ರೈತರಿಗಿಲ್ಲದ ಸಾಲ ಮನ್ನಾ ಅಂಬಾನಿಗೇಕೆ?


Team Udayavani, Feb 6, 2019, 12:30 AM IST

s-11.jpg

ಪ್ರಧಾನಿ ಮೋದಿಯವರ ಕಾರ್ಯಶೈಲಿಯ ಬಗ್ಗೆ ದೇಶಾದ್ಯಂತ ಮತ್ತು ಖುದ್ದು ಬಿಜೆಪಿಯಲ್ಲೇ ಅಸಮಾಧಾನ ಸೃಷ್ಟಿಯಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ. ಇತ್ತೀಚಿನ ಮಧ್ಯಂತರ ಬಜೆಟ್‌, ಮಹಾಘಟಬಂಧನ, ಸಿಬಿಐ-ಮಮತಾ ವಾರ್‌ ಬಗ್ಗೆಯೂ ಅವರು ಹಿಂದುಸ್ತಾನ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ…

ಬಜೆಟ್‌ ಬಗ್ಗೆ ಮಾತನಾಡೋಣ. ಅದು ಜನಪ್ರಿಯವೆನಿಸುತ್ತಿದೆ. ರೈತ ಕೇಂದ್ರಿತವಾಗಿರುವ ಈ ಬಜೆಟ್‌ನಲ್ಲಿ ಕಾರ್ಮಿಕರನ್ನು ದೃಷ್ಟಿಯಲ್ಲಿಟ್ಟಿಕೊಂಡೂ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ… 
ರೈತ ಕುಟುಂಬಗಳಿಗೆ ದಿನಕ್ಕೆ 17 ರೂಪಾಯಿ ಕೊಡುವುದು ಅವರನ್ನು ಅಪಮಾನಿಸಿದಂತೆ. ಮೋದಿ ಸರ್ಕಾರ ಚಕ್ರವ್ಯೂಹದಲ್ಲಿ ಸಿಲುಕಿಬಿಟ್ಟಿದೆ. ಅದಕ್ಕೆ ಏನು ಮಾಡಬೇಕೋ ತೋಚುತ್ತಿಲ್ಲ. ಹೀಗಾಗಿ, ಇದೆಲ್ಲ ಗಾಬರಿಯಲ್ಲಿ ತೆಗೆದುಕೊಂಡ ನಿರ್ಣಯ. 

    ಆದರೆ ಇದು ರೈತರಿಗೆ ಪೂರಕವಾಗಿದೆ ಎಂದು ಅನಿಸುವುದಿಲ್ಲವೇ? ಎನ್‌ಎಸ್‌ಎಸ್‌ಒದ ದಾಖಲೆಗಳ ಪ್ರಕಾರ ಭಾರತದ ಗ್ರಾಮೀಣ ಕೃಷಿಕ ಪರಿವಾರಗಳು ತಿಂಗಳಿಗೆ ಸರಾಸರಿ 5,200 ರೂಪಾಯಿ ಗಳಿಸುತ್ತವಂತೆ. ಹೀಗಾಗಿ, ಅವರಿಗೆ ತಿಂಗಳಿಗೆ ಹೆಚ್ಚುವರಿ 500 ಬಂದರೆ ಒಳ್ಳೆಯದೇ ಅಲ್ಲವೇ? ಆಗ ಅವರ ಆದಾಯ 5,700ಕ್ಕೆ ಏರುತ್ತದೆ. 
ನನಗೆ ತಿಳಿದಿರುವ ಪ್ರಕಾರ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿನ ಸಾಲಮನ್ನಾ ಪ್ರಮಾಣವು ಪ್ರಧಾನಿ ಮೋದಿ ಘೋಷಿಸಿರುವ ಮೊತ್ತಕ್ಕಿಂತಲೂ ಎಷ್ಟೋ ಅಧಿಕವಿದೆ. 

