ಸರಕಾರಿ ಕಚೇರಿ, ರಸ್ತೆಗಳಲ್ಲಿ ಎಲ್‌ಇಡಿ ಎಫೆಕ್ಟ್!

Team Udayavani, Feb 5, 2019, 4:17 AM IST

sudina.jpg

ಮಹಾನಗರ: ನಗರಾದ್ಯಂತ ಇನ್ನು ಮುಂದೆ ಬೀದಿ, ಸರಕಾರಿ ಕಚೇರಿ ಗಳಲ್ಲಿ ಎಲ್‌ಇಡಿ ಮಾದರಿ ದೀಪಗಳು ಉರಿಯುವ ಮೂಲಕ ನಗರವು ಮತ್ತಷ್ಟು ಸ್ಮಾರ್ಟ್‌ಗೊಳ್ಳಲಿದೆ.

ನಗರದ ಸರಕಾರಿ ಕಚೇರಿಗಳು, ಬೀದಿ ದೀಪಗಳನ್ನು ಎಲ್‌ಇಡಿ ವ್ಯವಸ್ಥೆಗೆ ಪರಿವರ್ತಿ ಸುವುದಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಪ್ಲ್ರಾನ್‌ ರೂಪಿಸಲಾಗಿದ್ದು, ಇನ್ನು 15 ದಿನಗೊಳ ಗಾಗಿ ಎಲ್‌ಇಡಿ ದೀಪ ಅಳವಡಿಕೆ ಕಾರ್ಯ ಪ್ರಾರಂಭಗೊಳ್ಳಲಿದೆ. ಟೆಂಡರ್‌ ವಹಿಸಿಕೊಂಡ ಸಂಸ್ಥೆ ಇನ್ನೂ ಮೂರು- ನಾಲ್ಕು ದಿನಗಳಲ್ಲಿ ಕಚೇರಿ ಗಳಿಗೆ ತೆರಳಿ ಪರಿಶೀಲನೆ ನಡೆಸಿ, ದೀಪ ಗಳನ್ನು ತರಿಸಿಕೊಂಡು ಕಾಮಗಾರಿ ಆರಂಭಿಸಲಿದೆ. ನಗರದ ಪ್ರಮುಖ ಸರಕಾರಿ ಕಚೇರಿಗಳಾದ ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ ಸಹಿತ ಎಲ್ಲ ಕಚೇರಿಗಳಲ್ಲಿ ಈ ಹಿಂದೆ ಇದ್ದ ದೀಪಗಳನ್ನು ಬದಲಾಯಿಸಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಹಾಗೆಯೇ ನಗರದ ಎಲ್ಲ ಬೀದಿ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸಲಾಗುತ್ತದೆ.

ಎಲ್ಲೆಲ್ಲಿ ಎಲ್‌ಇಡಿ ದೀಪ ಬಳಕೆ
ನಗರದಲ್ಲಿರುವ ಪ್ರಮುಖ ಸರಕಾರಿ ಕಚೇರಿಗಳಾದ ಪೊಲೀಸ್‌ ಕಮಿಷನರ್‌ ಕಚೇರಿ, ಎಸಿಪಿ ಕಚೇರಿ, ಬಂದರ್‌ ಪೊಲೀಸ್‌ ಠಾಣೆ, ಪ್ರಧಾನ ಅಂಚೆ ಕಚೇರಿ ಪಾಂಡೇಶ್ವರ, ಮೀನುಗಾರಿಕಾ ಅಭಿವೃದ್ಧಿ ನಿಗಮ, ಅಗ್ನಿಶಾಮಕ ದಳದ ಕಚೇರಿ ಪಾಂಡೇಶ್ವರ, ಟೆಲಿಕಾಂ ಕಚೇರಿ ಪಾಂಡೇಶ್ವರ, ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಪಾಂಡೇಶ್ವರ, ವಾಣಿಜ್ಯ ತೆರಿಗೆ ಕಚೇರಿ ಪಾಂಡೇಶ್ವರ, ಮಿನಿವಿಧಾನ ಸೌಧ, ಲೇಡಿಗೋಷನ್‌ ಆಸ್ಪತ್ರೆ, ಆರ್‌ಟಿಒ ಕಚೇರಿ, ವೆನ್ಲಾಕ್‌ ಆಸ್ಪತ್ರೆ, ಪುರಭವನ, ಜಿಲ್ಲಾಧಿಕಾರಿ ಕಚೇರಿ, ಬಿಎಸ್‌ಎನ್‌ಎಲ್‌ ಟೆಲಿಫೋನ್‌ ಎಕ್ಸ್‌ಚೇಂಜ್‌ ಕಟ್ಟಡ, ಮೀನುಗಾರಿಕಾ ಇಲಾಖೆ ಬಂದರ್‌, ಲೋಕೋಪಯೋಗಿ ಇಲಾಖೆಯ ಉಪ ಕಚೇರಿ, ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ಹಳೆ ಬಂದರು ಕಚೇರಿ, ವೆಟ್ವೆಲ್‌ ಕಾಂಪೌಂಡ್‌ ಕುದ್ರೋಳಿ, ಅರ್ಬನ್‌ ಪ್ರೈಮರಿ ಹೆಲ್ತ್‌ ಸೆಂಟರ್‌ ಜೆಪ್ಪು, ಐಜಿಪಿ ಕಚೇರಿ, ಅತಿಥಿಗೃಹ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಕಟ್ಟಡಗಳಲ್ಲಿ ಎಲ್‌ಇಡಿ ಬಲ್ಪ್ಗಳನ್ನು ಅಳವಡಿಸಲಾಗುತ್ತದೆ.

