ಚಿಮ್ಮುವ ಕುದುರೆ ಕೆಟಿಎಂ 125
Team Udayavani, Feb 4, 2019, 12:30 AM IST
ಕೆಟಿಎಂ 125 ಎಕ್ಸ್ ಷೋರೂಂ ಬೆಲೆ ಮುಂಬೈಯಲ್ಲಿ 1.18 ಲಕ್ಷ ರೂ. ಇಷ್ಟೊಂದು ಕಡಿಮೆ ದರದಲ್ಲಿ 125 ಸಿಸಿ ಬೈಕ್‌ಗಳಲ್ಲಿ ಭಾರೀ ಪವರ್ ಇರುವ ಬೈಕ್‌ಗಳು ಭಾರತದ ಮಾರುಕಟ್ಟೆಯಲ್ಲಿ ಸದ್ಯ ಯಾವುದೂ ಇಲ್ಲ. ಇದೇ ಕಾರಣಕ್ಕೆ ಗ್ರಾಹಕರಿಗೆ ಇದು ಅಚ್ಚುಮೆಚ್ಚಾಗಿದೆ.
ಕೆಟಿಎಂ! ಹೆಸರು ಕೇಳಿದ ಕೂಡಲೇ ಯುವಕರ ಎದೆಬಡಿತ ಜೋರಾಗುತ್ತದೆ. ರಸ್ತೆಯಲ್ಲಿ ಕೆಟಿಎಂ ಬೈಕ್ ಹೋದರೆ ಸಾಕು, ಶಬ್ಧ ಬಂದ ದಿಕ್ಕಿನತ್ತ ಕಣ್ಣುಗಳು ಹೊರಳುತ್ತವೆ. ಡ್ನೂಕ್ ಮಾದರಿ ಬೈಕ್‌ಗಳು ಅದ್ಭುತ ಪಂಚಿಂಗ್ ಪವರ್‌ನೊಂದಿಗೆ ನುಗ್ಗುತ್ತಿದ್ದರೆ, ಎಂಥವರಾದರೂ.. ಯಬ್ಬಬ್ಬ.. ಎಂದು ಉದ್ಗಾರ ತೆಗೆಯದೇ ಇರಲು ಸಾಧ್ಯವೇ ಇಲ್ಲ. 200ಸಿಸಿ, 250 ಸಿಸಿ, 390 ಸಿಸಿ ಬೈಕ್‌ಗಳ ಸಾಲಿಗೆ ಈಗ ಕೆಟಿಎಂ 125 ಸಿಸಿ ಬೈಕ್‌ಗಳನ್ನೂ ಸೇರಿಸಿದೆ. ಡಿಸೆಂಬರ್‌ನಲ್ಲಿ ಈ ಬೈಕ್ ಮಾರುಕಟ್ಟೆಗೆ ಬಂದಿದ್ದು, ಕೆಟಿಎಂ ಷೇರುಗಳನ್ನು ಹೊಂದಿರುವ ಪುಣೆಯ ಬಜಾಜ್ ಪ್ಲಾಂಟ್‌ನಲ್ಲಿ ಈ ಬೈಕ್‌ಗಳು ತಯಾರಾಗುತ್ತಿವೆ. ಕೆಟಿಎಂ ಬೈಕ್‌ಗಳಲ್ಲಿ ಸದ್ಯ 200 ಸಿಸಿ ಬೈಕ್‌ಗಳು ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಅವುಗಳನ್ನು ಮೀರಿಸುವಂತೆ ಇದೀಗ 125 ಸಿಸಿ ಬೈಕ್‌ಗಳೂ ಮಾರಾಟವಾಗುತ್ತಿರುವ ಟ್ರೆಂಡ್ ಶುರುವಾಗಿದೆ.
ಕಡಿಮೆ ಬೆಲೆಗೆ ಅದ್ಭುತ ಬೈಕ್
ಕೆಟಿಎಂ 125 ಎಕ್ಸ್ ಷೋರೂಂ ಬೆಲೆ ಮುಂಬೈಯಲ್ಲಿ 1.18 ಲಕ್ಷ ರೂ. ಇಷ್ಟೊಂದು ಕಡಿಮೆ ದರದಲ್ಲಿ 125 ಸಿಸಿ ಬೈಕ್‌ಗಳಲ್ಲಿ ಭಾರೀ ಪವರ್ ಇರುವ ಬೈಕ್‌ಗಳು ಭಾರತದ ಮಾರುಕಟ್ಟೆಯಲ್ಲಿ ಸದ್ಯ ಯಾವುದೂ ಇಲ್ಲ. ಇದೇ ಕಾರಣಕ್ಕೆ ಗ್ರಾಹಕರಿಗೆ ಇದು ಅಚ್ಚುಮೆಚ್ಚಾಗಿದೆ. ಲಿಕ್ವಿಡ್ ಕೂಲ್ಡ್ ಇರುವ ಈ ಬೈಕ್‌ನ ಎಂಜಿನ್ ಸಖತ್ ರೆಸ್ಪಾನ್ಸಿವ್. ಇದಕ್ಕಾಗಿ ಇದು ಯುವ ಜನತೆಯ ಮನಸ್ಸನ್ನು ಕದ್ದಿದೆ.
ಹೇಗಿದೆ ಬೈಕ್?
