ಐ ಲವ್‌ ಯೂ.. ಚಿತ್ರದ ಆಡಿಯೋ ಬಿಡುಗಡೆ


Team Udayavani, Feb 4, 2019, 5:17 AM IST

dvg-2.jpg

ದಾವಣಗೆರೆ: ಬೆಣ್ಣೆಯಂತಹ ಮನಸ್ಸಿನ ದಾವಣಗೆರೆಯಲ್ಲಿ ಐ ಲವ್‌ ಯೂ.. ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿರುವುದು ತುಂಬಾನೇ ಖುಷಿ ವಿಚಾರ. ದಾವಣಗೆರೆ ಅಲ್ಲದೇ ಇಡೀ ರಾಜ್ಯದ ಜನರು, ಅಭಿಮಾನಿಗಳು ಐ ಲವ್‌ ಯೂ… ಚಿತ್ರಕ್ಕೆ ಖಂಡಿತವಾಗಿಯೂ ಐ ಲವ್‌.. ಅನ್ನುತ್ತಾರೆ. ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂದು ನಾಯಕ ನಟ ಉಪೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ರಾತ್ರಿ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಐ ಲವ್‌ ಯೂ.. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದಾವಣಗೆರೆಯ ಜನರು ಕನ್ನಡ ಚಿತ್ರಗಳ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದಾರೆ. ಸಾಕಷ್ಟು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆಯಲು ದಾವಣಗೆರೆಯಲ್ಲಿ ಚಿತ್ರ ಗೆದ್ದರೆ ಮುಗಿಯಿತು ಎಂದು ಸಂತಸ ವ್ಯಕ್ತಪಡಿಸಿದರು.

ನನ್ನ ಅಭಿನಯದ ಎ… ಚಿತ್ರದ ಶತದಿನೋತ್ಸವ ಸಮಾರಂಭ ದಾವಣಗೆರೆಯಲ್ಲೇ ಆಗಿದ್ದು ನನಗೆ ಈಗಲೂ ನೆನಪಿನಲ್ಲಿದೆ. ಐ ಲವ್‌ ಯೂ… ಚಿತ್ರವೂ ಅದೇ ರೀತಿ ಯಶಸ್ಸು ಕಾಣಲಿದೆ ಎಂದ ಅವರು, ಜನರ ಹಷೊìೕದ್ಘಾರ ಕೇಳಿ, ರಕ್ತ ಕಣ್ಣೀರು ಚಿತ್ರದ ಶೈಲಿಯಲ್ಲಿ ಐ ಲೈಕ್‌ ಇಟ್… ಎನ್ನುವ ಮೂಲಕ ಇನ್ನಷ್ಟು ಹರ್ಷೋದ್ಘಾರಕ್ಕೆ ಕಾರಣರಾದರು.

ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ರಾಜಕಾರದಲ್ಲಿ ಹೊಸ ಬದಲಾವಣೆ ತರುವ ಉದ್ದೇಶ ಇದೆ. ಆದೇ ಕಾರಣಕ್ಕಾಗಿಯೇ ನಾನು ಚಿತ್ರರಂಗಕ್ಕೆ ಬಂದಿದ್ದೇನೆ. ಸಿನಿಮಾದ ರಾಜಕೀಯ ಆ ಮೂಲಕ ಹೊಸ ಕ್ರಾಂತಿ ಮಾಡುವ ವಿಶ್ವಾಸ ಇದೆ ಎಂದರು.

ಸಂಗೀತ ನಿರ್ದೇಶಕ ಡಾ| ಕಿರಣ್‌ ಮಾತನಾಡಿ, ಐ ಲವ್‌ ಯೂ.. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಒಂದು ಹಾಡನ್ನು ಕ್ರೇಜಿಸ್ಟಾರ್‌ ರವಿಚಂದ್ರನ್‌ರವರೇ ನೀಡಿದ್ದಾರೆ. ಉಪೇಂದ್ರ ಮತ್ತು ಆರ್‌. ಚಂದ್ರು ಅವರ ಮೇಲಿನ ಪ್ರೀತಿಗಾಗಿ ರವಿಚಂದ್ರನ್‌ ಅವರೇ ರೆಕಾರ್ಡಿಂಗ್‌ ಮಾಡಿದ್ದಾರೆ. ಎಲ್ಲಾ ಹಾಡುಗಳು ಚೆನ್ನಾಗಿವೆ. ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಯಲ್ಲಿ ಈಗಲೂ ಡಾಕ್ಟರ್‌ ಆಗಿ ಕೆಲಸ ಮಾಡುತ್ತಿರುವ ನನ್ನನ್ನು ಗುರುತಿಸಿ, ಆರ್‌. ಚಂದ್ರುರವರು ಮೊದಲ ಬಾರಿಗೆ ಸಂಗೀತ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನಿರ್ದೇಶಕ ಆರ್‌. ಚಂದ್ರು ಮಾತನಾಡಿ, ಉಪೇಂದ್ರ ಬ್ರೈನ್‌, ನನ್ನ ಮೈಂಡ್‌ ಕಾಂಬಿನೇಷನ್‌ನಲ್ಲಿ ಐ ಲವ್‌ ಯೂ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಕನ್ನಡ, ತೆಲುಗು ಎರಡೂ ಭಾಷೆಯಲ್ಲಿ ಆದಷ್ಟು ಬೇಗ ತೆರೆ ಕಾಣಲಿದೆ. ಉಪೇಂದ್ರ ಎರಡು ವರ್ಷಗಳ ನಂತರ ಮೇಲೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಎಲ್ಲರನ್ನೂ ರಂಜಿಸಲಿದ್ದಾರೆ ಎಂದರು.

