ಗುರುಪುರ ನೂತನ ಸೇತುವೆಗೆ ಶಿಲಾನ್ಯಾಸ​​​​​​​


Team Udayavani, Feb 3, 2019, 12:30 AM IST

0202malalim1.jpg

ಗುರುಪುರ: ಬಹುಕಾಲದ ಬೇಡಿಕೆಯಾದ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿ ಫಲ್ಗುಣಿ ನದಿಗೆ ನೂತನ ಸೇತುವೆ ನಿರ್ಮಾಣಕ್ಕೆ ಶನಿವಾರ ಬೆಳಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಮಂಗಳೂರು ನಗರ ಉತ್ತರ ಶಾಸಕ ಡಾ| ವೈ. ಭರತ್‌ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ನಳಿನ್‌ ಕುಮಾರ್‌ ಮಾತನಾಡಿ, ಫಲ್ಗುಣಿ ನದಿಗೆ 96 ವರ್ಷಗಳ ಹಿಂದೆೆ ಬ್ರಿಟಿಷರು ಸೇತುವೆ ನಿರ್ಮಿಸಿದ್ದು, ಬಾಳಿಕೆ ಅವ ಧಿ ತೀರಿದ್ದರಿಂದ ಕೇಂದ್ರ ಸರಕಾರ ಹೊಸ ಸೇತುವೆಗೆ ಅನುದಾನ ಒದಗಿಸಿದೆ. ಹಳೆಯ ಸೇತುವೆಯನ್ನು ಉಳಿಸಿ ಪಕ್ಕದಲ್ಲೇ ನೂತನ ಸೇತುವೆಯ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಆರಂಭಗೊಂಡಿದೆ ಎಂದರು.

ಚತುಷ್ಪಥಕ್ಕೆ ಭೂಸ್ವಾಧೀನ
ಕುಲಶೇಖರ-ಕಾರ್ಕಳ ಹೆದ್ದಾರಿಯ ಪ್ರಮುಖ ಸೇತುವೆ ಇದಾಗಿದ್ದು, ಹೆದ್ದಾರಿ ಚತುಷ್ಪಥಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ. ನೂತನ ಹೆದ್ದಾರಿ ಗುರುಪುರದಿಂದ ನೂಯಿ ಅಡೂxರು

ಮುಖಾಂತರ ಕೈಕಂಬ ಹಾದು ಹೋಗಿ ಕಾರ್ಕಳ-ಸೋಲಾಪುರ ತಲುಪಲಿದೆ. ಇದಕ್ಕಾಗಿ ಅಡೂxರು ಬಳಿ ಮತ್ತೂಂದು ಸೇತುವೆ ನಿರ್ಮಾಣಗೊಳ್ಳಲಿದೆ. ಸದ್ಯದ ಸೇತುವೆ ಗುರುಪುರಕ್ಕೆ ಸಂಪರ್ಕ ಕಲ್ಪಿಸಲಿದ್ದು ಬೈಪಾಸ್‌ ರಸ್ತೆಯಾಗಿ ನಿರ್ಮಾಣವಾಗಲಿದೆ ಎಂದರು.

ಕಾವೂರಿನ ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್‌ನ ಡಿ. ಸುಧಾಕರ ಶೆಟ್ಟಿ ಅವರು ಸುಮಾರು 39.420 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆ ದುಕೊಂಡಿದ್ದಾರೆ. ಕಾಮಗಾರಿ 2 ವರ್ಷ ಅವ ಧಿಯದ್ದಾಗಿದ್ದು, ಒಂದೂವರೆ ವರ್ಷದೊಳಗಡೆ ಮುಗಿಸಲು ಪ್ರಯತ್ನಿ ಸುವುದಾಗಿ ಸುಧಾಕರ ಶೆಟ್ಟಿ ತಿಳಿಸಿದರು. ಹಿಂದೂ ಮುಖಂಡ ಜಗದೀಶ ಶೇಣವ, ಕಾರ್ಪೊರೇಟರ್‌ ಹೇಮಲತಾ ಆರ್‌. ಸಾಲ್ಯಾನ್‌, ಚಂದ್ರಹಾಸ ಶೆಟ್ಟಿ ನಾರ್ಲ, ಶ್ರೀಕರ ಶೆಟ್ಟಿ, ರಾಜೇಶ್‌ ಸುವರ್ಣ, ಪ್ರಶಾಂತ್‌ ಮುಂಡ, ನಳಿನಿ ಶೆಟ್ಟಿ, ಸೇಸಮ್ಮ, ಸೋಮಯ್ಯ ಬೆಳ್ಳೂರು, ಚಂದ್ರಶೇಖರ ಶೆಟ್ಟಿ ಕೊಳಕೆಬೈಲು, ಜನಾರ್ದನ ಗೌಡ, ಮಾಧವ ಕಾಜಿಲ ಉಪಸ್ಥಿತರಿದ್ದರು.

