ಸಾಕುಪ್ರಾಣಿಗಳಿಗೆ ಆಧಾರ್‌ ಮಾದರಿ ಡಿಜಿಟಲ್‌ ಗ‌ುರುತಿನ ಸಂಖ್ಯೆ


Team Udayavani, Feb 5, 2019, 12:30 AM IST

04-bdk-02a.jpg

ಬದಿಯಡ್ಕ: ಜಾನುವಾರು ಸಹಿತ ಸಾಕುಪ್ರಾಣಿಗಳಿಗೆ ಆಧಾರ್‌ ಮಾದರಿಯಲ್ಲಿ 12 ಅಂಕೆಗಳ ಗುರುತಿನ ನಂಬ್ರ ನೀಡಲಾಗುವುದು.ಇ-ಆಫೀಸ್‌ ಸಾಧ್ಯತೆಗಳನ್ನು ಅಳವಡಿಸುವ ಮೂಲಕ ಪಶುಸಂಗೋಪನ ಇಲಾಖೆಯ ಮಹತ್ವದ ಹೆಜ್ಜೆಯಾಗಿದೆ ಇದು.ಕ್ಷೀರ ಕೃಷಿಕರ ಮಾಹಿತಿಗಳನ್ನು ಗೂಗಲ್‌ ಮ್ಯಾಪ್‌ನ ಸಹಾಯದೊಂದಿಗೆ ಜಿಯೋಮ್ಯಾಪಿಂಗ್‌ ಮೂಲಕ ಸಂಗ್ರಹಿಸುವುದು.

ಹಾಲುತ್ಪಾದಕರಿಗಿರುವ ಸರಕಾರಿ ಸೇವೆಗಳು ಸುಲಭವಾಗಿ ಲಭಿಸುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಮೊದಲ ಹಂತದಲ್ಲಿ ಸಂಪೂರ್ಣ ಮಾಹಿತಿಗಳನ್ನು ಹೊಂದಿರುವ 12 ಅಂಕೆಗಳ ಡಿಜಿಟಲ್‌ ಐಡಿ ನಂಬ್ರ ನೀಡುವುದು. ಮೃಗಗಳಿಗೆ ಮಾತ್ರವಲ್ಲ, ಕ್ಷೀರ ಕೃಷಿಕರಿಗೆ ಪ್ರತ್ಯೇಕ ನಂಬ್ರ ನೀಡಲಾಗುವುದು. ಇವುಗಳ ಏಕೀಕೃತ ಸ್ವಭಾವದಲ್ಲಿ ಡಿಜಿಟಲ್‌ ಡಾಟಾ ಬ್ಯಾಂಕ್‌ ತಯಾರಿಸುವುದು. ಈ ಮೂಲಕ ದನ ಕಾರು ಹಾಕಿದ ದಿನಾಂಕ, ಲಸಿಕೆ ನೀಡಿದ ಮಾಹಿತಿಗಳು, ಚಿಕಿತ್ಸೆ ಮಾಹಿತಿಗಳು, ರೋಗಗಳ ಕುರಿತು, ಹಾಲುತ್ಪಾದನೆ ಮುಂತಾದವುಗಳ ಮಾಹಿತಿಗಳು ಐಡಿ ನಂಬ್ರ ನೀಡಿದರೆ ಆನ್‌ಲೆ„ನ್‌ ಆಗಿ ಲಭಿಸುವುದು. ರಾಜ್ಯ ಸರಕಾರದ ಇನ್ಶೂರೆನ್ಸ್‌  ಯೋಜನೆಯಾದ ಗೋಸಮೃದ್ಧಿಯ ಮಾಹಿತಿಗಳನ್ನು ಸಂಗ್ರಹಿಸಿರು ವುದರಿಂದ ಈ ಕುರಿತಾದ ಮಾಹಿತಿಯೂ ಲಭಿಸುವುದು. ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ರೋಗ ಹರಡದಂತೆ  ಪ್ರತಿರೋಧ ಕ್ರಮ ತ್ವರಿತಗತಿಯಲ್ಲಿ  ನಡೆಸಲು ಜಿಯೋಮ್ಯಾಪಿಂಗ್‌ ಸಹಾಯವಾಗುವುದು. ಲಸಿಕೆ ನೀಡುವುದನ್ನು ಈ ಆ್ಯಪ್‌ ಮೂಲಕ ಸಂಗ್ರಹಿಸುವುದರೊಂದಿಗೆ ಪ್ರತೀ ವಲಯದಲ್ಲಿ ಲಸಿಕೆ ಸ್ಥಿತಿಗತಿಗಳ ಬಗ್ಗೆ ಆನ್‌ಲೆ„ನ್‌ ಮೂಲಕ ತಿಳಿಯಬಹುದು.  ಅನಿಮಲ್‌ ಝೋನ್‌ ಆಧಾರವಾಗಿಸಿರುವ ಪಶುಸಂಗೋಪನ ಇಲಾಖೆಯ ವ್ಯವಹಾರಗಳಿಗೆ ಸಹಾಯಕವಾಗುವ ರೀತಿಯಲ್ಲಿ ಪ್ರಾರಂಭಿಸಲಾದ ಈ ಯೋಜನೆ ಪಶುಸಂಗೋಪನ ನಿರ್ದೇಶನಾಲಯ, ಜಿಲ್ಲಾ ಕಚೇರಿಗಳು, ತಾಲೂಕು ಕಚೇರಿಗಳು, ಪಂಚಾಯತ್‌ಗಳ ವೆಟರ್ನರಿ ಕೇಂದ್ರಗಳ ಸಹಿತ ರಾಜ್ಯದ 2,000ದಷ್ಟು  ಕಚೇರಿಗಳನ್ನು ಸಂಪೂರ್ಣವಾಗಿ ಡಿಜಿಟಲ್‌ ಶೃಂಖಲೆಯೊಂದಿಗೆ ಜೋಡಿಸಲಾಗಿದೆ. ಈ ಮೂಲಕ  ಪಶುಸಂಗೋಪನ ಇಲಾಖೆಯು ಇ-ಆಫೀಸ್‌ ವಲಯದಲ್ಲೂ ತನ್ನ ಛಾಪು ಮೂಡಿಸಿದೆ.

