ಸುತ್ತೂರು ಜಾತ್ರೆಯಲ್ಲಿ ಅವಘಡ : ಶ್ರೀಗಳು ಅಪಾಯದಿಂದ ಪಾರು
Team Udayavani, Feb 5, 2019, 9:50 AM IST
ಮೈಸೂರು: ಸುತ್ತೂರು ಜಾತ್ರಾಮಹೋತ್ಸವದಲ್ಲಿ ನೈಟ್ರೋಜನ್ ಬಲೂನ್ ಸ್ಪೋಟಗೊಂಡ ಘಟನೆ ವರದಿಯಾಗಿದೆ. ಸುತ್ತೂರು ಜಾತ್ರಾ ಮಹೋತ್ಸವದ ಪ್ರಯುಕ್ತ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು ಪವಾಡಸದೃಶ್ಯವಾಗಿ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುತ್ತೂರು ಮಠದ ಪೀಠಾದ್ಯಕ್ಷರಾಗಿರುವ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡುತ್ತಿದ್ದ ವೇಳೆ ಅವರು ನಿಂತಿದ್ದ ಸ್ಥಳದ ಪಕ್ಕದಲ್ಲೇ ನೈಟ್ರೋಜನ್ ಬಲೂನಿಗೆ ಬೆಂಕಿ ಹತ್ತಿಕೊಂಡು ಅದು ಇದ್ದಕ್ಕಿದ್ದಂತೆಯೇ ಸ್ಪೋಟಗೊಂಡಿತು.
ಈ ಸಂದರ್ಭದಲ್ಲಿ ಸ್ವಾಮಿಗಳವರೊಂದಿಗೆ ಕುಸ್ತಿಪಟುಗಳು ಮತ್ತು ಇತರರು ಇದ್ದರು. ಕೂದಳೆಯ ಅಂತರದಲ್ಲಿ ಸ್ವಾಮೀಜಿಯವರು ಅಪಾಯದಿಂದ ಪಾರಾದರು. ಆದರೆ ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸ್ವಾಮೀಜಿಯವರು ಸ್ಪೋಟದ ಅಪಾಯದಿಂದ ಪಾರಾದ ವಿಡಿಯೋ ಒಂದು ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.