ಹೀಟರ್‌ ಬಳಕೆ ಆರೋಗ್ಯಕ್ಕೆ ಅಪಾಯ


Team Udayavani, Feb 5, 2019, 4:56 AM IST

yoga-2.jpg

ಚಳಿಗಾಲ ಬಂದರೆ ಸಾಕು ಜನರು ಬೆಚ್ಚಗಿರಲು ನೂರಾರು ಮಾರ್ಗಗಳನ್ನು ಹುಡುಕುವುದು ಸಾಮಾನ್ಯ. ಹಿಂದಿನ ಕಾಲದ ಹಳ್ಳಿ ಮನೆಗಳಾದರೆ ಒಲೆ ಮುಂದೆ ಕುಳಿತು ಚಳಿಯಿಂದ ಮುಕ್ತಿ ಪಡೆಯುವುದನ್ನು ಕಾಣಬಹುದಾಗಿತ್ತು. ಆದರೆ ಆಧುನಿಕತೆ ಬೆಳೆಯುತ್ತಿದ್ದಂತೆ ವಿದ್ಯುತ್‌ ಹೀಟರ್‌ಗಳು ಅನೇಕರ ಮನೆ ಸೇರಿವೆ. ಹೀಟರ್‌ಗಳ ಮುಂದೆ ಕುಳಿತರೆ ಸಾಕು ಬೆಚ್ಚಗಿನ ಅನುಭವವನ್ನು ಒಮ್ಮೆಲೇ ಸಿಗುತ್ತದೆ. ಕೋಣೆ ತುಂಬೆಲ್ಲ ಬಿಸಿ ಹವೆ ನೀಡುವ ಹೀಟರ್‌ಗಳ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವ ಹವ್ಯಾಸ ಅನೇಕರಿಗಿದೆ. ಆದರೆ ದೇಹವನ್ನು ಬೆಚ್ಚಗೆ ಮಾಡುವ ಹೀಟರ್‌ಗಳು ದೇಹಾರೋಗ್ಯದ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ.

ಆಧುನಿಕ ಕಾಲದ ತಂತ್ರಜ್ಞಾನಗಳು ಒಂದು ಕಡೆ ಉಪಕಾರಿಯಾದರೆ, ಇನ್ನೊಂದೆಡೆ ಆರೋಗ್ಯಕ್ಕೆ ಮಾರಕವಾಗಿವೆ. ಬೇಸಗೆ ಕಾಲದಲ್ಲಿ ಬಳಸುವ ಎಸಿಗಳಂತೆ ಚಳಿಗಾಲದಲ್ಲಿ ಚಳಿಯಿಂದ ರಕ್ಷಿಸಲು ಬಳಸುವ ಹೀಟರ್‌ಗಳೂ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹೀಟರ್‌ಗಳ ಬಳಕೆಯಿಂದ ಆರೋಗ್ಯಕ್ಕೆ ಆಗುವ ಸಮಸ್ಯೆಗಳೇನು? ಎನ್ನುವ ಮಾಹಿತಿ ಇಲ್ಲಿದೆ.

ಉಸಿರಾಟದ ತೊಂದರೆ

ಚಳಿಗಾಲದ ಸಮಯದಲ್ಲಿ ಹೀಟರ್‌ಬಳಸುವುದರಿಂದ ಅಸ್ತಮಾ, ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಅದರ ಶಾಖ ಅಪಾಯಕಾರಿ. ಇದರ ಜತೆಗೆ ನ್ಯೂಮೋನಿಯಾ, ತಲೆನೋವಿನ ಸಮಸ್ಯೆ ಇರುವವರಿಗೂ ಇದು ಮಾರಕ.

ಗಾಳಿ ಹಾಗೂ ದೇಹದ ತೇವಾಂಶ

ವಿದ್ಯುತ್‌ಚಾಲಿತ ಹೀಟರ್‌ಗಳು ನೈಸರ್ಗಿಕ ಗಾಳಿಯಲ್ಲಿರುವ ತೇವಾಂಶವನ್ನು ಕಡಿಮೆಗೊಳಿಸುತ್ತವೆ. ನೈಸರ್ಗಿಕ ಗಾಳಿ ಹಾಗೂ ತ್ವಚೆ ಒಣಗಿ ತುರಿಕೆಗೆ ಕಾರಣವಾಗುತ್ತದೆ. ಹೀಗಾಗಿ ಹೀಟರ್‌ಗಳ ಬಳಕೆ ಆದಷ್ಟು ಕಡಿಮೆ ಮಾಡುವುದು ಒಳಿತು. ತಣ್ಣೀರಿನಲ್ಲಿ ಸ್ನಾನ ಮಾಡಿದ ಅನಂತರ ಅಥವಾ ಚಳಿಯಿಂದ ರಕ್ಷಣೆ ನೀಡುವ ಹೀಟರ್‌ ದೇಹದ ತೇವಾಂಶವನ್ನು ಹೀರಿಕೊಳ್ಳುತ್ತದೆ.

ಚರ್ಮದ ಸಮಸ್ಯೆ

ಹೆಚ್ಚು ಹೀಟರ್‌ಗಳನ್ನು ಬಳಸುವುದರಿಂದ ಚರ್ಮದ ಜೀವಕೋಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದು ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು. ಚರ್ಮ ಹೆಚ್ಚು ಮೃದುವಾಗಿರುವುದರಿಂದ ಬಿಸಿ ಗಾಳಿ ಯನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಇರುತ್ತದೆ.

ದೇಹದ ತಾಪಮಾನ

ಹೀಟರ್‌ಗಳ ಬಳಕೆಯಿಂದ ಕೋಣೆಯ ತುಂಬೆಲ್ಲ ಉಷ್ಣಾಂಶ ಹೆಚ್ಚಾಗಿ ಅಲ್ಲಿನ ತಾಪಮಾನದಲ್ಲಿ ವ್ಯತ್ಯಾಸ ಗೊಂಡು ಆರೋಗ್ಯದ ಮೇಲೆ ಪರಿಣಾಮ ಉಂಟಾಗ ಬಹುದು.

ಸುಟ್ಟಗಾಯಗಳು

ಹೀಟರ್‌ಗಳ ಮುಂದೆ ಕೈ ಚಾಚಿ ನಿಂತುಕೊಳ್ಳುವ ಅಭ್ಯಾಸ ಅನೇಕ ಮಂದಿಗಿದೆ. ಈ ಸಂದರ್ಭದಲ್ಲಿ ಹೀಟರ್‌ ಕೈಗೆ ತಾಗುವ ಸಂಭವ ಹೆಚ್ಚು. ಇದರಿಂದ ಸುಟ್ಟಗಾಯಗಳಾಗಬಹುದು. 

••ಧನ್ಯ ಶ್ರೀ ಬೋಳಿಯಾರ್‌

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.