ಕೃಷಿಯ ವಿಷಯಕ್ಕೆ ಬಂದರೆ ನಿಮ್ಮ ಸರ್ಕಾರ(ಯುಪಿಎ) ಅಧಿಕಾರದಲ್ಲಿದ್ದಾಗ ರೈತರ ಸಾಲಮನ್ನಾ ಘೋಷಣೆ ಮಾಡಿತ್ತು. ಅಲ್ಲದೆ ಇತ್ತೀಚೆಗೆ ನೀವು ಗೆದ್ದ ಮೂರು ರಾಜ್ಯಗಳಲ್ಲೂ ಸಾಲಮನ್ನಾ ಮಾಡಲಾಯಿತು. ಈಗ, ಅಂದರೆ, ಕಳೆದ 18-24 ತಿಂಗಳಿಂದ ಬಿಜೆಪಿ ಆಡಳಿತವಿರುವ ಕೆ‌ಲವು ರಾಜ್ಯಗಳಲ್ಲೂ ಸಾಲ ಮನ್ನಾ ಘೋಷಣೆಯಾಗಿದೆ. ಕೃಷಿ ಕ್ಷೇತ್ರದ ಮೂಲಭೂತ ಸಮಸ್ಯೆ ಏನಿರಬಹುದೆನ್ನುತ್ತೀರಿ? 
ಒಂದು ಸಂಗತಿ ಸ್ಪಷ್ಟಪಡಿಸುತ್ತೇನೆ. ಇಲ್ಲಿ ಪ್ರಶ್ನೆಯು ಕೇವಲ ಕೃಷಿ ಸಾಲಮನ್ನಾಕ್ಕಷ್ಟೇ ಸೀಮಿತವಾಗಿಲ್ಲ. ನರೇಂದ್ರ ಮೋದಿ ಸರ್ಕಾರ ತಮ್ಮ ಆಪ್ತ 20-25 ಉದ್ಯಮಿಗಳ 3.5 ಲಕ್ಷ ಕೋಟಿಯಷ್ಟು ಬ್ಯಾಂಕ್‌ ಸಾಲವನ್ನು ಮನ್ನಾ ಮಾಡಿದೆ. ಹೀಗಾಗಿ ಕೃಷಿ ಸಾಲ ಮನ್ನಾ ಎನ್ನುವುದು ಪ್ರಾಮಾಣಿಕತೆಯ ಪ್ರಶ್ನೆಯೂ ಆಗುತ್ತದೆ. ನನ್ನ ಸರಳ ಪ್ರಶ್ನೆಯೇನೆಂದರೆ, ನೀವು ಅನಿಲ್‌ ಅಂಬಾನಿಯ ಸಾಲ ಮನ್ನಾ ಮಾಡುತ್ತೀರಿ ಎಂದರೆ, ರೈತರ ಸಾಲವನ್ನೇಕೆ ಮನ್ನಾ ಮಾಡುವುದಿಲ್ಲ? ಏಕೆ ಈ ವರ್ಗಕ್ಕೆ ಸಹಾಯ ಮಾಡುವುದಿಲ್ಲ? ರೈತರೇನು ತಪ್ಪು ಮಾಡಿದ್ದಾರೆ? ನನಗನ್ನಿಸುವುದೇನೆಂದರೆ, ಭಾರತದಲ್ಲಿ ಎರಡನೇ ಹಸಿರು ಕ್ರಾಂತಿ ನಿಶ್ಚಿತವಾಗಿಯೂ ಆಗಬಲ್ಲದು. ಆದರೆ ಅದು ಸಾಧ್ಯವಾಗಬೇಕೆಂದರೆ ಏನು ಬೇಕಾಗುತ್ತದೆ? ಮೂಲಸೌಕರ್ಯ ಅಭಿವೃದ್ಧಿ,  ಕೃಷಿ ಜಮೀನುಗಳನ್ನು ಸಂಪರ್ಕಿಸುವುದು, ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆ, ರೈತರಿಗೆ ಸಾರಿಗೆ ಬೆಂಬಲ ನೀಡುವುದು ಮತ್ತು ಅವರ ಬೆನ್ನಿಗೆ ನಿಲ್ಲುವ ಅಗತ್ಯವಿರುತ್ತದೆ. ಆದರೆ ಇಂದು ಇದೆಲ್ಲ ಆಗುತ್ತಿಲ್ಲ. ನೀವು ನಂಬುತ್ತೀರಾ…ಫ‌ಸಲ್‌ ಬೀಮಾ ಯೋಜನೆಯ ಲಾಭ ಮಾಡಿಕೊಳ್ಳಲು ಕೆಲವು ಕಾರ್ಪೊರೇಟ್‌ಗಳಿಗೆ ಜಿಲ್ಲೆಗಳನ್ನೇ ಹಸ್ತಾಂತರಿಸಲಾಗಿದೆ! ಕೃಷಿ ವಿಮೆಯು ಇನ್ಶೂರರ್‌ಗಳ ಬದಲಾಗಿ ರೈತರಿಗೆ ಲಾಭ ಮಾಡಿಕೊಡಬೇಕು ಎನ್ನುವ ಮೂಲ ನಿಯಮಕ್ಕೇ ಇದು ವಿರುದ್ಧವಾಗಿದೆ. ಈ ಸರ್ಕಾರ ಇಡೀ ಜಮ್ಮು-ಕಾಶ್ಮೀರದ ವಿಮೆಯನ್ನು ಮಿಸ್ಟರ್‌ ಅನಿಲ್‌ ಅಂಬಾನಿಯವರ ಕಂಪನಿಗೆ ಕೊಟ್ಟುಬಿಟ್ಟಿದೆ. ತಮ್ಮ 20-30 ಶ್ರೀಮಂತ ಗೆಳೆಯರಿಗೆ ಭಾರತದ ಸ್ವತ್ತನ್ನೆಲ್ಲ ವ್ಯವಸ್ಥಿತವಾಗಿ ಹಸ್ತಾಂತರ ಮಾಡುತ್ತಿದ್ದಾರೆ ಮೋದಿಯವರು. ಇದೇ ಕೆಲಸ ರಕ್ಷಣಾ ವಲಯದಲ್ಲಿ,  ಕೃಷಿ ಕ್ಷೇತ್ರದಲ್ಲಿ, ಮೂಲಸೌಕರ್ಯ ವಲಯದಲ್ಲಿ ಮತ್ತು ಎಲ್ಲೆಡೆಯೂ ಆಗುತ್ತಿದೆ. 

