಬೇಕು, ಅದನ್ನು ಅದೇ ನಿಟ್ಟಿನಲ್ಲಿ ಕಲಾವಿದ ಸ್ವೀಕರಿಸಬೇಕು ಎನ್ನುತ್ತಿದ್ದರು. ಇನ್ನೊಂದು ಉದಾಹರಣೆಯೆಂದರೆ, ತಂದೆ ಶಿವರಾಮ ಹೆಗಡೆಯವರ ಹೆಸರಿನ ಪ್ರಶಸ್ತಿಯನ್ನು ಅದೇ ಕಲೆಗೆ ಸಂಬಂಧಿಸಿದ ಕಲಾವಿದರಿಗೆ ಕೊಡಬಹುದಿತ್ತು. ಹಾಗೆ ಮಾಡಲೇ ಇಲ್ಲ. ಬೇರೆ ಬೇರೆ ಕ್ಷೇತ್ರದ ಸಾಧಕರಿಗೆ ಕೊಟ್ಟು ಉಳಿದ ಕಲೆಯೊಡನೆ ಯಕ್ಷಗಾನವನ್ನು ಸರಿ ಸರಿಯಾಗಿ ಕುಳ್ಳಿರಿಸಿದರು. ಆ ಕ್ಷೇತ್ರದವರೂ ಈ ಕಲೆಯನ್ನು ಗಂಭೀರವಾಗಿ ಗಮನಿಸಲು ಪ್ರಾರಂಭಿಸಿದರು. ಯು. ಆರ್. ಅನಂತಮೂರ್ತಿಯವರು ಒಮ್ಮೆ ಹೇಳಿದ್ದಿದೆ: ಸಂಗೀತದಲ್ಲಿ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್… ಹಾಗೆ ನಮಗೆ ಯಕ್ಷಗಾನದಲ್ಲಿ ಶಂಭು ಹೆಗಡೆಯವರು ಎಂದು. ಇಲ್ಲಿ ಇಬ್ಬರ ಕಲ್ಪನೆ ಮತ್ತು ಅಭಿಪ್ರಾಯ ಯಕ್ಷಗಾನ ಕಲೆಯ ಬಗ್ಗೆ ಒಂದೇ ಆಗಿದ್ದನ್ನು ಗಮನಿಸಬೇಕು.
ರಜನೀಶ್ ಒಂದು ಕಡೆ ಹೇಳುತ್ತಾರೆ: ಸಾಮಾನ್ಯರು ಮಾತ್ರ ವರ್ತಮಾನದಲ್ಲಿ ಬದುಕುತ್ತಾರೆ ಎಂದು. ಅಸಾಮಾನ್ಯರಾದ ಹೆಗಡೆಯವರ ವಿಚಾರ ಕೂಡ ವರ್ತಮಾನ¨ªಾಗಿರಲಿಲ್ಲ! ಯಕ್ಷಗಾನ ಶಿಕ್ಷಣ, ಪ್ರಾತ್ಯಕ್ಷಿಕೆ, ರಂಗಮಂದಿರ, ದಾಖಲೀ ಕರಣ, ಬದ್ಧತೆಯ ಪ್ರಯೋಗ ಇವೆಲ್ಲವೂ ಕಲೆಯ ಬಗೆಗಿನ ಮುಂದಾಲೋಚನೆಯೇ ಆಗಿತ್ತು. ಈ ಎಲ್ಲ ಗುಣಗಳ ನಿಜವಾದ ಮುಂದುವರಿದ ಭಾಗವೇ ಶಿವಾನಂದ ಹೆಗಡೆಯವರು ನಡೆಸಿಕೊಂಡು ಹೋಗುತ್ತಿರುವ ಇಂದಿನ ಕೆರೆಮನೆ ಮೇಳ.