60 ವಾರ್ಡ್‌ ಬೀದಿ ದೀಪಗಳು ಸ್ಮಾರ್ಟ್‌
ಸರಕಾರಿ ಕಚೇರಿಗಳಲ್ಲಿ ಮಾತ್ರವಲ್ಲದೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 60 ವಾರ್ಡ್‌ಗಳ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳಿಗೆ ಪರಿವರ್ತಿಸಲಾಗುತ್ತದೆ. ಇದ ಕ್ಕಾಗಿ ಸರಕಾರಿ, ಖಾಸಗಿ ಸಹಭಾಗಿತ್ವ ದಲ್ಲಿ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಇದರ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ ಸರಕಾರಿ ಕಚೇರಿ, ಬೀದಿ ದೀಪಗಳು ಎಲ್‌ಇಡಿ ಅಳ ವಡಿಸಲಾಗುವುದರಿಂದ ಸಾರ್ವ ಜನಿಕರೂ ಪ್ರೇರಿತರಾಗಿ ತಮ್ಮ ಮನೆಗಳಲ್ಲಿ ಬಳಸುವ ಸಾಧ್ಯತೆ ಇದೆ.

ನಗರದಲ್ಲಿ ಕಾರ್ಯಚರಿಸುತ್ತಿರುವ ಸರಕಾರಿ ಕಚೇರಿಗಳಲ್ಲಿ ಈ ಹಿಂದೆ ಮಾಮೂಲಿ ದೀಪಗಳನ್ನು ಬಳಸಲಾಗುತ್ತಿದ್ದು, ಇದರಿಂದ ಇಂಧನ ಹೆಚ್ಚು ವ್ಯರ್ಥವಾಗುತ್ತಿತ್ತು. ಆ ಕಾರಣಕ್ಕಾಗಿ ಇಂಧನ ಉಳಿತಾಯ ಮಾಡುವ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 1.68 ಕೋಟಿ ರೂ. ವೆಚ್ಚದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಆ ಮೂಲಕ ಸರಕಾರಿ ಕಚೇರಿಗಳಿಂದಲೇ ಇಂಧನ ಉಳಿಸುವ ಕೆಲಸ ಆರಂಭವಾಗಲಿದೆ.

1.68 ಕೋಟಿ. ರೂ. ವೆಚ್ಚ

ಇಂಧನ ಉಳಿತಾಯ ಜಾಗೃತಿ
ಇಂಧನ ಬಳಕೆಯಲ್ಲಿ ಸರಕಾರದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಲ್ಲಿ ಇಂಧನ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು ಸರಕಾರಿ ಕಚೇರಿ ಹಾಗೂ ಬೀದಿ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸಲಾಗುತ್ತಿದೆ. ಎಲ್‌ಇಡಿ ದೀಪಗಳು ಇತರ ವಿದ್ಯುತ್‌ ದೀಪಗಳಿಂದ ಶೇ.40ರಷ್ಟು ಇಂಧನ ಉಳಿಸುತ್ತದೆ.
ನಾರಾಯಣಪ್ಪ,ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರು

••ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.