ಭವಾನಿ ಫೌಂಡೇಶನ್ ವತಿಯಿಂದ ನಿರ್ಮಿತ ಸಮಾಜ ಭವನದ ಹಸ್ತಾಂತರ
Team Udayavani, Feb 6, 2019, 2:02 PM IST
ಮುಂಬಯಿ: ನೆರೆಯ ರಾಯಗಢ್ ಜಿಲ್ಲೆಯ ಪನ್ವೇಲ್ ತಾಲೂಕಿನ ಪಿರ್‌ಕಟ್‌ವಾಡಿ ಗ್ರಾಮದಲ್ಲಿ ನೆಲೆಸಿರುವ ಆದಿವಾಸಿ ಸಮಾಜದ ಜನರ ಮದುವೆ, ಮುಂಜಿ, ಸಭೆ, ಸಮಾರಂಭ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಮುಂಬಯಿಯ ಹೆಸರಾಂತ ಸಮಾಜ ಸೇವಾ ಸಂಸ್ಥೆ ಭವಾನಿ ಫೌಂಡೇಶನ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಭವಾನಿ ಫೌಂಡೇಶನ್ ಸಮಾಜ ಭವನ ಯೋಜನೆಯ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಫೆ.9ರಂದು ಬೆಳಗ್ಗೆ ಈ ಭವನವು ಆದಿವಾಸಿಗಳ ಸೌಕರ್ಯಕ್ಕಾಗಿ ಹಸ್ತಾಂತರಗೊಳ್ಳಲಿದೆ. ಭವನದ ಕಾರ್ಯಯೋಜನೆಯನ್ನು ಪರಿಶೀಲಿಸಲು ಫೆ. 3ರಂದು ಬೆಳಗ್ಗೆ ಭವಾನಿ ಫೌಂಡೇಶನ್ ಇದರ ಅಧ್ಯಕ್ಷ ಕುಸುಮೋಧರ ಡಿ. ಶೆಟ್ಟಿ ಚೆಲ್ಲಡ್ಕ, ವಿಶ್ವಸ್ತರಾದ ಧರ್ಮಪಾಲ ದೇವಾಡಿಗ, ಸಕಾಲ್ ಪತ್ರಿಕೆಯ ದಿನೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಚೆಲ್ಲಡ್ಕ, ಪ್ರೇಮನಾಥ ಶೆಟ್ಟಿ ಮುಂಡ್ಕೂರು ಭವನದ ಸ್ಥಳಕ್ಕೆ ಭೇಟಿ ನೀಡಿದರು.
ಸುಮಾರು ಒಂದು ಸಾವಿರ ಮಂದಿ ಸೇರಬಹುದಾದ ಈ ಭವನವು ಸುಂದರವಾದ ವೇದಿಕೆ, ಎರಡು ಕೊಠಡಿಗಳು ಹಾಗೂ ಶೌಚಾಲಯದ ಸೌಲಭ್ಯವನ್ನು ಹೊಂದಿದ್ದು,ಪಿರ್ಕಟ್‌ವಾಡಿಯಲ್ಲದೆ ಪರಿಸರದ ಅರ್ಕತ್‌ವಾಡಿ, ಉಂಬರ್ನವಾಡಿ ಗ್ರಾಮಗಳ ಆದಿವಾಸಿಗಳಿಗೂ ಇದರಿಂದ ಪ್ರಯೋಜನ ಸಿಗಲಿದೆ. ಪಿರ್ಕಟ್‌ವಾಡಿಯ ಮಂಗಲ್ ಸಕಾರಾಮ್ ಪೋಕ್ಲ, ಸಮಾಜ ಸೇವಕ ಮುರಳೀಧರ ಪಾಲ್ವೆ ಮೇಲ್ವಿಚಾರಣೆಯಲ್ಲಿ ಈ ಭವನ ನಿರ್ಮಾಣಗೊಂಡಿದ್ದು, ಸ್ಥಳೀಯ ಗ್ರಾಮಸ್ಥರು ಭವಾನಿ
ಫೌಂಡೇಶನ್‌ನ ಮಾನವೀಯ ಅನುಕಂಪದ ಸೇವೆಯನ್ನು ಹೊಗಳಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಚಿತ್ರ-ವರದಿ: ಪ್ರೇಮನಾಥ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Editorial: ಗಿಫ್ಟ್ ಡೀಡ್: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ
ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗಳ ದರವೂ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.