ಕೆರೆಮನೆ ಮೇಳ ಎತ್ತುಕೊಂಡು ನಿರ್ವಹಿಸಿದ ಪ್ರಸಂಗಗಳು ಯಾವತ್ತೂ ಮತ್ತೆ ಮತ್ತೆ ಸಂಶೋಧನೆಗೆ ಯೋಗ್ಯವಾದಂಥವು. ಅವೆಲ್ಲವೂ ಅಂದರೆ ಆ ಪ್ರಸಂಗಗಳ ಒಟ್ಟೂ ನಿರ್ವಹಣೆ, ಕಲೆಯನ್ನು ಶಾಸ್ತ್ರೀಯ ಮಾಡುವ ವಿಧಾನವೆಂದೇ ಪರಿಗಣಿಸಬೇಕು. ಈ ಕಲೆಯ ಎಲ್ಲ ಅಂಗಗಳನ್ನೂ ಪರಿಣಾಮಕಾರಿಯಾಗಿ ಈ ಪ್ರಸಂಗಗಳಲ್ಲಿ ಬಳಸಿಕೊಂಡರು. ಇನ್ನೂ ಮುಖ್ಯವಾಗಿ ಗಮನಿಸುವ ಅಂಶವೆಂದರೆ ಒಂದು ಪ್ರಸಂಗವನ್ನು ಕಂಟೈನ್ ಮಾಡುವುದು ಮತ್ತು ಒಂದು ಸಂಯಮವನ್ನು ಹೇಗೆ ಬೆಳೆಸುವುದೆನ್ನುವುದನ್ನು ತೋರಿಸಿಕೊಟ್ಟರು. ಕಲೆಯ ಶಾಸ್ತ್ರೀಯತೆಯೂ ಅದನ್ನೇ ಅಲ್ಲವೆ ಮಾಡುವುದು! ಅದರ ಮೂಲಕವೇ ಅಲ್ಲವೆ, ಮನಸ್ಸಿನ ಸಮತೋಲನ! ಮೇಳದ ಪ್ರಸಂಗಗಳನ್ನು ಅಪ್ರೊಪ್ರಿಯೇಟಿÉ ರಿಚ್ ಎಂದು ಹೇಳಬೇಕು. ಆ ಎÇÉಾ ಪ್ರಸಂಗಗಳ ನಿರ್ವಹಣೆಯು ಯಕ್ಷಗಾನ ಕ್ಷೇತ್ರದಲ್ಲಿ ಮಾದರಿಯಾಯಿತು. ಅದರಲ್ಲಿ ಒಂದು ಅಂಗ ದುರ್ಬಲವಾದರೂ ನಿರ್ವಹಣೆ ಕಷ್ಟ. ಹಾಗಾಗಿಯೇ ಉಳಿದ ಮೇಳ ಮತ್ತು ಕಲಾವಿದರು ಹೆಚ್ಚಿನದಾಗಿ ಇಂತಹ ಪ್ರಯೋಗಗಳಿಗೆ ಕೈ ಹಾಕಲಿಲ್ಲ. ಹಾಕಿದರೂ ಅಷ್ಟು ಯಶಸ್ವಿಯಾಗಲಿಲ್ಲವೆಂದೇ ಅನ್ನಬೇಕು.
ಸಂಧಾನದ ಕೃಷ್ಣನ ಅನುಸಂಧಾನ
ಶಂಭು ಹೆಗಡೆಯವರು ಸ್ತ್ರೀ, ವಿದೂಷಕನನ್ನು ಮೊದಲಾಗಿ 140ಕ್ಕೂ ಹೆಚ್ಚು ಪಾತ್ರಗಳನ್ನು ಮಾಡಿದವರು. ಅವರ ಪಾತ್ರಗಳಾದ ಕೃಷ್ಣ ಸಂಧಾನದ ಕೃಷ್ಣ, ಕರ್ಣ ಪರ್ವದ ಕರ್ಣ, ಗದಾಯುದ್ಧದ ಕೃಷ್ಣ-ಕೌರವ, ಹರಿಶ್ಚಂದ್ರ, ರಾಮನಿರ್ಯಾಣದ ರಾಮ ಇಂದೂ ನಮ್ಮ ಹೃದಯದಲ್ಲಿವೆ. ಎಲ್ಲ ಪಾತ್ರಗಳನ್ನೂ ಆಳವಾಗಿ ಅಭ್ಯಸಿಸಿದವರು. ಪಾತ್ರಗಳ ನಿರ್ವಹಣೆಯಲ್ಲಿ ತನ್ನದೇ ಆದ ಧೋರಣೆ ಹೊಂದಿದ್ದವರು. ಬೆಳಗಿನ ಪತ್ರಿಕೆಯ ಸುದ್ದಿಯನ್ನು ರಾತ್ರಿ ರಂಗಸ್ಥಳದಿಂದ ಬಹಳ ದೂರವಿಟ್ಟವರು. ಬೆಳಕು, ನೃತ್ಯ ಸಂಯೋಜನೆ, ಕತೆಯ ಒಟ್ಟೂ ನಡೆ, ಬಳಸುವ ಬಣ್ಣ, ಹಿಡಿಯುವ ಮತ್ತು ಆಯಾ ಸಂದರ್ಭದಲ್ಲಿ ತೋರಿಸುವ ಪರಿಕರಗಳಿಂದ ಕಥಾಭಾಗದ ಧ್ವನಿ ಶಕ್ತಿಯನ್ನು ಹೆಚ್ಚಿಸಿದವರು. ಪೌರಾಣಿಕ ಪ್ರಸಂಗಗಳ ಪ್ರತಿ ಪಾತ್ರವನ್ನೂ ತಮ್ಮ ವರ್ತಮಾನದ ಕಣ್ಣುಗಳಿಂದ ನೋಡುತ್ತಾ, ಬದುಕಿನ ಸಂಬಂಧದ ಸಂಕೀರ್ಣಗಳನ್ನು ವಿಶ್ಲೇಷಿಸುತ್ತಿದ್ದರು. ಪಾತ್ರದ ನಿಲುವು ಸ್ಪಷ್ಟವಿದ್ದುದ್ದರಿಂದ ಅದರ ಔಚಿತ್ಯ ಯಾವತ್ತೂ ಕೆಡಲಿಲ್ಲ. ತಾವು ಒಪ್ಪಿಕೊಂಡ ಸಿದ್ಧಾಂತದ ಚೌಕಟ್ಟನ್ನು ಮೀರಿ ಜನರ ಚಪ್ಪಾಳೆ ಗಿಟ್ಟಿಸಬೇಕೆನ್ನುವ ದರ್ದು ಇರಲಿಲ್ಲ. ಕಾಳಜಿ ಅಥವಾ ಔಚಿತ್ಯದ ಮಾತು ಬಂದರೆ ಕೃಷ್ಣ ಸಂಧಾನದ ಕೃಷ್ಣನ ಪಾತ್ರ ನೆನಪಾಗುತ್ತದೆ. ಕೌರವನ ಆಸ್ಥಾನಕ್ಕೆ ತೆರಳುವ ಮೊದಲು ಆತ ಪಾಂಡವರನ್ನೆಲ್ಲರನ್ನೂ ಭೇಟಿಯಾಗುವ ಸಂದರ್ಭ. ಧರ್ಮರಾಯನಿಂದ ಹಿಡಿದು ದ್ರೌಪದಿಯವರೆಗೆ ಎಲ್ಲರೂ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ಅವೆಲ್ಲವೂ ಮನಶಾಸ್ತ್ರದ ವ್ಯಕ್ತಿತ್ವದ ಒಂದೊಂದು ಮಾದರಿಯಂತೇ ಕಾಣುತ್ತದೆ. ಎಲ್ಲವನ್ನೂ ಮೀರಿದ ದೇವರೆಂದೆನಿಸಿಕೊಂಡವ ಹೇಗೆ ಉತ್ತರಿಸಬೇಕು? ಮುಖ್ಯವಾಗಿ ದ್ರೌಪದಿಗೆ ಕೃಷ್ಣ ಅಣ್ಣ. ಕೌರವರನ್ನು ಕೊಂದು ಅವರ ರಕ್ತವನ್ನು ತನ್ನ ಕೇಶಕ್ಕೆ ಸವರಿಕೊಂಡೇ ತಾನು ಮುಡಿಕಟ್ಟುವೆನೆಂದು ಪ್ರತಿಜ್ಞೆಮಾಡಿಕೊಂಡು ಕುಳಿತು ಕಾಯುತ್ತಿರುವವಳು. ಅವಳು ಸಾಮಾನ್ಯ ಮನುಷ್ಯಳಂತೇ ಪ್ರೀತಿಯಿಂದ ಅಣ್ಣನಲ್ಲಿ ಹಟ ಮಾಡಬಹುದು. ಆದರೆ, ಆ ಸಂರ್ಭದಲ್ಲಿ ಅಣ್ಣನೂ, ದೇವರೂ ಆದ ಕೃಷ್ಣ ಹೇಗೆ ಮಾತನಾಡಬೇಕು ಎನ್ನುವುದು ಬಹಳ ಕಷ್ಟದ ಕೆಲಸ. ಒಂದು ಶಬ್ದ ಆಚೀಚೆ ಆಡಿದರೆ ಆಣ್ಣನಾಗಬಹುದು ಆದರೆ ಸರ್ವಥಾ ದೇವರಾಗಲು ಸಾಧ್ಯವಿಲ್ಲ. ದ್ರೌಪದಿಯನ್ನು ವಿಭಾವ ಭಾವದಲ್ಲಿ ಬಳಸುತ್ತ ಪ್ರೇಕ್ಷಕರಲ್ಲಿ ಅನುಭಾವದ ಮೂಲಕ ಮಾನವೀ ಮತ್ತು ದೈವೀ ಸಿದ್ಧಿಗಳನ್ನು ಏಕಕಾಲದಲ್ಲಿ ನಿರ್ವಹಿಸುವುದನ್ನು ಆ ಮಹಾನ್ ನಟ ಸಿದ್ಧಿಸಿಕೊಂಡಿದ್ದ. ಹಾಗಾಗೇ ಅವರು ಇಂದು ನಮ್ಮನ್ನು ಕಾಡುವುದು. ಪ್ರತೀ ಪ್ರಸಂಗಗಳಲ್ಲೂ ಅವರು ಬಳಸಿದ ಅಮೂರ್ತ ಮತ್ತು ಸಂಕೇತಗಳ ಬಳಕೆ ಪ್ರೇಕ್ಷಕರು ಹೆಚ್ಚೆಚ್ಚು ಅರ್ಹರಾದಂತೆ ತಿಳಿಯುತ್ತ ಹೋಗುತ್ತದೆ. ಅವು ತಿಳಿದಂತೇ ಧ್ವನಿ ಶಕ್ತಿಯಾಗಿ ರಸಾನುಭವದ ದಾರಿ ಪಡೆಯುತ್ತದೆ.
