ಸಜ್ಜನರು-ಸುಶಿಕ್ಷಿತರು ಶಿಕ್ಷಕರಾಗಲಿ: ಮಂಟೂರ
Team Udayavani, Feb 2, 2019, 11:14 AM IST
ಮುದ್ದೇಬಿಹಾಳ: ಇಲ್ಲಿನ ಜವಾಹರಲಾಲ್ ನೆಹರು ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ಚಲವಾದಿ ಅವರಿಗೆ ಮುದ್ದೇಬಿಹಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಪ್ರವಚನಕಾರ ಡಾ| ಈಶ್ವರ ಮಂಟೂರ ಮಾತನಾಡಿ, ಸಜ್ಜನರು, ಸುಶೀಕ್ಷಿತರು ಶಿಕ್ಷಕರಾಗಬೇಕು. ಅಂದಾಗ ಮಾತ್ರ ಶಿಕ್ಷಕರು ಸಮಾಜಕ್ಕೆ ಮಾದರಿ ಎನ್ನಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಆಚಾರವಂತರು ಸ್ವಾಮಿಗಳಾಗಬೇಕು. ಪ್ರಾಮಾಣಿಕರು ಅಧಿಕಾರಿಗಳಾಗಬೇಕು. ಸುಶೀಲ ಚಾರಿತ್ರ್ಯವಂತರು ಶಿಕ್ಷಕರಾಗಬೇಕು. ರಾಷ್ಟ್ರಭಕ್ತರು ರಾಜಕಾರಣಿ ಆಗಬೇಕು. ದೇಶಭಕ್ತರು ಸೈನಿಕರಾಗಬೇಕು. ಅಂದಾಗ ಮಾತ್ರ ದೇಶ ಭವ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಢವಳಗಿಯ ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ನಿವೃತ್ತ ಮುಖ್ಯಾಧ್ಯಾಪಕ ಎಸ್.ಎಸ್. ಪಾಟೀಲ ವಿಶೇಷ ಉಪನ್ಯಾಸ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಲವಾದಿ ಅವರು, ತಮ್ಮ ಸೇವಾ ದಿನಗಳನ್ನು ಸ್ಮರಿಸಿದರು. ಎಲ್ಲ ರೀತಿಯ ಸಹಕಾರ ನೀಡಿದ ದೈಹಿಕ ಶಿಕ್ಷಕ ವೃಂದ, ತಾಲೂಕಿನ ಶಿಕ್ಷಕರು ಮತ್ತು ಬಿಇಒ, ಬಿಆರ್‌ಸಿಸಿ ಕಚೇರಿ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಎಂ.ಎಂ. ಬೆಳಗಲ್ಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಕಟ್ಟಿಮನಿ, ನಿರ್ದೇಶಕ ಎಚ್.ಎಲ್.ಕರಡ್ಡಿ, ಜಿಲ್ಲಾ ಮಾಧ್ಯಮಿಕ ಶಾಲಾ ಮಂಡಳಿ ಸದಸ್ಯ ಬಿ.ಎಸ್. ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಧುರೀಣ ಸಿ.ಪಿ. ಸಜ್ಜನ, ತಾಪಂ ಮಾಜಿ ಸದಸ್ಯ ಶ್ರೀಶೈಲಗೌಡ ಬಿರಾದಾರ, ಬಸಯ್ಯ ಹಿರೇಮಠ, ಎಂ.ಜಿ.ಹೊಕ್ರಾಣಿ, ಬಾಲಚಂದ್ರ ನಡುವಿನಮನಿ, ಎಸ್.ಎಸ್.ಬಾಣಿ, ಕೆ.ಎಂ. ಇಬ್ರಾಹಿಂಪುರ, ಎಂ.ವೈ. ಗೌಂಡಿ, ಎಂ.ಎಲ್. ಕೆಂಭಾವಿ, ಎಸ್.ಎಲ್. ಗುರವ, ಎಸ್.ಆರ್. ಸುಲ್ಪಿ, ಕೆ.ಬಿ.ಸಜ್ಜನ ಇದ್ದರು. ಎಸ್.ಬಿ.ಚಲವಾದಿ ಮತ್ತು ಎಸ್.ಡಿ. ಗಾಂಜಿ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.