ರಾಜ್ಯದ  ಎಲ್ಲ ವೆಟರ್ನರಿ ವೈದ್ಯರಿಗೆ, ಲೆ„ವ್‌ಸ್ಟಾಕ್‌ ಇನ್ಸ್‌ಪೆಕ್ಟರ್‌ಗಳಿಗೆ ಟ್ಯಾಬ್‌ಗಳನ್ನು ನೀಡ ಲಾಗಿದೆ. ಮಾಹಿತಿ ದಾಖಲಿಸುವುದಕ್ಕಾಗಿ 4,000 ಲ್ಯಾಪ್‌ಟಾಪ್‌ ಗಳನ್ನು ಸಹ ನೀಡಲಾಗಿದೆ.  ಐಐಐ ಟಿಎಂಕೆ ತಯಾರಿಸಿದ ಭೂಮಿಕಾ ಎಂಬ ಅಪ್ಲಿಕೇಶನ್‌ ಉಪಯೋಗಿಸಿ ಕೊಂಡು ಮಾಹಿತಿ ದಾಖಲಿಸುವುದು. ಪಶು ವೈದ್ಯರು ತಮ್ಮ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿನ ಜಾನುವಾರುಗಳ ಮತ್ತು ಹೈನುಗಾರಿಕಾ ಕೃಷಿಕರ ಮಾಹಿತಿಗಳನ್ನು ಚಿತ್ರ ಸಹಿತ ದಾಖಲಿಸುವುದು.  ಸಂಗ್ರಹಿಸಿದ ಮಾಹಿತಿಗಳನ್ನು ಜಿಯೋಗ್ರಾಫಿಕ್‌ ಇನ್‌ಫರ್ಮೇಶನ್‌ ಸಿಸ್ಟಂನಲ್ಲಿ ದಾಖಲಿಸುವುದು. ದನಗಳ ಬಣ್ಣ, ಗಾತ್ರ, ತಳಿ ಮುಂತಾದ ವಿಷಯಗಳಲ್ಲದೆ ಹಸುಸಾಕಣೆಗಾರರ ಸಂಪೂರ್ಣ ಮಾಹಿತಿಯನ್ನು ದಾಖಲಿಸಿದಲ್ಲಿ ಹಸು ಅಥವಾ ಇನ್ನಿತರ ಸಾಕುಪ್ರಾಣಿಗಳಿಗೆ ನೀಡಲಾಗುವ ಲಸಿಕೆಗಳು, ಪಶು ಆಹಾರಗಳು, ಇನ್ಶೂರೆನ್ಸ್‌ ಮಾಹಿತಿಗಳು   ಮಾತ್ರವಲ್ಲದೆ ಜಾನುವಾರುಗಳಿಗೆ ಸರಕಾರದಿಂದ, ಮೃಗ ಸಂರಕ್ಷಣಾಲಯ, ಪಂಚಾಯತ್‌ ಮಟ್ಟದಲ್ಲಿ ದೊರೆಯುವ ಎಲ್ಲ ಸೌಲಭ್ಯಗಳ ಪ್ರಯೋಜನವನ್ನೂ ಸುಲಭದಲ್ಲಿ ಪಡೆಯಬಹುದಾಗಿದೆ. ರಾಜ್ಯದಲ್ಲಿ ಸುಮಾರು 10ಲಕ್ಷದಷ್ಟು  ಜಾನುವಾರುಗಳಿರುವುದಾಗಿ ಪ್ರಾಥಮಿಕ ಲೆಕ್ಕಾಚಾರವಾಗಿದೆ. 

2022ರೊಳಗೆ ಹಾಲುತ್ಪಾದನಾ ಕ್ಷೇತ್ರದ ಆದಾಯ ದುಪ್ಪಟ್ಟುಗೊಳಿಸುವ ಉದ್ಧೇಶವನ್ನೂ ಇದು ಒಳಗೊಂಡಿದೆ. ಈ ಪದ್ಧತಿಯ ಅನುಷ್ಠಾನಕ್ಕಾಗಿ ಮೊದಲ ಹಂತದಲ್ಲಿ ಸುಮಾರು 500 ಮಿಲಿಯನ್‌ ರೂ.ಗಳನ್ನು 40 ಮಿಲಿಯನ್‌ ಗೋವುಗಳ ಸಂರಕ್ಷಣೆಗೆ ಮೀಸಲಿಡುವ ಕುರಿತು ಯೋಜನೆ ಸಿದ್ಧಪಡಿಸಲಾಗಿದೆ.  ಯೋಜನೆಯ ಅನುಷ್ಠಾನ ಸರಿಯಾದ ಉಪಯುಕ್ತವಾದ ರೀತಿಯಲ್ಲಿ ನಡೆದಲ್ಲಿ ಮುಂದೆ ಹೆಚ್ಚಿನ ಮೊತ್ತವನ್ನು ಬಿಡುಗಡೆ ಗೊಳಿಸುವ ಸಾಧ್ಯತೆಯಿದೆ. ಹೆ„ನುಗಾರಿಕೆಯನ್ನು ಜೀವನೋಪಾಯವಾಗಿ ಕಂಡುಕೊಂಡ ಮಿಲಿಯ ಗಟ್ಟಲೆ ಜನರಿಗೆ ಇದು ಸಹಾಯಕವಾಗಲಿದೆ. ಹಸುಗಳ ಕಳ್ಳತನದ ಸಮಸ್ಯೆಯೂ ಗಮನೀಯವಾಗಿ ಕಡಿಮೆಯಾಗಲು ಇದು ಪೂರಕವಾಗಿದೆ. 

