ಬಜೆಟ್‌ನಲ್ಲಿ ಶಂಕರನಾರಾಯಣ ತಾಲೂಕು ರಚನೆಯ ಕನಸು!

Team Udayavani, Feb 7, 2019, 12:55 AM IST

shankaranarayana.jpg

ಕುಂದಾಪುರ: ಬಜೆಟ್‌ ಬಂದಾಗಲೆಲ್ಲ ಶಂಕರನಾರಾಯಣ ಭಾಗದ ಜನತೆ ಈ ಬಾರಿಯಾದರೂ ಶಂಕರನಾರಾಯಣ ತಾಲೂಕು ಹೊಸದಾಗಿ ರಚನೆಯಾದೀತೇ ಎಂದು ಕನಸು ಕಟ್ಟುತ್ತಾರೆ. ಈ ಬಾರಿಯೂ ಕನಸು ಮೊಳಕೆಯೊಡೆದಿದೆ. ಬ್ರಿಟಿಷರ ಕಾಲದಿಂದಲೂ ಎಲ್ಲ ಸರಕಾರಿ ಕಚೇರಿ ಹೊಂದಿರುವ ಈ ಭಾಗದಲ್ಲಿ  ಉಪ ನೋಂದಣಿ ಕಚೇರಿ ವ್ಯಾಪ್ತಿಯ 42 ಗ್ರಾಮಗಳನ್ನು ಸೇರಿಸಿ ಶಂಕರನಾರಾಯಣವನ್ನು ತಾಲೂಕಾಗಿ ಘೋಷಿಸಬೇಕೆಂದು ಹೋರಾಟ ನಡೆಯುತ್ತಿದೆ. 

ಆಚಾರ್ಯರ ಪ್ರಯತ್ನ
ಅಂದಿನ ಗೃಹ ಸಚಿವ ಡಾ| ವಿ.ಎಸ್‌.ಆಚಾರ್ಯರು ಹೋರಾಟ ತಿಳಿದು ಕುಂದಾಪುರ ನಿರೀಕ್ಷಣಾ ಬಂಗಲೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ,ಡಿಸಿ, ಸಿ.ಇ.ಒ. ಸಮ್ಮುಖ ಮಾಹಿತಿ ಕಲೆ ಹಾಕಿ ಎಲ್ಲ ಗ್ರಾ.ಪಂ.ಗಳು ನಿರ್ಣಯಿಸಿದರೆ ಕೂಡಲೇ ವಿಶೇಷ ತಹಶೀಲ್ದಾರ್‌ ನೇಮಿಸುವ ಭರವಸೆ ನೀಡಿದ್ದರು. ಸಮಿತಿಯು ಎಲ್ಲ ಗ್ರಾಮಗಳ ಪಂಚಾಯತ್‌ ನಿರ್ಣಯ ತಯಾರು ಮಾಡುವಾಗಲೇ ಡಾ| ವಿ.ಎಸ್‌. ಆಚಾರ್ಯರು ಅಕಾಲಿಕ ನಿಧನ ಹೊಂದಿದ್ದು ತಾಲೂಕು ರಚನೆಗೆ ಹಿನ್ನಡೆಯಾಯಿತು. 

ಶೆಟ್ಟರ ಪ್ರಯತ್ನ
ವಿಧಾನ ಪರಿಷತ್‌ ಸದಸ್ಯಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಅರ್ಜಿ ಸಮಿತಿಯಲ್ಲಿ ತಾಲೂಕು ರಚನೆ ಕುರಿತು ಅಹವಾಲು ಮಂಡಿಸಿ ಆಗ ಪ್ರಶ್ನೆ ಕೇಳುತ್ತಾ ಹೊಸ ತಾಲೂಕಿನ ಕನಸನ್ನು ಊರ್ಜಿತದಲ್ಲಿಟ್ಟಿದ್ದಾರೆ ಉಡುಪಿ ಜಿಲ್ಲಾಡಳಿತ ಸಮಗ್ರ ವರದಿ ತಯಾರಿಸಿ 2014, ಡಿ 22 ಎಡಿಎಂಸಿಆರ್‌: 74/ 2014 -15 ರಂದು  ಶಂಕರನಾರಾಯಣಕ್ಕೆ ತಾಲೂಕಿನ ಅಗತ್ಯದ ಕುರಿತು ವರದಿಯನ್ನು ಸರಕಾರಕ್ಕೆ ಕಳುಹಿಸಿದೆ. ವರದಿ ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿ ಕೊಠಡಿಯಲ್ಲಿ ಬಾಕಿಯಾಗಿದೆ.

