ತರಾತುರಿಯಲ್ಲಿ ಜನಸ್ಪಂದನ ಸಭೆ ಬೇಡ


Team Udayavani, Feb 3, 2019, 6:17 AM IST

dvg-6.jpg

ಚಿಂಚೋಳಿ: ಸರಕಾರದಿಂದ ಮನೆ ಮಂಜೂರಾಗಿದ್ದರೂ ಎಂಟು ತಿಂಗಳಿಂದ ಮನೆ ಬಿಲ್‌ ಪಾವತಿ ಆಗಿಲ್ಲ. ಬೇರೆಯವರ ಹತ್ತಿರ ಮನೆ ಕಟ್ಟಿಕೊಳ್ಳಲು 40 ಸಾವಿರ ರೂ. ಸಾಲ ತಂದಿದ್ದೇನೆ. ಇತ್ತ ಕಟ್ಟಿದ ಮನೆಯೂ ಹಾಳಾಗುತ್ತಿದೆ ಎಂದು ಖೊದಂಪೂರ ಗ್ರಾಮದ ಶರಣಮ್ಮ ಜಟಿಂಗ ಶಾಸಕ ಡಾ| ಉಮೇಶ ಜಾಧವ್‌ ಎದುರು ಅಳಲು ತೋಡಿಕೊಂಡರು.

ತಾಲೂಕಿನ ಖೋದಂಪೊರ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಮಹಿಳೆಯೊಬ್ಬಳು ತಮ್ಮ ಸಮಸ್ಯೆ ತೋಡಿಕೊಂಡಳು. ಈ ಬಗ್ಗೆ ತಾಪಂ ಇಒ ಮಹಮ್ಮದ ಮೈನೋದ್ದೀನ ಪಟಲಿಕರ ಮಾತನಾಡಿ, ತಾಲೂಕಿಗೆ ಅಂಬೇಡ್ಕರ ವಸತಿ ಯೋಜನೆ, ಬಸವ ವಸತಿ ಯೋಜನೆ ಮತ್ತು ರಾಜೀವಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮಂಜೂರಿಗೊಂಡಿರುವ ಮನೆಗಳ ಬಿಲ್‌ಗ‌ಳು ಪಾವತಿಯಾಗಿಲ್ಲ. ಇದಕ್ಕಾಗಿ ನಿಗಮದಿಂದ ಕಳೆದ ನಾಲ್ಕು ತಿಂಗಳಿಂದ ಅನುದಾನ ಬಂದಿಲ್ಲವೆಂದು ಶಾಸಕರ ಎದುರು ಸಮಸ್ಯೆವಿವರಿಸಿದರು.

ಶಾಸಕ ಡಾ| ಉಮೇಶ ಜಾಧವ್‌ ಮಾತನಾಡಿ, ನಾನು ಶಾಸಕನಾಗಿ ಎಂಟು ತಿಂಗಳು ಕಳೆದಿದೆ. ಜನರ ಸಮಸ್ಯೆ ಇತ್ಯರ್ಥ ಆಗುತ್ತಿಲ್ಲ, ಯಾವುದೇ ಅಭಿವೃದ್ದಿ ಕಾರ್ಯ ಆಗುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯ ಆಗದ್ದಕ್ಕೆ ನಿರಾಸೆಯಾಗಿದ್ದೇನೆ ಎಂದರು.

ಹೊಸ ಮನೆ ಕಟ್ಟಿಕೊಳ್ಳಲು ಹಳೆ ಮನೆ ಕೆಡವಿದ್ದೇನೆ. ಇರಲು ಮನೆ ಇಲ್ಲ, ಚಳಿ ಮಳೆ ಎನ್ನದೇ ಮಕ್ಕಳೊಂದಿಗೆ ಇರಬೇಕಾಗಿದೆ. ಬಡ್ಡಿಯಿಂದ ತಂದ ಹಣ ಕಟ್ಟಲು ಆಗುತ್ತಿಲ್ಲ. ಮನೆ ಮಾರಿಕೊಳ್ಳುವ ಪರಿಸ್ಥತಿ ಇದೆ ಎಂದು ಗ್ರಾಮಸ್ಥ ಘಾಳಪ್ಪ ತಿಳಿಸಿದರು.