ಅತ್ಯಾಧುನಿಕ ರೀತಿಯ ಎಲ್ಲ ಫೀಚರ್ಗಳನ್ನು ಇದು ಹೊಂದಿದೆ. ಕೆಟಿಎಂ ಡ್ನೂಕ್ ಆವೃತ್ತಿಯ ಇತರ ಬೈಕ್‌ಗಳಂತೆಯೇ ಈ ಬೈಕ್ ಕೂಡ ವಿನ್ಯಾಸ ಹೊಂದಿದೆ. ಆದರೆ 390 ಮಾದರಿ ಬೈಕ್‌ಗಳಲ್ಲಿರುವ ಅತ್ಯಾಧುನಿಕ ಟಚ್‌ಸ್ಕ್ರೀನ್ ಇರುವ ಇನ್ಸು$r$Åಮೆಂಟಲ್ ಕ್ಲಸ್ಟರ್ ಮಾತ್ರ ಇದರಲ್ಲಿಲ್ಲ. ಬದಲಿಗೆ, ಸಂಪೂರ್ಣ ಡಿಜಿಟಲ್ ಮೀಟರ್ ಇದೆ. ಏರೋಡೈನಾಮಿಕ್ ಪೊಸಿಷನ್ ಹೊಂದಿದ ಸೀಟುಗಳು, ಮುಂಭಾಗದ ಆಕರ್ಷಕ ಹೆಡ್‌ಲೈಟ್, ಹಿಂಭಾಗದ ಬ್ರೇಕ್, ಗ್ರ್ಯಾಬ್‌ರೇಲ್‌ಗಳು ಡ್ನೂಕ್‌ನ ಪ್ಲಸ್‌ಪಾಯಿಂಟ್. ನಿತ್ಯದ ಬಳಕೆ ಮತ್ತು ತುಸು ದೂರದ ಸವಾರಿಗೆ ಹೇಳಿ ಮಾಡಿಸಿದಂತೆ ಈ ಬೈಕ್ ಅನ್ನು ರೂಪಿಸಲಾಗಿದೆ. ಇದರ ಫ್ರೆàಂ 200 ಸಿಸಿ ಬೈಕ್‌ನಂತೆಯೇ ಇರುವುದರಿಂದ ಆರಾಮದಾಯಕ ಸವಾರಿಯೂ ಸಾಧ್ಯ. ಹಿಂಭಾಗ ಮತ್ತು ಮುಂಭಾಗ ಡಿಸ್ಕ್ ಬ್ರೇಕ್‌ಗಳು ಮತ್ತು ಸುರಕ್ಷತೆಗಾಗಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ, 175 ಎಂ.ಎಂ.ನ ಗ್ರೌಂಡ್ ಕ್ಲಿಯರೆನ್ಸ್, ಹಿಂಭಾಗ ಮೋನೋಶಾಕ್ ಸಸ್ಪೆನÒನ್, ಹಿಂಭಾಗ ಅಗಲವಾದ ಟಯರ್‌ಗಳನ್ನು ಹೊಂದಿದೆ. ಕಪ್ಪು, ಬಿಳಿ, ಕೇಸರಿ ಬಣ್ಣಗಳಲ್ಲಿ ದೊರೆಯುತ್ತದೆ.
ಭರ್ಜರಿ ಪವರ್
124.7 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಇದರಲ್ಲಿದ್ದು, ಸಿಂಗಲ್ ಸಿಲಿಂಡರ್‌ನಲ್ಲಿ 14.5 ಬಿಎಚ್‌ಪಿ ಶಕ್ತಿಯನ್ನು, 12 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6 ಗಿಯರ್ ಸ್ಪೀಡ್ ಮತ್ತು ಫುಎಲ್ ಇಂಜೆಕ್ಷನ್ ಸಿಸ್ಟಂ ಇದ್ದು, ಅತ್ಯಂತ ತ್ವರಿತವಾಗಿ 0-60 ಕಿ.ಮೀ. ವೇಗವನ್ನು ಪಡೆಯುತ್ತದೆ. ಸೆಲ್ಫ್ಸ್ಟಾರ್ಟ್ ಇದ್ದು, ಕೇವಲ 127 ಕೆಜಿ ಭಾರವನ್ನು ಬೈಕ್ ಹೊಂದಿದೆ. 1366 ವೀಲ್‌ಬೇಸ್ ಇರುವ ಬೈಕ್ ಇದಾಗಿದ್ದು 810 ಎಂ.ಎಂ. ಸೀಟ್ ಎತ್ತರ ಹೊಂದಿದೆ. ಮುಂಭಾಗ ಟೆಲಿಸ್ಕೋಪಿಕ್, ಹಿಂಭಾಗ ಮೋನೋಶಾಕ್ ಇದ್ದು, 17 ಇಂಚಿನ ಅಲಾಯ್ ವೀಲ್ ರಿಮ್‌ಗಳಿವೆ. ಮುಂಭಾಗ 300 ಎಂ.ಎಂ.ನ ದೊಡ್ಡ ಡಿಸ್ಕ್ಬ್ರೇಕ್ ಮತ್ತು ಹಿಂಭಾಗ 230 ಎಂ.ಎಂ.ನ ಡಿಸ್ಕ್ ಇದೆ. 10.2 ಲೀ. ಇಂಧನ ಟ್ಯಾಂಕ್ ಇದ್ದು ಸುಮಾರು 35 ಕಿ.ಮೀ. ಮೈಲೇಜ್ ನೀಡುತ್ತದೆ.
ತಾಂತ್ರಿಕತೆ
4 ಸ್ಟ್ರೋಕ್, 1 ಸಿಲಿಂಡರ್
124.71 ಸಿಸಿ
14.5 ಬಿಎಚ್‌ಪಿ
6 ಸ್ಪೀಡ್ ಗಿಯರ್
ಲಿಕ್ವಿಡ್ ಕೂಲ್ಡ್ ಎಂಜಿನ್
175 ಎಂಎಂ ಗ್ರೌಂಡ್ ಕ್ಲಿಯರೆನ್ಸ್
127 ಕೆಜಿ ಒಟ್ಟು ಭಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.