ಹಾಗಿದ್ದರೆ, ಕೃಷಿ ಕ್ಷೇತ್ರದ ಬಗ್ಗೆ ನಿಮ್ಮ ಯೋಜನೆ ಹೇಗಿದೆ? 
ಒಂದು ವೇಳೆ ಯಾರಾದರೂ ಸಂಕಟದಲ್ಲಿದ್ದರೆ, ಅವರಿಗೆ ಸಹಾಯ ಮಾಡಬೇಕು. ಅವರ ಬಗ್ಗೆ ನಿಮ್ಮ ಬಳಿ ಮೊದಲೇ ಪ್ಲ್ರಾನ್‌/ಕಾರ್ಯತಂತ್ರವಿರಬೇಕು. ಅದು ಬಿಟ್ಟು ಪ್ರತಿಪಕ್ಷಗಳು ಪ್ರಶ್ನಿಸಲಾರಂಭಿಸಿದ ತಕ್ಷಣ ತರಾತುರಿಯಲ್ಲಿ ನೀವು ಪ್ರತಿಕ್ರಿಯಿಸಬಾರದು. ಕೃಷಿ ವಿಷಯದಲ್ಲಿ ನಾವು ವೈಫ‌ಲ್ಯಗಳನ್ನು ಎತ್ತಿ ತೋರಿಸುವವರೆಗೂ ನರೇಂದ್ರ ಮೋದಿಯವರು ನಿದ್ದೆ ಮಾಡುತ್ತಿದ್ದರು. ನಮ್ಮ ದೇಶ ಕೃಷಿಯೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ನಮ್ಮ ರೈತರ ನೋವು ಮತ್ತು ತೊಳಲಿಕೆಗಳು ನಮಗೆ ಅರ್ಥವಾಗುತ್ತವೆ. ಮಿಸ್ಟರ್‌ ನರೇಂದ್ರ ಮೋದಿಯವರು ಕೃಷಿಯನ್ನು ಅಪ್ರಸ್ತುತ ಎಂದು ಭಾವಿಸಬಹುದು, ಆದರೆ ನಾವು ಹಾಗೆ ಭಾವಿಸುವುದಿಲ್ಲ. ರೈತರು ನಮ್ಮ ಆರ್ಥಿಕ ಸಂರಚನೆಯ ಭಾಗವೆಂದೂ ಮತ್ತು ನಮ್ಮ ಆರ್ಥಿಕತೆಯೊಂದಿಗೆ ಕೃಷಿಯನ್ನು ಪರಿಣಾಮಕಾರಿಯಾಗಿ ಬೆಸೆಯುವ ಅಗತ್ಯವಿದೆಯೆಂದೂ ನಾವು ಭಾವಿಸುತ್ತೇವೆ. 