ಕಾರ್ಡ್‌ ಚಳವಳಿ
ಎರಡು ವರ್ಷಗಳ ಹಿಂದೆ 5,000 ಅಂಚೆಕಾರ್ಡ್‌ಗಳನ್ನು ವಿವಿಧ ಗ್ರಾಮಗಳಿಂದ ಜನರಿಂದ ಬರೆಸಿ ಅಂಚೆ ಕಾರ್ಡ್‌ ಚಳವಳಿ ಮಾಡಿ ಸರಕಾರಕ್ಕೆ ಕಳುಹಿಸುವಲ್ಲಿ ಸಮಿತಿ ಶ್ರಮಿಸಿತ್ತು. ಜಿಲ್ಲಾಡಳಿತದ ವರದಿಯೊಳಗೆ ಇರುವ ಮಡಾಮಕ್ಕಿ, ಶೇಡಿಮನೆ, ಬೆಳ್ವೆ, ಅಲಾºಡಿ ಗ್ರಾಮಗಳು ನೂತನ ಹೆಬ್ರಿ ತಾಲೂಕಿಗೆ ಹೋಗಿ, ಹಳ್ಳಿಹೊಳೆ ಬೈಂದೂರು ತಾಲೂಕಿಗೆ ಸೇರಿತು.
ಹೊಸ ತಾಲೂಕಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಂದಾಯ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಿತಿ ಮನವಿ ಸಲ್ಲಿಸಿದೆ. ಈ ಸಾಲಿನ ಬಜೆಟ್‌ಗಾಗಿ ಕಾದು ನೋಡ ಬೇಕೆಂದು ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಹೇಳಿದ್ದಾರೆ. 

ನಿರೀಕ್ಷೆಯಿದೆ
ಶಂಕರನಾರಾಯಣವು 1972ರವರೆಗೆ ಬೈಂದೂರು ಕ್ಷೇತ್ರ, 1973ರಿಂದ 2008ರ ವರೆಗೆ ಕುಂದಾಪುರ ಕ್ಷೇತ್ರ, 2008 ರಿಂದ ಪುನಃ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿದೆ. ಹೀಗಾಗಿ ಜನಪ್ರತಿನಿಧಿಗಳೂ ಬದಲಾಗುತ್ತಿದ್ದು ಈ ಬಾರಿಯಾದರೂ ಹೊಸ ತಾಲೂಕು ಘೋಷಣೆಯಾಗುವುದೇ ಎಂಬ ನಿರೀಕ್ಷೆಯಲ್ಲಿದ್ದೇವೆ.
– ನ್ಯಾಯವಾದಿ ಎ. ರತ್ನಾಕರ ಶೆಟ್ಟಿ ಹೋರಾಟ ಸಮಿತಿ ಅಧ್ಯಕ್ಷರು

ಟಾಪ್ ನ್ಯೂಸ್

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Delhi-Cong

Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

siddanna-2

HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ

Tulu movie Daskath will release in Kannada soon

Daskath ಮೆಚ್ಚಿದ ಪ್ರೇಕ್ಷಕರಿಗೆ ಬಿಗ್‌ ನ್ಯೂಸ್‌ ಕೊಟ್ಟ ಚಿತ್ರತಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kmc

Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ

15(1

Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ

14

Editorial: ಕಾಮಗಾರಿಯ ವಿಳಂಬ ಸಲ್ಲದು

10

Kundapura: ನರೇಗಾದಿಂದ ಆಲೂರಿನ ಮಹಿಳೆಯ ಸ್ವಾವಲಂಬಿ ಬದುಕು

9

ಕಾರ್ಕಳ ನಗರದಲ್ಲೂ ನೆಟ್‌ ಕಿರಿಕಿರಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Delhi-Cong

Delhi Polls: ದಿಲ್ಲಿಯ ಮಹಿಳಾ ಮತದಾರರ ಸೆಳೆಯಲು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

ನನ್ನ ಮಗಳ ಬಾಯ್‌ಫ್ರೆಂಡ್‌ ಫೋಟೋ ರಿವೀಲ್‌ ಮಾಡಿದರೆ 21 ಲಕ್ಷ ಬಹುಮಾನ: ಬಿಗ್‌ ಬಾಸ್‌ಗೆ ಸವಾಲು

1-kmc

Manipal KMC; ಮಧುಮೇಹಿ ಮಕ್ಕಳಿಗಾಗಿ ಶೈಕ್ಷಣಿಕ ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.