ಕರಾವಳಿಗೆ ಕುಚ್ಚಲಕ್ಕಿ : ಸರಕಾರಕ್ಕೆ ಶಿಫಾರಸು
Team Udayavani, Feb 3, 2019, 12:30 AM IST
ಮಂಗಳೂರು: ಕರಾವಳಿ ಜಿಲ್ಲೆಗಳಿಗೆ ಪಡಿತರ ನೀಡುವಾಗ ಕುಚ್ಚಲಕ್ಕಿಯನ್ನೇ ನೀಡಬೇಕೆಂದು ಸರಕಾರಕ್ಕೆ ಶಿಫಾರಸು ಮಾಡಲಾಗು ವುದು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ| ಎನ್. ಕೃಷ್ಣಮೂರ್ತಿ ಅವರು ಹೇಳಿದರು.
ಅವರು ಶನಿವಾರ ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಇತರ ಜಿಲ್ಲೆಗಳಲ್ಲಿ ಆಯಾ ಪ್ರಾದೇಶಿಕ ಬೇಡಿಕೆಗೆ ಅನುಸಾರ ಯುನಿಟ್‌ವೊಂದಕ್ಕೆ 5 ಕೆಜಿ ಬೆಳ್ತಿಗೆ ಜತೆ 2 ಕೆಜಿ ಗೋಧಿ ನೀಡಲಾಗುತ್ತದೆ. ಆದರೆ ದ.ಕ., ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಕುಚ್ಚಲಕ್ಕಿಗೆ ಬೇಡಿಕೆ ಅಧಿಕವಾಗಿದೆ. ಈಗ ಅಪರೂಪಕ್ಕೊಮ್ಮೊಮ್ಮೆ ಕುಚ್ಚಲಕ್ಕಿ ನೀಡಲಾಗುತ್ತಿದ್ದು, ಹೆಚ್ಚಾಗಿ ಬೆಳ್ತಿಗೆಯನ್ನೇ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ರವಿವಾರ ರಜೆ ಇಲ್ಲ
ರವಿವಾರ ಅಂಗಡಿ ತೆರೆದು ಪಡಿತರ ವಿತರಿಸುವುದು ಅಗತ್ಯ. ಆದರೆ ಹಲವು ಕಾರಣ ನೀಡಿ ಅಂಗಡಿ ತೆರೆಯದಿರುವ ಬಗ್ಗೆ ಗಮನಕ್ಕೆ ಬಂದಿದೆ. ಇನ್ನು ಮುಂದೆ ಹಾಗಾದಲ್ಲಿ ಇದನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು.ತೊಗರಿ ಬೇಳೆಗೆ ದ.ಕ. ಜಿಲ್ಲೆಯಲ್ಲಿ ಬೇಡಿಕೆ ಇಲ್ಲ. ಆದರೆ ಪಡಿತರದಾರರು ತೊಗರಿ ಪಡೆದುಕೊಳ್ಳದಿದ್ದಲ್ಲಿ ಅವರಿಗೆ ಅದರ ಬದಲಾಗಿ ಅಕ್ಕಿ ನೀಡಬೇಕು. ಆದರೆ ಕೆಲವೆಡೆ 1 ಕೆಜಿ ತೊಗರಿಯನ್ನು ನೀಡಿದಂತೆ ತೋರಿಸಿ ಹೊರಗೆ ಹೆಚ್ಚಿನ ಕ್ರಯಕ್ಕೆ ಮಾರಾಟ ಮಾಡುವುದು ಗಮನಕ್ಕೆ ಬಂದಿದೆ. ಈ ನ್ಯೂನತೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸದಸ್ಯರಾದ ವಿ.ಬಿ. ಪಾಟೀಲ್, ಮಂಜುಳಾ, ಬಿ.ಎ. ಮಹಮದ್ ಅಲಿ, ಡಿ.ಜಿ. ಹಸಬಿ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.