ವಿಶೇಷ ಡೆಮು ರೈಲು ಸೇವೆಗೆ ಹಸಿರು ನಿಶಾನೆ
Team Udayavani, Feb 4, 2019, 6:35 AM IST
ಬೆಂಗಳೂರು: ನಗರದ ವೈಟ್‌ಫೀಲ್ಡ್‌ನಿಂದ ಬಾಣಸವಾಡಿ ನಡುವೆ ವಿಶೇಷ ಡೆಮು ರೈಲು ಸೇವೆಗೆ ಭಾನುವಾರ ಚಾಲನೆ ದೊರೆಯಿತು. ಈ ಮೂಲಕ ಬಹುತೇಕರಿಗೆ ಸಂಚಾರದಟ್ಟಣೆ ಕಿರಿಕಿರಿಯಿಂದ ಕೊಂಚ ಮುಕ್ತಿ ಸಿಗಲಿದೆ. ವಾರದ ಆರು ದಿನ (ಭಾನುವಾರ ಹೊರತುಪಡಿಸಿ) ಜನರಿಗೆ ಈ ಸೇವೆ ಲಭ್ಯವಾಗಲಿದೆ.
ಬೆಳಗ್ಗೆ 7.50ಕ್ಕೆ ವೈಟ್‌ಫೀಲ್ಡ್‌ನಿಂದ ಹಾಗೂ ಸಂಜೆ 6.25ಕ್ಕೆ ಬಾಣಸವಾಡಿಯಿಂದ ಈ ರೈಲು ಹೊರಡಲಿದೆ. ಸೋಮವಾರದಿಂದಲೇ ಈ ಸೇವೆ ಜನರಿಗೆ ಲಭ್ಯವಾಗಲಿದೆ. ಇದರಿಂದ ಆರಂಭದಲ್ಲೇ ಸುಮಾರು ಸಾವಿರ ಜನರಿಗೆ ಅನುಕೂಲ ಆಗುವ ನಿರೀಕ್ಷೆ ಇದೆ. ಹೂಡಿ, ಕೆ.ಆರ್.ಪುರ, ಬೈಯಪ್ಪನಹಳ್ಳಿ ಸುತ್ತಮುತ್ತಲಿನ ಜನರಿಗೂ ನೆರವಾಗಲಿದೆ. ಸಂಸದ ಪಿ.ಸಿ.ಮೋಹನ್ ಈ ಸೇವೆಗೆ ಹಸಿರು ನಿಶಾನೆ ತೋರಿಸಿದರು.
ಈಗಾಗಲೇ ಉದ್ದೇಶಿತ ಮಾರ್ಗದಲ್ಲಿ ಎರಡು ಡೆಮು ರೈಲುಗಳಿವೆ (ಬೆಳಗ್ಗೆ 9 ಮತ್ತು 10 ಗಂಟೆಗೆ). ಸುಮಾರು ಏಳೆಂಟು ಸಾಮಾನ್ಯ ರೈಲುಗಳೂ ಬಂಗಾರಪೇಟೆಯಿಂದ ಹೊರಟು ವೈಟ್‌ಫೀಲ್ಡ್ ಮೂಲಕ ಹಾದುಹೋಗುತ್ತವೆ. ಆದರೆ, ವೈಟ್‌ಫೀಲ್ಡ್‌ನಿಂದ ಬಾಣಸವಾಡಿಗೆ ಬೆಳಗ್ಗೆ 8ರ ಒಳಗೆ ಯಾವುದೇ ರೈಲು ಸೇವೆ ಇರಲಿಲ್ಲ. ಅದೇ ರೀತಿ, 5 ಗಂಟೆಯ ನಂತರ ಬಾಣಸವಾಡಿಯಿಂದ ವೈಟ್‌ಫೀಲ್ಡ್‌ಗೂ ರೈಲುಗಳಿರಲಿಲ್ಲ.
ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲು ಕಲ್ಪಿಸಲಾಗಿದೆ. ಇದರಿಂದ ಕೇವಲ 40 ನಿಮಿಷದಲ್ಲಿ ಜನ ಬಾಣಸವಾಡಿ ತಲುಪಲಿದ್ದಾರೆ. ಇದು ಬೈಯಪ್ಪನಹಳ್ಳಿಗೆ ಸಂಪರ್ಕ ಕಲ್ಪಿಸುವುದರಿಂದ ಪ್ರಯಾಣಿಕರು ಅಲ್ಲಿಂದ ಮೆಟ್ರೋ ಮಾರ್ಗವಾಗಿ ನಗರದ ವಿವಿಧ ಭಾಗಗಳಿಗೆ ತೆರಳಬಹುದು. ಈ ವಿಶೇಷ ಡೆಮು ರೈಲಿನ ಪ್ರಯಾಣ ದರ 10 ರೂ. ನಿಗದಿಪಡಿಸಲಾಗಿದೆ.