ರೇಮಂಡ್ ಲೋಯಿಗೆ ಒಂದು ದೊಡ್ಡ ವ್ಯಕ್ತಿಯ ಕರೆ ಬಂದು ಅವರನ್ನು ಭೇಟಿ ಮಾಡುತ್ತಾರೆ. ಹೀಗೆ ಮಾತನಾಡುತ್ತ, “ಒಂದು ಗ್ರೆನೇಡ್‌ನ ಹೊರ ಕವಚವನ್ನು ವಿನ್ಯಾಸಗೊಳಿಸಬೇಕಾಗಿದೆ ತಮ್ಮಿಂದ ಆದೀತೆ’ ಎಂದು ಕೇಳುತ್ತಾರೆ. ಆಗ ಲೋಯಿ, “ನನ್ನದೇನಿದ್ದರೂ ಸಮಾಜದ ಒಳಿತಿಗೇ ಹೊರತೂ ಅದರ ನಾಶಕ್ಕಲ್ಲ ‘ ಎಂದು ಹೇಳಿ ಅದಕ್ಕೆ ಒಪ್ಪಿಕೊಳ್ಳದೇ ಮಧ್ಯದಲ್ಲಿ ಎದ್ದುಬರುತ್ತಾರೆ. ಶಂಭು ಹೆಗಡೆಯವರಿಗೂ ಆಮಿಷಗಳು ಬಂದಿದ್ದವು. ಕೇಳಿದಷ್ಟು ಹಣವನ್ನೂ ಕೊಡುವವರಿದ್ದರು. ಕೇವಲ ಹೆಜ್ಜೆ ಹಾಕಬೇಕಿತ್ತಷ್ಟೇ. ತಾವು ನಂಬಿಕೊಂಡ ಕಲಾ ಸಿದ್ಧಾಂತಕ್ಕೆ ಚ್ಯುತಿಯಾಗುವುದಿದ್ದರೆ ಅದರೊಡನೆ ಯಾವತ್ತೂ ರಾಜಿ ಮಾಡಿಕೊಳ್ಳಲಿಲ್ಲ.
