ಬ್ರಹ್ಮಾವರ: ಬಿಲ್ಲವ ಮಹಾ ಸಮಾವೇಶದಲ್ಲಿ ಜನಸಾಗರ
Team Udayavani, Feb 4, 2019, 1:00 AM IST
ಬ್ರಹ್ಮಾವರ: ಇಲ್ಲಿನ ಗಾಂಧಿ ಮೈದಾನದಲ್ಲಿ ರವಿವಾರ ಬಿಲ್ಲವ ಮಹಾ ಸಮಾವೇಶ ಯಶಸ್ವಿಯಾಗಿ ಜರಗಿತು. ಸಮಾವೇಶ ಹಾಗೂ ಇದಕ್ಕೂ ಮೊದಲಿನ ಬೈಕ್ ರ್ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. 45 ಸಾವಿರ ಚ. ಅಡಿ ವಿಸ್ತೀರ್ಣದ ಸಭಾಂಗಣದಲ್ಲಿ ಸಮಾವೇಶ ನಡೆದಿದ್ದು, ಸಮಾವೇಶಕ್ಕೆ ಆಗಮಿಸಲು ನೂರಾರು ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.
ಆಕರ್ಷಕ ವೇದಿಕೆ
ನಾರಾಯಣಗುರು ವೇದಿಕೆಯ ಒಂದೆಡೆ ಕೋಟಿ ಚೆನ್ನಯರ ಭಾವಚಿತ್ರ, ಇನ್ನೊಂದೆಡೆ ನಾರಾಯಣ ಗುರುಗಳ ಭಾವಚಿತ್ರ ಗಮನ ಸೆಳೆಯಿತು. ಸಾಂಪ್ರದಾಯಿಕ ಶೈಲಿಯ ಗುತ್ತಿನಮನೆಯ 4 ಕಂಬಗಳು ವೇದಿಕೆಯನ್ನು ಅಲಂಕರಿಸಿದ್ದವು.
ಬೇಡಿಕೆಗಳು
ಬಿಲ್ಲವ ಸಮಾಜ ಹಿಂದುಳಿದ ಪ್ರವರ್ಗ 2ರಲ್ಲಿ ಬರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉನ್ನತ ಶಿಕ್ಷಣ, ಸರಕಾರಿ ಸೌಲಭ್ಯಕ್ಕೆ ಆದಾಯ ಮಿತಿ ನಿರ್ಬಂಧದಿಂದ ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಬಿಲ್ಲವರನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಬ್ರಹ್ಮಶ್ರೀ ನಾರಾಯಣಗುರು ಯೋಜನೆ ನಿಗಮ ಸ್ಥಾಪಿಸಬೇಕು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ, ಬಿಲ್ಲವ ಜನಾಂಗದ ಕಸುಬಾದ ಕೃಷಿ ಹಾಗೂ ಇನ್ನಿತರ ಸೊÌàದ್ಯೋಗ ಚಟುವಟಿಕೆಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕು, ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಅರ್ಚಕರಿಗೆ ಮಾಸಾಶನ ಸೌಲಭ್ಯ, ಪ್ರಸ್ತುತ ಗರಡಿ ಇರುವ ಸ್ಥಳದ ಪಹಣಿ ಪತ್ರ ಆಯಾಯ ಗರಡಿಗಳ ಹೆಸರಿನಲ್ಲಿಯೇ ನೋಂದಾಯಿಸಬೇಕೆನ್ನುವ ಪ್ರಮುಖ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಉಪಾಹಾರ ವ್ಯವಸ್ಥೆ
ಸಮಾವೇಶಕ್ಕೆ ಆಗಮಿಸಿದವರಿಗೆ ನೀರು, ಮಜ್ಜಿಗೆ ಹಾಗೂ ಉಪಾಹಾರ ವ್ಯವಸ್ಥೆಗೊಳಿಸಲಾಯಿತು. 200ಕ್ಕೂ ಹೆಚ್ಚು ಯುವಕರು ಈ ವ್ಯವಸ್ಥೆಯಲ್ಲಿ ತೊಡಗಿದರು. ಜಿಲ್ಲೆಯ ಹಳ್ಳಿಹಳ್ಳಿಯಲ್ಲಿರುವ ಮನೆಗಳಿಗೂ ತೆರಳಿ ಮನವಿ ಪತ್ರ ನೀಡಲಾಗಿತ್ತು. ಸಹಸ್ರಾರು ಬೈಕ್ ಸ್ಟಿಕ್ಕರ್ ಮತ್ತು ಕಾರು ಸ್ಟಿಕ್ಕರ್ ವಿತರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.