ನಟಿ ಸೋನುಗೌಡ ಮಾತನಾಡಿ, ಉಪೇಂದ್ರ ನಟನೆ, ಚಿಂತನೆ ಅದ್ಭುತ ಎಂದು ಸಂತಸ ವ್ಯಕ್ತಪಡಿಸಿದರು.

ನಟಿ ರಚಿತಾರಾಮ್‌ ಮಾತನಾಡಿ, ನಮಸ್ಕಾರ ದಾವಣಗೆರೆ. ಲವ್‌ ಯೂ ಆಲ್‌ ಎಂದು ಫ್ಲೈಯಿಂಗ್‌ ಕಿಸ್‌ ಮಾಡಿದರು. ದಾವಣಗೆರೆಗೆ ಬಂದ ತಕ್ಷಣ ಬೆಣ್ಣೆ ದೋಸೆ ತಿಂದೆ. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಇಷ್ಟೊಂದು ಜನ ನೋಡಿ ಸಂತಸವಾಗಿದೆ. ಏನು ಮಾತನಾಡಬೇಕು ಎಂದು ಗೊತ್ತಾಗದಷ್ಟು ಜನರನ್ನು ನೋಡ್ತಾ ಇದೀನಿ. ಸ್ಪೀಚ್ ಮರೆತೇ ಹೋಗಿದಿನಿ. ಮೊದಲ ಬಾರಿ ಉಪೇಂದ್ರ ಜೊತೆಗೆ ಕೆಲಸ ಮಾಡಿದ್ದು ತುಂಬಾ ಖುಷಿ. ಚಿತ್ರ ಎಲ್ಲರಿಗೂ ಇಷ್ಟವಾಗುತ್ತೆ ಎಂದರು.

ಐ ಲವ್‌ ಯೂ.. ಚಿತ್ರದ ಆಡಿಯೋ ಬಿಡುಗಡೆಗೆ ಮೇಯರ್‌ ಶೋಭಾ ಪಲ್ಲಾಗಟ್ಟೆ, ನಾಯಕ ನಟ ಉಪೇಂದ್ರ, ನಟಿಯರಾದ ರಚಿತಾರಾಮ್‌, ಸೋನುಗೌಡ, ಮಯೂರಿ, ಸಂಗೀತ ನಿರ್ದೇಶಕ ಗುರುಕಿರಣ್‌, ಡಾ. ಕಿರಣ್‌ ತೋಟಂಬೈಲ್‌, ಚಿತ್ರದ ನಿರ್ದೇಶಕ ಆರ್‌. ಚಂದ್ರು, ಲಹರಿ ವೇಲು, ಮೋಹನ್‌, ನಗರ ಪ್ರಭಾರ ಉಪಾಧೀಕ್ಷಕ ಗೋಪಾಲಕೃಷ್ಣ ಗೌಡ, ಕೇಂದ್ರ ವೃತ್ತ ನಿರೀಕ್ಷಕ ಇ. ಆನಂದ್‌, ಬಡಾವಣಾ ಪೊಲೀಸ್‌ ಠಾಣಾ ಪಿಎಸ್‌ಐ ವೀರಬಸಪ್ಪ ಕುಸಲಾಪುರ್‌ ಹಾಗೂ ಚಿತ್ರದ ನಿರ್ದೇಶಕ ಆರ್‌. ಚಂದ್ರು ಪತ್ನಿ ಯಮುನಾ ಚಂದ್ರು ಸಾಕ್ಷಿಯಾದರು. ಐ ಲವ್‌ ಯೂ.. ಚಿತ್ರದ ಆಡಿಯೋ ಬಿಡುಗಡೆ ಹಿನ್ನೆಲೆಯಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನ ಕಿಕ್ಕಿರಿದು ತುಂಬಿತ್ತು.

ಸೋನು ಗೌಡ, ಐ ಲವ್‌ ಯೂ ಚಿತ್ರದ ಕಾಣೆಯಾದ.. ನಿಂಗೆ ಕಾದೇನಾ.. ಹಾಡಿಗೆ ಡ್ಯಾನ್ಸ್‌ ಮಾಡುವ ಮೂಲಕ ರಂಜಿಸಿದರು. ಮಯೂರಿ ಡ್ಯಾನ್ಸ್‌ ಮೂಲಕ ವೇದಿಕೆಗೆ ರಂಗು ನೀಡಿದರು. ಅನುಶ್ರೀ ನಿರೂಪಿಸಿದರು.

ಟಾಪ್ ನ್ಯೂಸ್

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

Davangere: ಉತ್ತಮ ಹಿಂಗಾರು: ಬಂಪರ್‌ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

1-dvg

Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

ಅಡ್ಡಹೊಳೆಯಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

13(1

Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.