ವಿವಿಧ ರಸ್ತೆಗಳು ಮೇಲ್ದರ್ಜೆಗೆ 
ಭಾರತ್‌ ಮಾಲಾ  ಯೋಜನೆಯಡಿ ಶಾಸಕರಾದ ಭರತ್‌ ಶೆಟ್ಟಿ, ರಾಜೇಶ್‌ ನಾಯ್ಕ, ಹಾಗೂ ಉಮನಾಥ ಕೋಟ್ಯಾನ್‌ ಅವರ ಕ್ಷೇತ್ರಗಳಲ್ಲಿ ಮೂಲ್ಕಿ – ಕಟೀಲು- ಕೈಕಂಬ-  ಬಿ.ಸಿ.ರೋಡ್‌ ರಸ್ತೆ ಚತುಷ್ಪಥಗೊಳ್ಳಲಿದೆ. ಮೆಲ್ಕಾರ್‌- ಕೊಣಾಜೆ- ತೊಕ್ಕೊಟ್ಟು ರಸ್ತೆಯೂ ಮೇಲ್ದರ್ಜೆಗೇರುತ್ತಿದೆ. ಬಿ.ಸಿ. ರೋಡ್‌- ಅಡ್ಡಹೊಳೆ ರಸ್ತೆ ಕಾನೂನು ಪ್ರಕ್ರಿಯೆ ಸರಿಯಾಗಿದ್ದು ಕಾಮಗಾರಿ ಮತ್ತೆ ಆರಂಭಗೊಂಡಿದೆ. ಕೂಳೂರು ಸೇತುವೆ ಟೆಂಡರ್‌ ಪೂರ್ಣಗೊಂಡಿದೆ. ಎನ್‌ಡಿಎ ಸರಕಾರ ಮಂಗಳೂರು ಬೈಪಾಸ್‌ ರಸ್ತೆಗೆ 1,700 ಕೋ.ರೂ. ಅನುದಾನ ಒದಗಿಸಿದೆ ಎಂದು ಸಂಸದ ನಳಿನ್‌ ವಿವರಿಸಿದರು.

ಹೊಸ ಸೇತುವೆ ಹೀಗಿರುತ್ತದೆ
ಸೇತುವೆಯ ಉದ್ದ 175 ಮೀಟರ್‌, ಅಗಲ 16 ಮೀಟರ್‌. 25 ಮೀಟರಿನ ಏಳು ಅಂಕಣಗಳು ಇರುತ್ತವೆ. 10 ಮೀಟರ್‌ ರಸ್ತೆಯ (ಕ್ಯಾರೇಜ್‌) ಅಗಲ, ಕಾಲುದಾರಿ 3 ಮೀಟರ್‌ ಅಗಲ ಇರುತ್ತದೆ. ಪೈಲ್‌ ಅಡಿಪಾಯದ ಸೇತುವೆಯ ಮೇಲ್ಕಟ್ಟಡ ಗರ್ಡರ್‌ ಬೀಮ್‌ ಮತ್ತು ಸ್ಲಾéಬ್‌ ಹೊಂದಿರುತ್ತದೆ. ಜತೆಗೆ 500 ಮೀಟರ್‌ ಉದ್ದದ ಕೂಡುರಸ್ತೆ ನಿರ್ಮಾಣಗೊಳ್ಳಲಿದೆ.

ಟಾಪ್ ನ್ಯೂಸ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.