ಇನ್ನೊಂದು ಸಮಸ್ಯೆಯೆಂದರೆ ಉದ್ಯೋಗ ಸೃಷ್ಟಿಯದ್ದು. ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ ಎಂಬ ವರದಿಯನ್ನು ನೀವೂ ನೋಡಿರಬಹುದು. ಈ ವಿಷಯದಲ್ಲಿ ನಿಮ್ಮ ಪಕ್ಷದ ಕಾರ್ಯತಂತ್ರ ಹೇಗಿದೆ?
ದೇಶದ 15-20 ದೊಡ್ಡ ಉದ್ಯಮಿಗಳಿಂದಷ್ಟೇ ಉದ್ಯೋಗಗಳು ಸಿಗುವುದಿಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳೂ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು. ಅವರ ಬೃಹತ್‌ ಸಾಮರ್ಥ್ಯಕ್ಕೆ ವೇದಿಕೆಯೊದಗಿಸಿದರೆ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹಾಗೆಂದು ಬೃಹತ್‌ ಉದ್ಯಮಗಳಿಗೆ ಜಾಗವಿರಬಾರದು ಎಂದು ನಾನು ಹೇಳುತ್ತಿಲ್ಲ. ಅವಕ್ಕೂ  ಜಾಗವಿರಲೇಬೇಕು. ಆದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್‌ಗಳಿಗೂ ಬ್ಯಾಂಕುಗಳು ಮತ್ತು ಪಾಲಿಸಿಗಳು ಕೈಗೆಟಕುವಂತಿರಬೇಕು. ಅದೇಕೆ ಮುಂಚೂಣಿ 40 ಉದ್ಯಮಗಳ ಬಳಿ 12 ಲಕ್ಷ ಕೋಟಿ ರೂಪಾಯಿಗಳ ಎನ್‌ಪಿಎ ಇದೆ? ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್‌ಗಳ ಬಳಿ ಅದರ ಅಲ್ಪ ಪ್ರಮಾಣವೂ ಇಲ್ಲ? ಏಕೆಂದರೆ, ಇವಕ್ಕೆಲ್ಲ ಈ ಬೃಹತ್‌ ಉದ್ಯಮಗಳಿಗೆ ಸಿಗುವಂಥ  ಆ್ಯಕ್ಸಸ್‌ ಇಲ್ಲ. 
ಇವರಲ್ಲಿ ಎಷ್ಟು ಜನರಿಗೆ‌ ಹಣಕಾಸು ಸಚಿವರು ಮತ್ತು ಪ್ರಧಾನಿಗಳ ಕಾರ್ಯಾಲಯಕ್ಕೆ ಕಾಲಿಡಲು ಸಾಧ್ಯವಿದೆಯೋ ಹೇಳಿ? ಆದರೆ ಇನ್ನೊಂದೆಡೆ ಮಿಸ್ಟರ್‌ ಅನಿಲ್‌ ಅಂಬಾನಿ ಪ್ರಧಾನಿ ಜೊತೆ ಫ್ರಾನ್ಸ್‌ಗೆ ಪಯಣಿಸುತ್ತಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಹಿವಾಟುದಾರರಿಗೆ ಇದು ಸಾಧ್ಯವಿದೆಯೇ? ಮೇಹುಲ್‌ ಭಾಯ್‌, ನೀರವ್‌ ಭಾಯ್‌ ಎಂದಂತೆ, ಈ ಚಿಕ್ಕ ವ್ಯಾಪಾರಿಗಳನ್ನು ಮೋದಿಯವರು “ಭಾಯ್‌’ ಎಂದು ಕರೆಯಬಲ್ಲರಾ? ಸಾಧ್ಯವಿಲ್ಲ. 