ಸಂಜೆ 7 ಗಂಟೆ ನಂತರವೂ ಬೆಂಗಳೂರು ನಗರದಿಂದ ವೈಟ್‌ಫೀಲ್ಡ್‌ಗೆ ಇದೇ ಮಾದರಿಯ ಸೇವೆ ಕಲ್ಪಿಸಬೇಕು. ಅಲ್ಲದೆ, ಬಾಣಸವಾಡಿಗೆ ಸೀಮಿತವಾಗಿರುವ ಈ ವಿಶೇಷ ಡೆಮು ರೈಲು ಸೇವೆಯನ್ನು ಯಶವಂತಪುರವರೆಗೆ ವಿಸ್ತರಿಸಬೇಕು ಎಂದೂ ಪ್ರಯಾಣಿಕರು ಒತ್ತಾಯಿಸಿದ್ದಾರೆ. ವಿಶೇಷ ಡೆಮು ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ಪಿ.ಸಿ. ಮೋಹನ್, ಉಪನಗರ ರೈಲು ಯೋಜನೆಯನ್ನು ತ್ವರಿತ ಗತಿಯಲ್ಲಿ ಜಾರಿಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಸ್ಪಂದನೆ ದೊರೆಯಬೇಕಿದೆ. ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದರೂ, 19 ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಕೈಬಿಟ್ಟು, ಯೋಜನೆ ಅನುಷ್ಠಾನಕ್ಕೆ ಅಗತ್ಯ ಇರುವ ಎಸ್‌ಪಿವಿ (ವಿಶೇಷ ಉದ್ದೇಶ ವಾಹನ) ರಚನೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಶಾಸಕರಾದ ಎಸ್.ರಘು ಹಾಗೂ ಅ.ದೇವೇಗೌಡ ಉಪಸ್ಥಿತರಿದ್ದರು.
ಅಟೋಮ್ಯಾಟಿಕ್ ಸಿಗ್ನಲಿಂಗ್ ಸೇವೆಗೆ ಮುಹೂರ್ತ ನಿಗದಿ: ಬಹುನಿರೀಕ್ಷಿತ ಕಂಟೋನ್‌ಮೆಂಟ್-ವೈಟ್‌ಫೀಲ್ಡ್ ನಡುವೆ ಅಟೋಮ್ಯಾಟಿಕ್ ಸಿಗ್ನಲಿಂಗ್ ಸೇವೆಗೆ ಮುಹೂರ್ತ ನಿಗದಿಯಾಗಿದ್ದು, ಫೆ.9ರಂದು ಮೊದಲ ಹಂತ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ಹಂತ-ಹಂತವಾಗಿ ಇದನ್ನು ಜಾರಿಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದ್ದು, ಮೊದಲಿಗೆ ಕಂಟೋನ್‌ಮೆಂಟ್, ಕೆಲವು ದಿನಗಳ ಅಂತರದಲ್ಲಿ ಬೈಯಪ್ಪನಹಳ್ಳಿ ಹಾಗೂ ಮತ್ತೆ ಕೆಲವು ದಿನಗಳ ಬಳಿಕ ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್‌ನಲ್ಲಿ ಜಾರಿಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶೇಷ ಡೆಮು ರೈಲಿನ ವೇಳಾಪಟ್ಟಿ
-ವೈಟ್‌ಫೀಲ್ಡ್‌ನಿಂದ ಹೊರಡುವ ಸಮಯ ಬೆಳಗ್ಗೆ 7.50
-ಬಾಣಸವಾಡಿ ತಲುಪುವ ಸಮಯ ಬೆಳಗ್ಗೆ 8.30
-ಬಾಣಸವಾಡಿಯಿಂದ ಹೊರಡುವ ಸಮಯ ಸಂಜೆ 6.25
-ವೈಟ್‌ಫೀಲ್ಡ್ ತಲುಪುವ ಸಮಯ ಸಂಜೆ 7.20
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.