ಜಿಯೋಮ್ಯಾಪಿಂಗ್‌ ಆರಂಭ ಕಾಸರಗೋಡು ಜಿಲ್ಲೆಯಲ್ಲಿ ಜ. 14ರಿಂದ ಜಿಯೋಮ್ಯಾಪಿಂಗ್‌ ಪ್ರಾರಂಭ ಮಾಡಿದ್ದು ಈಗಾಗಲೇ ಸುಮಾರು ಶೇ.27ರಷ್ಟು ಜಾನುವಾರುಗಳಿಗೆ 12 ಅಂಕೆಗಳ ಡಿಜಿಟಲ್‌ ಟ್ಯಾಗ್‌ ಅಳವಡಿಸಲಾಗಿದೆ. ಅತ್ಯಂತ ವೇಗವಾಗಿ ಜಿಲ್ಲೆಯಲ್ಲಿ ಈ ಯೋಜನೆಯನ್ನು ಜ್ಯಾರಿಗೊಳಿಸುವ ಕಾರ್ಯವು ನಡೆಯುತ್ತಿದೆ. ಪ್ರಸ್ತುತ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕುವ ಕಾರ್ಯವೂ ಪ್ರಾರಂಭವಾಗಿದೆ. ಇದೊಂದು ಅತ್ಯಂತ ಉಪಯುಕ್ತ ಹಾಗೂ ಪರಿಣಾಮಕಾರಿ ಯೋಜನೆಯಾಗಿದ್ದು ಕೃಷಿಕರ ಪಾಲಿಗೆ ವರದಾನವಾಗಿ ಪರಿಣಮಿಸಲಿದೆ.
– ಡಾ| ನಾಗರಾಜ್‌ 
ಜಿಲ್ಲಾ  ಕೋ-ಆರ್ಡಿನೇಟರ್‌.

ಮೌಲ್ಯ ನಿರ್ಣಯಕ್ಕೆ ಉಪಯುಕ್ತ
ಬದಿಯಡ್ಕ ಪಂಚಾಯತ್‌ನಲ್ಲಿ  ಸುಮಾರು 1,200 ಜಾನುವಾರುಗಳಿಗೆ ಟ್ಯಾಗ್‌ ಹಾಕಲಾಗಿದ್ದು  ಫೆಬ್ರವರಿಯೊಳಗಾಗಿ 3,000ರಷ್ಟು  ಜಾನುವಾರುಗಳನ್ನು  ಈ ಯೋಜನೆಯಡಿ ಯಲ್ಲಿ  ದಾಖಲಿಸಿ ಸೌಲಭ್ಯಗಳು ಸುಲಭವಾಗಿ ಲಭಿಸುವಂತೆ ಮಾಡಲಾಗುತ್ತದೆ. ಹಸುಗಳ ಪ್ರಾಯ, ಹಾಕಿದ ಕರುಗಳ ಸಂಖ್ಯೆ, ಮಾರಾಟ ಮಾಡುವುದಾದರೆ ಮೌಲ್ಯ ನಿರ್ಣಯ ಮುಂತಾದ ವಿಚಾರಗಳ ಬಗ್ಗೆ  ಸ್ಪಷ್ಟ  ಹಾಗೂ ನಿಖರ ಮಾಹಿತಿ ಪಡೆಯುವಲ್ಲಿ  ಈ ಯೋಜನೆಯು ಬಹಳ ಉಪಯುಕ್ತವಾಗಿದೆ. 
– ಡಾ| ಚಂದ್ರ ಬಾಬು
ಬದಿಯಡ್ಕ  ಮೃಗಾಸ್ಪತ್ರೆಯ ವೈದ್ಯರು

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

12

Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.