ಎರಡನೆಯದಾಗಿ, ದೇಶದ ಪ್ರತಿಯೊಂದು ಜಿಲ್ಲೆಯಲ್ಲಿಯೂ ವಿಶೇಷವಾದ ಸಾಮರ್ಥ್ಯ, ಕೌಶಲವಿರುವ ಜನರಿರುತ್ತಾರೆ ಮತ್ತು ಅಲ್ಲಿನವೇ ವಿಶಿಷ್ಟ ಉತ್ಪನ್ನಗಳಿರುತ್ತವೆ. ಅವನ್ನು ಉತ್ಪಾದನಾ ಸಂರಚನೆಗೆ ಲಿಂಕ್‌ ಮಾಡಬೇಕು. ಮಿಸ್ಟರ್‌ ಮೋದಿಯವರು 
ಸ್ಟಾರ್ಟ್‌ಅಪ್‌ಗ್ಳ ಬಗ್ಗೆ ಮಾತನಾಡುತ್ತಾರೆ. ಅವರು ಎಷ್ಟು ಸ್ಟಾರ್ಟ್‌ಅಪ್‌ಗ್ಳನ್ನು ಸೃಷ್ಟಿಸಿದ್ದಾರಂತೆೆ? ನೀವು ಒಂದೆಡೆ ಕೌಶಲವನ್ನು ಸಂಪೂರ್ಣವಾಗಿ ಕಡೆಗಣಿಸುತ್ತೀರಿ ಅಥವಾ ಅಪಮಾನಿಸುತ್ತೀರಿ, ಇನ್ನೊಂದೆಡೆ ಉತ್ಪಾದನೆ ಮಾಡುತ್ತೇವೆ ಎನ್ನುತ್ತೀರಿ ಎಂದರೆ ಏನುಪಯೋಗ? ಮೋದಿಯವರ ಮನಸ್ಸಿನಲ್ಲಿ ಕೌಶಲ, ಸಾಮರ್ಥ್ಯ, ಭಾರತದ ವಿಶಿಷ್ಟ ಜ್ಞಾನ ಮತ್ತು ಉತ್ಪಾದನೆಯ ಸಂರಚನೆಯ ವಿಷಯದಲ್ಲಿ ಸ್ಪಷ್ಟತೆ ಇಲ್ಲ. 

ಬಿಜೆಪಿಯ ಪ್ರಮುಖ ಚುನಾವಣಾ ವಿಷಯವೆಂದರೆ ನಾಯಕತ್ವದ ವಿಚಾರ.  ಅದರ ಬಳಿ ನರೇಂದ್ರ ಮೋದಿಯವರಿದ್ದಾರೆ. ಇನ್ನೊಂದೆಡೆ ಪ್ರತಿಪಕ್ಷವೆನ್ನುವುದು ಹಲವು ನಾಯಕರು ಮತ್ತು ಮಹತ್ವಾಕಾಂಕ್ಷೆಯ ಪೈಪೋಟಿಯಿಂದಾಗಿ ಅವ್ಯವಸ್ಥೆಗೆ ಸಮಾನಾರ್ಥಕವಾಗಿದೆ ಎನ್ನುತ್ತದೆ ಬಿಜೆಪಿ. 2019ರ ಚುನಾವಣೆಯಲ್ಲಿ ಅಭ್ಯರ್ಥಿಯ ಕೊರತೆ ನಿಮ್ಮ ಅತಿದೊಡ್ಡ ದೌರ್ಬಲ್ಯವಾಗಿರಲಿದೆಯೇ? 
ಮೋದಿಯವರು ತಾವು ಹಿಂದುತ್ವವನ್ನು ಅರಿತಿರುವುದಾಗಿ ಹೇಳುತ್ತಾರೆ. ಹಿಂದೂ ತತ್ವಶಾಸ್ತ್ರದ ಮೂಲಭೂತ ಸಾರವನ್ನು ಅವರು ಓದಿದ್ದರೆ, ಅವ್ಯವಸ್ಥೆಯಿಂದಲೇ ವ್ಯವಸ್ಥೆಯೊಂದು(ಕ್ರಮವೊಂದು) ಹುಟ್ಟುತ್ತದೆ ಎನ್ನುವುದು ಅರ್ಥವಾಗಿರುತ್ತಿತ್ತು.   ಈಗ  ಕೈಜೋಡಿಸಿರುವ ಈ ಎಲ್ಲಾ ಪಕ್ಷಗಳಿಗೂ ಕೆಲವು ವಿಷಯಗಳಲ್ಲಿ ಒಗ್ಗಟ್ಟಿದೆೆ.   ನಿರುದ್ಯೋಗ ಸಮಸ್ಯೆ, ಕೃಷಿ ಸಮಸ್ಯೆ ವಿಚಾರದಲ್ಲಿ ನಮ್ಮ ವಿಚಾರ ಏಕವಾಗಿದೆ. ಅಲ್ಲದೇ ಮೋದಿ ಮತ್ತು ಆರ್‌ಎಸ್‌ಎಸ್‌ ಸೇರಿಕೊಂಡು ಭಾರತೀಯ ಸಂಸ್ಥಾನಗಳನ್ನು ನಾಶಪಡಿಸುವುದನ್ನು ತಡೆಯುವ ವಿಚಾರದಲ್ಲೂ ನಮಗೆ ಏಕತೆಯಿದೆ.

