ನಗರಕ್ಕೆ ಬೇಕು ಹಲವು ಹೂವಿನ ಮಾರುಕಟ್ಟೆಗಳು
Team Udayavani, Feb 3, 2019, 8:13 AM IST
ಕಾರ್‌ಸ್ಟ್ರೀಟ್ ಹೂವಿನ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದರಂತೆಯೇ ನಗರದ ಲಾಲ್ ಬಾಗ್, ಮಣ್ಣಗುಡ್ಡ, ಕೊಟ್ಟಾರ, ಪಂಪ್‌ವೆಲ್ ಪ್ರದೇಶಗಳಲ್ಲಿ ಸಣ್ಣ ಸಣ್ಣ ಹೂವಿನ ಮಾರುಕಟ್ಟೆಗಳನ್ನು ತೆರೆದರೆ ವ್ಯವಸ್ಥಿತವಾಗಿ ವ್ಯಾಪಾರ ಸಾಗುವುದರೊಂದಿಗೆ ವ್ಯಾಪಾರಿಗಳಿಗೆ ಮತ್ತು ನಾಗರಿಕರಿಗೆ ಅನುಕೂಲವಾಗಬಹುದು. ಅದರೊಂದಿಗೆ ಮಹಾನಗರ ಪಾಲಿಕೆಗೆ ಸ್ವಲ್ಪ ವರಮಾನವೂ ಬರಬಹುದು. ಆದರೆ ವ್ಯಾಪಾರಸ್ತರು ಮಾರುಕಟ್ಟೆಗೆ ಹೋಗಿ ವ್ಯಾಪಾರ ಮಾಡುವುದು ಅಸಾಧ್ಯ.ಏಕೆಂದರೆ ಈಗ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಿಗಳು ಮಾರುಕಟ್ಟೆಗೆ ಬರುವಂತೆ ಅವರಿಗೆ ಮನವರಿಕೆ ಮಾಡಬೇಕು.
ಅದೇ ರೀತಿ ಸಣ್ಣ ಮಾರುಕಟ್ಟೆಯಲ್ಲಿ ಇ-ಶೌಚಾಲಯದ ವ್ಯವಸ್ಥೆ, ನೀರಿನ ವ್ಯವಸ್ಥೆ ಮಾಡಿದರೆ, ವ್ಯಾಪಾರಸ್ಥರು ಸಹಕರಿಸಬಹುದು. ಬದಲಾಗುತ್ತಿರುವ ಈ ಸಂದರ್ಭದಲ್ಲಿ ಉತ್ತಮ ವ್ಯವಸ್ಥೆಗೆ ನಾಂದಿ ಇಡಬೇಕು ಮತ್ತು ನಗರ ಸ್ವಚ್ಛ ಮತ್ತು ಸುಂದರವಾಗಿರಲು ಈ ವ್ಯವಸ್ಥೆ ಅನುಕೂಲವಾಗಬಹುದು. ಈ ಬಗ್ಗೆ ಜನನಾಯಕರು ಮತ್ತು ಅಧಿಕಾರಿಗಳು ಚಿಂತನೆ ನಡೆಸಬೇಕಿದೆ.
ವಿಶ್ವನಾಥ್ ಕೋಟೆಕಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.