“ಜನರಿದ್ದಲ್ಲಿಗೆ ಸೌಕರ್ಯ ತಲುಪಿಸುವ ಕೆಲಸ ಸಾಕಾರಗೊಳ್ಳುತ್ತಿದೆ’
Team Udayavani, Feb 5, 2019, 12:30 AM IST
ಕುಂದಾಪುರ: ಜನರಿದ್ದಲ್ಲಿಗೆ ಸೌಲಭ್ಯ ತಲುಪಿಸುವುದು ಗಾಂಧೀಜಿ ಅವರ ಕನಸು. ಗ್ರಾಮ ವಿಕಾಸದ ಕಲ್ಪನೆಯೂ ಆಗಿದೆ. ಆ ಕನಸು ಇಂದು ಸಾಕಾರವಾಗುತ್ತಿದೆಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಹೇಳಿದರು.
ಕೆರಾಡಿಯಲ್ಲಿ ಆರೋಗ್ಯ ಉಪಕೇಂದ್ರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿಗೆ ಕಟ್ಟಡವಿದ್ದರೂ ಸೇವೆ ನಿರ್ವಹಿಸಲು ವೈದ್ಯರ ಹಾಗೂ ಶುಶ್ರೂಶಕರ ಬೇಡಿಕೆಯಿದ್ದು ಶೀಘ್ರದಲ್ಲಿ ಈಡೇರಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಸಂಸದರ ಆದಶರ ಗ್ರಾಮ ಯೋಜನೆಯಲ್ಲಿ ಕೆರಾಡಿಗೆ 2 ಕೋ.ರೂ. ಮಂಜೂರಾಗಿದ್ದು ಅದರಂತೆ ಈ ಆರೋಗ್ಯ ಉಪಕೇಂದ್ರ ನಿರ್ಮಿಸಲಾಗಿದೆ. ಇಲ್ಲಿನ ಜನ ಚಿಕಿತ್ಸೆಗಾಗಿ 25 ಕಿಮೀ. ದೂರದ ವಂಡ್ಸೆಗೆ ಹೋಗಬೇಕಾಗಿತ್ತು. ಆದ್ದರಿಂದ ಇಲ್ಲಿನ ವೈದ್ಯರ ಅಗತ್ಯದ ಕುರಿತು ಸರಕಾರ ಗಮನಹರಿಸಬೇಕು ಎಂದರು.
ತತ್‌ಕ್ಷಣ ವೈದ್ಯರ ನೇಮಕವಾಗಲಿ
ಪಂ. ಅಧ್ಯಕ್ಷ ರಾಘವೇಂದ್ರ ಕೊಠಾರಿ ಮಾತನಾಡಿ, ಇಲ್ಲಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಎಎನ್‌ಎಂಗಳು ಜನರ ಸಂಪರ್ಕಕ್ಕೆ 15 ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಬೇಕು. ಅನಾರೋಗ್ಯ ಪೀಡಿತರು 25 ಕಿಮೀ. ದೂರದ ವಂಡ್ಸೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆದರ್ಶ ಗ್ರಾಮ ಯೋಜನೆಯಡಿ ಉಪ ಆರೋಗ್ಯ ಕೇಂದ್ರ ಮಂಜೂರಾಗಿದ್ದು ಸಹಕಾರಿಯಾಗಿದೆ. ತತ್‌ಕ್ಷಣ ವೈದ್ಯರ ನೇಮಕವಾದರೆ ಉತ್ತಮ ಎಂದು ತಿಳಿಸಿದರು.
ಜಿ.ಪಂ. ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಉಪಸ್ಥಿತರಿದ್ದರು.
ಮೊದಲ ಸಚಿವೆ
ಕೆರಾಡಿ ಗ್ರಾಮಕ್ಕೆ ಆಗಮಿಸಿದ ಮೊದಲ ಸಚಿವೆ ಡಾ| ಜಯಮಾಲಾ ಅವರು. ಈ ತನಕ ಯಾವುದೇ ಸಚಿವರು ಈ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ ಎಂದು ಪಂ. ಅಧ್ಯಕ್ಷರು ಹೇಳಿದರು.ಪಿಡಿಒ ಗುರುಮೂರ್ತಿ ಸ್ವಾಗತಿಸಿ, ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿಶ್ರಾಂತ್ ಶೆಟ್ಟಿ ನಿರ್ವಹಿಸಿದರು.