ನಾಯಕತ್ವದ ವಿಚಾರಕ್ಕೆ ಬಂದರೆ, ಒಂದು ವೇಳೆ ನಾನೇನಾದರೂ ಗಡ್ಕರಿ, ಸ್ವರಾಜ್‌, ರಾಜ್‌ನಾಥ್‌ ಮತ್ತು ಇತರೆ ನಾಯಕರನ್ನು ವೈಯಕ್ತಿಕವಾಗಿ ಮಾತನಾಡಿಸಿ ನೋಡಿದರೆ, ಅವರೆಲ್ಲರೂ ನರೇಂದ್ರ ಮೋದಿಯವರ ಕಾರ್ಯಶೈಲಿಯನ್ನು ಸಂಪೂರ್ಣವಾಗಿ ನಿರಾಕರಿಸಿದರೂ ಆಶ್ಚರ್ಯವಿಲ್ಲ! ನಿಜಕ್ಕೂ ಒಡಕು ಇರುವುದು ಬಿಜೆಪಿಯಲ್ಲೇ. ಆದರೆ ಭಯದ ಕಾರಣದಿಂದ ಈ ಒಡಕು ಹೊರಗೆ ಕಾಣಿಸುತ್ತಿಲ್ಲವಷ್ಟೆ. ಖಾಸಗಿಯಾಗಿ ಇದು ಕಾಣಿಸುತ್ತದೆ. ಮೋದಿಯವರು ಒಂದು ವಿಷಯವನ್ನು ಅರ್ಥಮಾಡಿಕೊಂಡಿಲ್ಲ, ಇಡೀ ಬಿಜೆಪಿಯೇ ಅವರನ್ನು ಪಕ್ಕಕ್ಕೆ ತಳ್ಳುವ ದಿನಕ್ಕಾಗಿ ಕಾಯುತ್ತಿದೆ. ಆ ದಿನ ದೂರವೇನೂ ಇಲ್ಲ. 

