‘ಭಾರತದ ಪರಂಪರೆ ವಿಶ್ವಮಾನ್ಯ’


Team Udayavani, Feb 6, 2019, 6:29 AM IST

6-february-7.jpg

ಬಂಟ್ವಾಳ : ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿ ಯಾವುದೇ ಸರಿಸಾಟಿ ಇಲ್ಲ. ಬಹು ಸಂಸ್ಕೃತಿಯ ನಾಡಾದರೂ ಇಡೀ ದೇಶವೇ ಒಂದು ಎಂಬ ಭಾವ ನಮ್ಮನ್ನು ಆವರಿಸಿದೆ. ಇಲ್ಲಿನ ಜ್ಞಾನ, ಪರಂಪರೆ ಎಲ್ಲವೂ ವಿಶ್ವಮಾನ್ಯ ವಾಗಲು ಕಾರಣವಾಗಿದೆ. ನಮ್ಮ ಭೌಗೋ ಳಿಕ ವ್ಯವಸ್ಥೆಯು ನಮ್ಮ ಜ್ಞಾನ ದಿಗಂತವನ್ನು ವಿಸ್ತರಿಸಿದೆ ಎಂದು ವಿದ್ವಾಂಸ ಶತಾವಧಾನಿ ಡಾ| ಆರ್‌. ಗಣೇಶ್‌ ಹೇಳಿದರು.

ಅವರು ಮಂಗಳವಾರ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ವೇದವ್ಯಾಸ ಧ್ಯಾನ ಮಂದಿರ ದಲ್ಲಿ ನಡೆದ ರಾಜ್ಯಮಟ್ಟದ 8ನೇ ವರ್ಷದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸೂರ್ಯ ಪ್ರಭಾವ
ಸೂರ್ಯ ನಮ್ಮೆಲ್ಲರ ಶ್ರದ್ಧಾ ಕೇಂದ್ರ. ಭೂಮಧ್ಯೆ ರೇಖೆಯ ಭಾಗದಲ್ಲಿ ಇರುವಂತಹ ನಾವು ಸೂರ್ಯನ ನೇರ ಪ್ರಭಾವಕ್ಕೆ ಒಳಗಾಗಿರುವುದರಿಂದ ನಮ್ಮ ಚಿಂತನೆ, ಯೋಚನೆ ಗಳೆಲ್ಲವೂ ಉದಾತ್ತ ಮಟ್ಟಕ್ಕೆ ಏರಿದವು. ಏಕೆಂದರೆ ಸೂರ್ಯ ಜ್ಞಾನದ ಮೂಲ. ನಮ್ಮ ಸಂಸ್ಕೃತಿಯ ಯಾವುದೇ ಭಾಗವಿರಲಿ ಅದು ಅರಳಿಸಿ, ವ್ಯಕ್ತಿತ್ವವನ್ನು ವಿಕಸನಗೊಳಿಸಿ ನಮ್ಮನ್ನು ಎತ್ತರಕ್ಕೆ ಏರಿಸುವಂತದ್ದು ಎಂದರು.

ಜ್ಞಾನ ಪರಂಪರೆಯ ವಾರಸುದಾರರು
ನಮ್ಮ ಜ್ಞಾನದ ಪರಂಪರೆ ತುಂಬಾ ನಶಿಸಿ ಹೋಗಿದೆ ಎಂಬ ಭಾವನೆ ನಮ್ಮಲ್ಲಿದ್ದರೂ ಇಂದಿಗೂ ಶೇ. 80ಕ್ಕೂ ಹೆಚ್ಚು ಉಳಿದುಕೊಂಡಿದೆ ಎಂಬುದು ಹೆಮ್ಮೆಯ ವಿಚಾರ. ಪಾಕಿಸ್ತಾನ, ಅಪ ಘಾನಿಸ್ತಾನಗಳಂತಹ ದೇಶದಲ್ಲಿದ್ದ ನಮ್ಮ ಪ್ರಾಚೀನ ವಿಶ್ವವಿದ್ಯಾನಿಲಯಗಳು ನಿರಂತರ ದಾಳಿಯಿಂದ ಜರ್ಝರಿತ ಗೊಂಡಿವೆಯಾದರೂ ಇಂದಿಗೂ ಜ್ಞಾನ ಪರಂಪರೆಯ ವಾರಸುದಾರರು ನಾವು ಎಂಬ ಹೆಮ್ಮೆ ನಮಗಿರಲಿ ಎಂದು ಅವರು ಕಿವಿಮಾತು ಹೇಳಿದರು.