ಹಟ್ಟಿಯಂಗಡಿ ಪ್ರಾ.ಆರೋಗ್ಯ ಕೇಂದ್ರ ಉದ್ಘಾಟನೆ
ಕುಂದಾಪುರ: ಹಟ್ಟಿಯಂಗಡಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಚಿವೆ ಜಯಮಾಲಾ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಸುಮಾರು 15 ವರ್ಷಗಳ ಹಿಂದಿನ ಕನಸು ಈಗ ನನಸಾಗುತ್ತಿದೆ. ಹಟ್ಟಿಯಂಗಡಿ ಬಾಗದ ಜನರಿಗೆ ಆರೋಗ್ಯ ಸೇವೆಗಾಗಿ ಸುಸಜ್ಜಿತ ಆಸ್ಪತ್ರೆ ಸೌಲಭ್ಯ ದೊರೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಈ ಆಸ್ಪತ್ರೆಯಿಂದ ಜನರಿಗೆ ಅನುಕೂಲವಾಗಲಿದೆ. ಉತ್ತಮ ವೈದ್ಯಾಧಿಕಾರಿಯಿದ್ದು ತಾಲೂಕು ಆರೋಗ್ಯಾಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ವಂಡ್ಸೆ ಹಾಗೂ ಹಟ್ಟಿಯಂಗಡಿಗೆ 108 ಅಂಬುಲೆನ್ಸ್ ವ್ಯವಸ್ತೆ ಕಲ್ಪಿಸಿದಲ್ಲಿ ಉತ್ತಮ ಎಂದರು.
ಅಪರ ಜಿಲ್ಲಾಧಿಕಾರಿಗಳು, ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಸದಸ್ಯರಾದ ಜ್ಯೋತಿ ಎಂ. ಕಾವ್ರಾಡಿ, ಶಂಕರ ಪೂಜಾರಿ ಬೈಂದೂರು, ತಾ.ಪಂ. ಸದಸ್ಯ ಕರಣ್ ಪೂಜಾರಿ, ಹಟ್ಟಿಯಂಗಡಿ ಪಂ. ಅಧ್ಯಕ್ಷ ರಾಜೀವ ಶೆಟ್ಟಿ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಕ್ಷೇತ್ರದ ಪ್ರಧಾನ ಅರ್ಚಕ ಬಾಲಚಂದ್ರ ಭಟ್ ಉಪಸ್ಥಿತರಿದ್ದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರೋಹಿಣಿ ಸ್ವಾಗತಿಸಿದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ| ರಂಗನಾಥ ಪ್ರಸ್ತಾವಿಸಿದರು. ರಮೇಶ್ ಗುಲ್ವಾಡಿ ನಿರ್ವಹಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ವಂದಿಸಿದರು.
ಸಭೆಗೆ ಶಾಲಾ ಮಕ್ಕಳು ಬೇಡ
ಸಚಿವರು ಬರುವ ಸಭೆ ತುಂಬಿರಬೇಕೆಂದು ಶಾಲಾ ಮಕ್ಕಳನ್ನು ಕರೆತರುವುದು ತಪ್ಪು. ಬಿಸಿಲಿನಲ್ಲಿ ಕೂರಿಸುವುದು ಇನ್ನೂ ದೊಡ್ಡ ತಪ್ಪು. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ಉಸ್ತುವಾರಿ ಸಚಿವೆ ಹೇಳಿದರು. ಕೆರಾಡಿ ನೂತನ ಆರೋಗ್ಯ ಉಪಕೇಂದ್ರ ಕಟ್ಟಡ ಉದ್ಘಾಟನೆ ಸಂದರ್ಭ ಶಾಲಾ ಮಕ್ಕಳು ಹಾಜರಿದ್ದುದನ್ನು ಕಂಡು ಈ ವಿಷಯ ತಿಳಿಸಿದರು.
ಮಕ್ಕಳು ದೇವರಂತೆ, ಅವರನ್ನು ಜನ ಕಾಣಿಸಬೇಕೆಂದು ಕರೆತರುವುದು ಸರಿಯಲ್ಲ. ಶಿಕ್ಷಣ ಎನ್ನುವುದು ಪವಿತ್ರ ಕೆಲಸ. ಅಂತಹ ಕೆಲಸಕ್ಕೆ ಅಡ್ಡಿ ಮಾಡಬಾರದು. ಮಕ್ಕಳ ದಿನಾಚರಣೆಗೆ ಮಾತ್ರ ಕರೆತನ್ನಿ. ಶಾಸಕರು ಇದನ್ನು ಗಮನಿಸಬೇಕು. ನನಗೆ ಈ ಘಟನೆ ತುಂಬ ಬೇಸರ ತರಿಸಿದೆ. ಮಕ್ಕಳೇ ನಿಮ್ಮ ಜತೆಗೆ ನಾನಿದ್ದೇನೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.