ಹಾಗಿದ್ದರೆ ಮಹಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯ ಕೊರತೆಯನ್ನು ನೀವು ದೌರ್ಬಲ್ಯ ಎಂದು ಭಾವಿಸುವುದಿಲ್ಲವೇ? 
ನನ್ನ 15 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಪ್ರತಿಪಕ್ಷಗಳ ನಡುವೆ ಈ ರೀತಿಯ ಒಗ್ಗಟ್ಟನ್ನು ನೋಡಿರಲಿಲ್ಲ. ಚಂದ್ರಬಾಬು ನಾಯ್ಡು ಅವರು ನಮ್ಮ ವಿರುದ್ಧ ಜೋರಾಗಿಯೇ ಹೋರಾಡಿದವರು, ಅವರೇ ಈಗ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಸಿಬಿಐ ವಿಚಾರದಲ್ಲಿ ನಡೆದ ಘಟನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? 
ಭಾರತದ ಪ್ರತಿಯೊಂದು ಸಂಸ್ಥೆಯೂ ಮೋದಿಯವರ ಸರ್ವಾಧಿಕಾರದ  ಪರಿಣಾಮಗಳನ್ನು ಎದುರಿಸುತ್ತಿದೆ. ಮೋದಿ ಯವರು ಬ್ರಿಟಿಷರಂತೆ ತಮ್ಮನ್ನು ತಾವು “ಭಾರತದ ದೊರೆ’ ಎಂದು ಭಾವಿಸಿದ್ದಾರೆ. ಆದರೆ ನಾವು ಹೀಗೆ ಕಾರ್ಯನಿರ್ವಹಿಸುವುದಿಲ್ಲ. ನಾವೂ ಸರ್ಕಾರದಲ್ಲಿದ್ದವರು, ಪ್ರತಿಪಕ್ಷದಲ್ಲಿದ್ದೂ ಅನುಭವವಿದೆ. ದೇಶದ ಸಂಸ್ಥೆಗಳನ್ನು ಮುಟ್ಟಬಾರದು ಮತ್ತು ಭಾರತದ ಫೆಡರಲ್‌ ರಚನೆಯ ಮೇಲೆ ದಾಳಿ ಮಾಡಬಾರದು ಎಂಬುದು ನಮ್ಮ ನಂಬಿಕೆ. ಈ ಸಂಸ್ಥೆಗಳು ಭಾರತದ ಆತ್ಮವಿದ್ದಂತೆ, ಹೀಗಾಗಿ ಅವನ್ನು ರಕ್ಷಿಸಬೇಕು. ಮಿಸ್ಟರ್‌ ಮೋದಿಯವರು ಭಾರತಕ್ಕಿಂತ ದೊಡ್ಡವರೇನೂ ಅಲ್ಲ, ಭಾರತವು ಎಲ್ಲರಿಗಿಂತ, ಎಲ್ಲದಕ್ಕಿಂತ ದೊಡ್ಡದು. 

ಬಹಳಷ್ಟು ಜನರು ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ನಿಮ್ಮ ಅಜ್ಜಿ ಇಂದಿರಾರ ಕಾರ್ಯವೈಖರಿಗೆ ಹೋಲಿಸುತ್ತಾರೆ. ನಿಮಗೆ ಇಬ್ಬರಲ್ಲಿ ಸಾಮ್ಯತೆ ಕಾಣಿಸುತ್ತದೆಯೇ? 
ಹೀಗೆ ಹೋಲಿಕೆ ಮಾಡುವುದು ಇಂದಿರಾಜೀಗೆ ಮಾಡುವ ಅವಮಾನ ಎಂದು ನಾನು ಭಾವಿಸುತ್ತೇನೆ. ನನ್ನ ಅಜ್ಜಿಯ ನಿರ್ಧಾರಗಳು ಪ್ರೀತಿ ಮತ್ತು ಮಮತೆಯಿಂದ ಹೊರ ಬರುತ್ತಿದ್ದವು. ಅವರ ಕೆಲಸವು ದೇಶವನ್ನು ಬೆಸೆಯುತ್ತಿತ್ತು. ಅವರು ಜನರನ್ನು ತಮ್ಮೊಡನೆ ಕರೆದೊಯ್ದರು, ಭಾರತದ ಬಡವರ ಬಗ್ಗೆ ಕಾಳಜಿ ವಹಿಸಿದ್ದರು. ಇನ್ನೊಂದೆಡೆ ಮೋದಿಯವರ ನಿರ್ಧಾರಗಳು ಸಿಟ್ಟು ಮತ್ತು ದ್ವೇಷದಿಂದ ಹೊರಬರುತ್ತವೆ. ಅವರ ನಿರ್ಧಾರಗಳು ದೇಶವನ್ನು ವಿಭಜಿಸುತ್ತಿವೆ. ಮತ್ತು ಮೋದಿಯವರಿಗೆ ಬಡವರು ಮತ್ತು ದುರ್ಬಲರ ಬಗ್ಗೆ ಅನುಕಂಪವೇ ಇಲ್ಲ. 

ಟಾಪ್ ನ್ಯೂಸ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.