ಆಸ್ಟ್ರೇಲಿಯನ್ ಎಲ್‌ಪಿಜಿಎ ಪ್ರವೇಶ ಪಡೆದ ವಾಣಿ ಕಪೂರ್
Team Udayavani, Feb 3, 2019, 12:30 AM IST
ಬಲ್ಲಾರತ್ (ಆಸ್ಟ್ರೇಲಿಯ): ಇಲ್ಲಿನ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಮೊದಲ ಅರ್ಹತಾ ಕೂಟದಲ್ಲಿ ಗೆದ್ದಿರುವ ಭಾರತದ ವಾಣಿ ಕಪೂರ್ “ಆಸ್ಟ್ರೇಲಿಯನ್ ಲೇಡಿಸ್ ಪಿಜಿಎ ಟೂರ್’ (ಎಲ್‌ಪಿಜಿಎ)ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಈ ಕೂಟಕ್ಕೆ ಪ್ರವೇಶ ಪಡೆದ ಭಾರತದ ಮೊದಲ ಭಾರತೀಯ ಗಾಲ#ರ್ ಎಂದೆನಿಸಿಕೊಂಡಿದ್ದಾರೆ.
ಅರ್ಹತಾ ಕೂಟದಲ್ಲಿ ಅಗ್ರ 20ರಲ್ಲಿ ಸ್ಥಾನ ಪಡೆದ ಆಟಗಾರ್ತಿಯರು ಆಸ್ಟ್ರೇಲಿಯನ್ ಎಲ್‌ಪಿಜಿಎ ಪ್ರವೇಶ ಪಡೆಯುತ್ತಾರೆ. ವಾಣಿ ಕಪೂರ್ ಜಂಟಿ 12ನೇ ಸ್ಥಾನ ಸಂಪಾದಿಸಿದ್ದಾರೆ. ಈ ಅರ್ಹತಾ ಕೂಟದಲ್ಲಿ ಭಾರತದ ದೀಕ್ಷಾ ದಾಗಾರ್(30ನೇ ಸ್ಥಾನ), ಅಸ್ತಾ ಮದನ್ (37ನೇ ಸ್ಥಾನ) ಮತ್ತು ರಿಧಿಮಾ ದಿಲ್ವಾರಿ (57ನೇ ಸ್ಥಾನ) ಸ್ಪರ್ಧಿಸಿದ್ದರೂ, ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲಾದರು. ಮುಂಬರುವ ಬಲ್ಲಾರತ್ ಐಕಾನ್ಸ್ ಆಸ್ಟ್ರೇಲಿಯನ್ ಎಲ್‌ಪಿಜಿಎ ಪ್ರೊ ನಲ್ಲಿ ಈ ಮೂವರು ಆಟಗಾರ್ತಿಯರು ಸ್ಪರ್ಧಿಸುವುದರಿಂದ ಆಸ್ಟ್ರೇಲಿಯನ್ ಎಲ್‌ಪಿಜಿಎಗೆ ಪ್ರವೇಶ ಪಡೆಯಲು ಪ್ರಯತ್ನಿಸಬಹುದು.
ಈ ಗೆಲುವಿನಿಂದಾಗಿ ವಾಣಿ ಕಪೂರ್‌ಗೆ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ 3 ವನಿತಾ ಯುರೋಪಿಯನ್ ಟೂರ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.