ಜನಸ್ಪಂದನಾ ಸಭೆ ಕಾಟಾಚಾರಕ್ಕಾಗಿ ನಡೆಯಬಾರದು. ಎಲ್ಲ ಅಧಿಕಾರಿಗಳು ಭಾಗವಹಿಸಬೇಕು. ಈ ಕುರಿತು ಡಂಗೂರ ಸಾರಬೇಕು ಎಂದು ಸೂಚನೆ ನೀಡಿದರು.

ಖೋದಂಪೂರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಒಂಭತ್ತು ಬೋರವೆಲ್‌ ಗಳಿದ್ದರೂ ಒಂದೂ ಬೋರವೆಲ್‌ಗ‌ಳಲ್ಲಿ ನೀರು ಬರುತ್ತಿಲ್ಲ ಎಂದು ಗ್ರಾಪಂ ಸದಸ್ಯೆ ಬಂಡಯ್ಯ ಸ್ವಾಮಿ ಶಾಸಕರ ಗಮನಕ್ಕೆ ತಂದರು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಗಾಗಿ ಎಚ್.ಕೆ.ಆರ್‌.ಡಿ ಬಿ.ಯಿಂದ ಅನುದಾನ ನೀಡಿ ಟ್ಯಾಂಕ್‌ ನಿರ್ಮಿಸಿ ಜನರಿಗೆ ಸವಲತ್ತು ನೀಡುತ್ತೇನೆಂದು ಶಾಸಕರು ಭರವಸೆ ನೀಡಿದರು.

ಕೋಡ್ಲಿ ಹೋಬಳಿಯಲ್ಲಿ ಬರುವ ಖೋದಂಪೂರ ಗ್ರಾಮ ಕಂದಾಯ ಇಲಾಖೆ ಸಾಫ್ಟವೇರ್‌ನಲ್ಲಿ ಬರುತ್ತಿಲ್ಲ. ಇದರಿಂದ ಪ್ರಮಾಣ ಪತ್ರ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತೊಂದರೆ ಪಡಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಕಳೆದ ವರ್ಷ ಚಿಮ್ಮನಚೋಡ ತೊಗರಿ ಖರೀದಿ ಕೇಂದ್ರಕ್ಕೆ 40 ಕ್ಟಿಂಟಾಲ್‌ ತೊಗರಿ ಮಾರಾಟ ಮಾಡಿದ್ದೇನೆ. ಕೇವಲ 30ಕ್ವಿಂಟಾಲ್‌ ತೊಗರಿ ಹಣ ಬಂದಿದೆ ಇನ್ನು 10 ಕ್ವಿಂಟಾಲ್‌ ತೊಗರಿ ಹಣ ವರ್ಷವಾದರೂ ಬಂದಿಲ್ಲ ಎಂದು ರೈತ ಶಿವಪುತ್ರಪ್ಪ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಶಾಸಕರು, ಇಂತಹ ಅನೇಕ ಸಮಸ್ಯೆಗಳಿವೆ ತರಾತುರಿಯಲ್ಲಿ ಸಭೆ ನಡೆಸಬಾರದು. ಸಭೆಯನ್ನು ಮುಂದೂಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಡಾ| ಬಾಲರಾಜ, ಗ್ರೇಡ್‌ 2 ತಹಶೀಲ್ದಾರ್‌ ಮಾಣಿಕರಾವ್‌, ಗ್ರಾಪಂ ಅಧ್ಯಕ್ಷ ನಾಗರಾಜಶೆಟ್ಟಿಗೌಡ, ಉಪಾಧ್ಯಕ್ಷೆ ಅನ್ನಪೂರ್ಣ, ಎಇಇ ಮಹ್ಮದ ಅಹೆಮದ, ಎಇಇ ಬಸವರಾಜ ನೇಕಾರ, ಟಿಎಚ್ಒ ಡಾ| ಮಹಮ್ಮದ ಗಫಾರ, ಡಾ| ಧನರಾಜ ಬೊಮ್ಮ, ಎಇಇ ಶರಣಬಸಪ್ಪ ಕೇಶ್ವಾರ, ಅಬಕಾರಿ ಇನ್ಸಪೆಕ್ಟರ್‌ ನಾಜಿಯಾ ಬೇಗಂ, ಜೆಸ್ಕಾಂ ಎಇಇ ಪರಮೇಶ್ವರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ, ಕೃಷಿ ಅಧಿಕಾರಿ ಶ್ರೀಮಂತ ಮೋತಕಪಳ್ಳಿ, ಕಾಶಿಮ ಪಟೇಲ ಕುಪನೂರ ಇನ್ನಿತರರಿದ್ದರು.

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.