ನೈಜತೆ ಅರಿವಿಗೆ ಬರಲಿ
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಪ್ರಸ್ತಾವನೆ ನೀಡಿ ಮಾತನಾಡಿ, ನಮ್ಮ ಸಂಸ್ಕೃತಿಯ ವಿಶ್ವವ್ಯಾಪಕತೆಯ ಬಗೆಗೆ ನಮಗೆ ಅರಿವಿಲ್ಲದಿರುವುದು ದುರಂತ. ಉದ್ದೇಶಪೂರ್ವಕವಾಗಿ ಪಠ್ಯಪುಸ್ತಕಗಳಿಂದ ನಮ್ಮ ವೀರ ಪರಂಪರೆಯ ವಿಷಯ ಕೈಬಿಡಲಾಗಿದೆ. ಇಂತಹ ದುರುದ್ದೇಶಪೂರಿತ ವ್ಯಕ್ತಿಗಳೇ ಶಿಕ್ಷಣ ಇಲಾಖೆಯನ್ನು ನಿರ್ವಹಿಸುತ್ತಿರುವುದು ಖೇದಕರ. ಆದರೆ ಯಾವುದೋ ಒಂದು ಹಂತದಲ್ಲಿ ನೈಜತೆ ಅರಿವಿಗೆ ಬರಲೇಬೇಕಲ್ಲವೇ. ಅದಕ್ಕಾಗಿ ಈ ವಿಚಾರ ಸಂಕಿರಣ ಎಂದರು.

ದಿನಪೂರ್ತಿ ನಡೆದ ವಿಚಾರ ಸಂಕಿರಣದ 2ನೇಯ ಅವಧಿಯಲ್ಲಿ ಮಹಾರಾಷ್ಟ್ರದ ಔರಂಗಬಾದ್‌ ವಿಶ್ವವಿದ್ಯಾನಿಲಯದ ಡಾ| ಶರದ್‌ ಹೆಬ್ಟಾಳ್ಕರ್‌ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರ ಎಂಬ ವಿಷಯ ಮಂಡಿಸಿದರು.

ಪ್ರಜ್ಞಾಪ್ರವಾಹ ಸಂಯೋಜಕ ರಘನಂದನ್‌, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಹಾಗೂ ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್‌ ಉಪಸ್ಥಿತರಿದ್ದರು.

ವಿಚಾರ ಸಂಕಿರಣದಲ್ಲಿ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರದ ವಿವಿಧ ಆಯಾಮಗಳನ್ನು ಬಿಂಬಿಸುವ ನೂರಾರು ಪ್ರದರ್ಶಿನಿಗಳು, ಹತ್ತಾರು ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು.

ಮಹಾನ್‌ ರಾಷ್ಟ್ರ
ಇಲ್ಲಿನ ಆಹಾರ, ಉಡುಗೆ-ತೊಡುಗೆ, ಪದ್ಧತಿಗಳು ಎಲ್ಲವೂ ವಿಭಿನ್ನವಾಗಿ ತೋರಿಬಂದರೂ ನಮ್ಮದು ಒಂದೇ ಸಂಸ್ಕೃತಿಯನ್ನು ಹೊಂದಿದ ಮಹಾನ್‌ ರಾಷ್ಟ್ರ. ಯಾವ ಆಚರಣೆಗೂ ಇಲ್ಲಿ ವಿರೋಧವಿಲ್ಲ. ಆದ್ದರಿಂದ ಭಾರತದವರು, ಹಿಂದೂಗಳು ಅಸಹಿಷ್ಣುಗಳಾಗಲು ಸಾಧ್ಯವೇ ಇಲ್ಲ. 
 ಶತಾವಧಾನಿ ಡಾ| ಆರ್‌. ಗಣೇಶ್‌ ವಿದ್ವಾಂಸ

ಟಾಪ್ ನ್ಯೂಸ್

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

16-

Shelter: ಸೂರು ಹುಡುಕಲೆಂದು ಹೊರಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.