ಪ್ರಣಾಳಿಕೆಗೆ ಸಲಹೆ ಆಹ್ವಾನ
Team Udayavani, Feb 4, 2019, 12:30 AM IST
ಹೊಸದಿಲ್ಲಿ: ಈಗಾಗಲೇ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿರುವ ಬಿಜೆಪಿ, ತನ್ನ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲು ದೇಶದ ಜನರ ಸಲಹೆ ಕೋರಿದೆ. “ಭಾರತ್ ಕೆ ಮನ್ ಕಿ ಬಾತ್, ಮೋದಿ ಕೆ ಸಾಥ್’ ಎಂಬ ಹೆಸರಿನ ಒಂದು ತಿಂಗಳ ಕಾರ್ಯಕ್ರಮಕ್ಕೆ ಭಾನುವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಹಿರಿಯ ನಾಯಕ ರಾಜನಾಥ್‌ಸಿಂಗ್ ಚಾಲನೆ ನೀಡಿದ್ದಾರೆ.
ಪ್ರಣಾಳಿಕೆ ತಯಾರಿಕಾ ಪ್ರಕ್ರಿಯೆಯಲ್ಲೂ ಪ್ರಜಾಪ್ರಭುತ್ವವನ್ನು ತರುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಿದ್ದು, ಇದು ದೇಶದ ಪ್ರಜಾಸತ್ತೆಯನ್ನು ಬಲಿಷ್ಠಗೊಳಿಸುವ ವಿಶಿಷ್ಟ ಪ್ರಯೋಗ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ. ಕಾರ್ಯಕ್ರಮ ನಡೆದ ಸ್ಥಳದಲ್ಲೇ ಇದ್ದ ಹೋಟೆಲ್ ವೇಯrರ್‌ವೊಬ್ಬರಿಂದ ಮೊದಲ ಸಲಹೆಯನ್ನು ಪಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸಲಹೆ ನೀಡುವುದು ಹೇಗೆ?: ಇದಕ್ಕೆಂದೇ 300 ವಾಹನಗಳನ್ನು ಬಳಸಲು ಬಿಜೆಪಿ ನಿರ್ಧರಿಸಿದೆ. ಅದರಂತೆ, 300ರಷ್ಟು ವಾಹನಗಳು ದೇಶಾದ್ಯಂತ ಸಂಚರಿಸಲಿವೆ. ಈ ವಾಹನಗಳಲ್ಲಿ ಸುಮಾರು 7,700 ಪೆಟ್ಟಿಗೆಗಳನ್ನು ಇಡಲಾಗಿದೆ. ವಾಹನಗಳು ದೇಶದ 4 ಸಾವಿರ ಅಸೆಂಬ್ಲಿಗಳಿಗೆ ತೆರಳಿ, ಅಲ್ಲಿನ ಜನರಿಂದ ಪ್ರಣಾಳಿಕೆಗೆ ಸಲಹೆಗಳನ್ನು ಪಡೆಯಲಿದೆ. ಜನ ತಮ್ಮ ಮನದಲ್ಲಿರುವಂಥ ಸಲಹೆಗಳನ್ನು ಪತ್ರದಲ್ಲಿ ಬರೆದು ಪೆಟ್ಟಿಗೆಯೊಳಕ್ಕೆ ಹಾಕಬೇಕು. ಇದಲ್ಲದೆ ಸಾಮಾಜಿಕ ಮಾಧ್ಯಮ ಮತ್ತು ದೂರವಾಣಿ ಸಂವಹನದ ಮೂಲಕವೂ ಸಲಹೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 10 ಕೋಟಿ ಮಂದಿಯಿಂದ ಸಲಹೆಗಳನ್ನು ಸ್ವೀಕರಿಸಲು ಬಿಜೆಪಿ ಉದ್ದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್ ಎಂಟ್ರಿ ನೇಮಕಾತಿ
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.