ವಿಷಯಗಳನ್ನು ಆರಿಸಿಕೊಂಡು “ವರ್ಡ್ಸ್‌ಮಿತ್’ ಆಗಬೇಕು
Team Udayavani, Feb 5, 2019, 12:30 AM IST
ಉಡುಪಿ: ಗೋಲ್ಡ್‌ಸ್ಮಿತ್ ಕುಸುರಿ ಕೆಲಸಗಳನ್ನು ಮಾಡುವಂತೆ, ಲೇಖಕ ಸಣ್ಣ ಸಣ್ಣ ವಿಷಯಗಳನ್ನು ಆರಿಸಿಕೊಂಡು “ವರ್ಡ್ಸ್‌ಮಿತ್’ ಆಗಬೇಕು ಎಂದು ಕುಂದಾಪುರ ಭಂಡಾರ್‌ಕಾರ್ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥ ಡಾ| ಹಯವದನ ಉಪಾಧ್ಯ ಆಶಿಸಿದರು.
ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ರವಿವಾರ ಸುಹಾಸಂ ಆಯೋಜಿಸಿದ ವಕ್ವಾಡಿ ಶ್ರೀರಾಜ್ ಎಸ್. ಆಚಾರ್ಯರ “ಕತ್ತಲೆಯ ಬೆತ್ತಲು’ ಕಥಾ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಲೇಖಕನಾದವನು ತನ್ನ ಮಾಧ್ಯಮ ಯಾವುದು? ಕತೆಗಾರನೋ? ಕಾದಂಬರಿಕಾರನೋ? ಕವಿಯೋ ಎಂದು ನಿಶ್ಚಯಿಸಿಕೊಂಡು ಮುಂದುವರಿಯಬೇಕು. ಭೈರಪ್ಪನವರು ಕಾದಂಬರಿಕಾರನೆಂದೇ ಗುರುತಿಸಿಕೊಂಡು ಮುಂದುವರಿದಂತೆ ಮುನ್ನಡೆಯಬೇಕು ಎಂದರು.
ಪುಸ್ತಕ ಬಿಡುಗಡೆಗೊಳಿಸಿದ ವಿಮರ್ಶಕ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ ಮಾತನಾಡಿದರು. ಕುಂದಾಪುರ ಭಂಡಾರ್‌ಕಾರ್ ಕಾಲೇಜಿನ ವಿದ್ಯಾರ್ಥಿನಿ ಕೀರ್ತಿ ಭಟ್ ಕೃತಿ ಪರಿಚಯಿಸಿದರು. ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ್ ಸ್ವಾಗತಿಸಿ ಸಹ ಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ನಿರ್ವಹಿಸಿದರು. ಸಂಧ್ಯಾ ಶೆಣೈ ವಂದಿಸಿದರು. ಶ್ರೀರಾಜ್ ಎಸ್. ಆಚಾರ್ಯರ ತಂದೆ, ತಾಯಿ ಉಪಸ್ಥಿತರಿದ್ದರು.
ಸರಕಾರದಿಂದ 8 ಕೋ.ರೂ. ಅನುದಾನ
ನಾನು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಯೂಟ್ಯೂಬ್ ಮೂಲಕ ಭಾಗವಹಿಸಿದ್ದೇನೆ. ಧಾರವಾಡದ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ವರದಿಯನ್ನು ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರಿಗೆ ದೂರವಾಣಿ ಕರೆ ಮೂಲಕ ವಿನಂತಿಸಿದಾಗ ಅವರಿಗೆ ಇದರ ಕುರಿತು ಏನೂ ಗೊತ್ತಿರಲಿಲ್ಲ. ನಾನು ಧಾರವಾಡ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಸರಕಾರ 8 ಕೋ.ರೂ. ಅನುದಾನ ನೀಡುತ್ತಿದೆ. ನೀವು ಯೂಟ್ಯೂಬ್‌ನಲ್ಲಿ ಕಲಾಪಗಳನ್ನು ಬಿತ್ತರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡೆ. ಇದು ಸಾಧ್ಯವಾಯಿತು.
– ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.