ನಾಡಿದ್ದು ಪ್ರದರ್ಶನವಿದ್ದರೆ ಕಲಾವಿದರು ಇಂದಿನಿಂದಲೇ ಮಾತು ನಿಲ್ಲಿಸುವುದನ್ನು, ಆಹಾರ ಪದ್ಧತಿ ನಿಯಂತ್ರಿಸುವುದನ್ನು ನೋಡಿದ್ದೇವೆ, ಪ್ರದರ್ಶನಕ್ಕಿಂತ ಮೂರ್ನಾಲ್ಕು ತಾಸು ಮೊದಲೇ ಜನರ ಭೇಟಿಯನ್ನೂ ನಿಲ್ಲಿಸುವವರಿ¨ªಾರೆ. ಅವರನ್ನೂ ಗೌರವಿಸುತ್ತಾ… ಇತ್ತ ಶಂಭು ಹೆಗಡೆಯವರ ಕಡೆ ಗಮನಿ ಸೋಣ. ಯಕ್ಷಗಾನ ಮೇಳ ಕಟ್ಟುವುದು ಮತ್ತು ದಿನವೂ ಹೊಸ ಊರಲ್ಲಿ ಪ್ರದರ್ಶನ ಕೈಗೊಳ್ಳುವುದು ದಿನವೂ ಒಂದು ಮದುವೆ ಮಾಡಿದಂತೆ. ಹಣವನ್ನು ಹೊಂದಿಸಬೇಕು, ಇಂದಿನ ಆಟದ ಕಲೆಕ್ಷನ್, ಕಲಾವಿದರಿಗೆ ಊಟ-ಸಂಬಳ, ವ್ಯವಸ್ಥೆ ಹೈಗೈ ಮಾಡದಂತೇ ವ್ಯವಸ್ಥಾಪಕರ ಮೇಲೊಂದು ಕಣ್ಣು! ಹೋದ ಊರಿನಲ್ಲಿನ ಹೊಸ ರಾಜಕೀಯ ಮತ್ತು ಪ್ರದರ್ಶನದ ಪರವಾನಿಗೆ; ಇದರೊಡನೆ ಇಂದಿನ ಯಕ್ಷಗಾನದ ಸ್ಥಿತಿ, ಈ ಕಲೆಯ ಭವಿಷ್ಯ, ಸುಧಾರಣೆ ಇವೆಲ್ಲವನ್ನೂ ರಾತ್ರಿ ಒಂಬತ್ತೂ¤ವರೆಯೊಳಗೆ ಮುಗಿಸಿ ವೇಷ ಬರೆದುಕೊಳ್ಳಲು ಕುಳಿತುಕೊಳ್ಳುತ್ತಿದ್ದ ಇವರ ಮಾನಸಿಕ ಒತ್ತಡ ಹೇಗಿರಬೇಕು. ಹಣಕೊಟ್ಟು ಇವರ ನಟನೆಯನ್ನು ನೋಡಲು ನಾನೂರಕ್ಕೂ ಹೆಚ್ಚು ಜನ ರಂಗಸ್ಥಳದ ಎದುರು ಕುಳಿತು ಕಾಯುತ್ತಿ¨ªಾರೆ. ಗ್ರೀನ್ ರೂಮಿನಲ್ಲಿ ಇವರ ಪರಕಾಯ ಪ್ರವೇಶವನ್ನು ಆಗಾಗ ಅವರ ಅಭಿಮಾನಿಗಳು ಇಣುಕುತ್ತ “ಆರಾಮಾ?’, “ಆರಾಮಾ?’ ಎಂದು ಕೇಳುತ್ತಿ¨ªಾರೆ. ಇವರು ಅವರನ್ನು ಸಂತೋಷದಿಂದ ಮಾತನಾಡಿಸುತ್ತಲೂ ಇ¨ªಾರೆ. ಹೆಗಡೆ ಯವರು ಇನ್ನೂ ರಂಗಸ್ಥಳವನ್ನು ಪ್ರವೇಶಿಸಬೇಕಾಗಿದೆ. ಇವೆಲ್ಲವೂ ಒಬ್ಬ ಮನುಷ್ಯನಿಂದ ಒಂದೇ ಸಮಯದಲ್ಲಿ ಹೇಗೆ ಸಾಧ್ಯ ಎನ್ನುವುದು ನಮಗೆ ಅರ್ಥವಾಗುವುದು ಕಷ್ಟವಾಗುತ್ತದೆ. ಅವರಿಗೆ ರಂಗಸ್ಥಳವೇ ಹೆಚ್ಚು ಸುಖಕೊಟ್ಟಿರಬೇಕು. ಲೋಕ ಬಿಡುವಾಗ ಕೊನೆಯದಾಗಿ ಅದನ್ನೇ ಆಯ್ಕೆ ಮಾಡಿಕೊಂಡಿದ್ದು ವಿಸ್ಮಯವೇ ಸರಿ.
ಸಚ್ಚಿದಾನಂದ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್ ಜಾರಕಿಹೊಳಿ
Mumbai: ಬಾಯ್‌ಫ್ರೆಂಡ್ ಮಾಂಸಾಹಾರ ತಿನ್ನಬೇಡ ಎಂದಿದ್ದಕ್ಕೆ ಪೈಲಟ್ ಆತ್ಮಹ*ತ್ಯೆ!
ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ
Brahmavar: ಲಾಕ್‌ಅಪ್ ಡೆತ್; ಕೇರಳ ಸಿಎಂಗೆ ದೂರು
ಹಗರಿಬೊಮ್ಮನಹಳ್ಳಿ: ಜೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.