![Santhe-last](https://www.udayavani.com/wp-content/uploads/2025/02/Santhe-last-415x249.jpg)
![Santhe-last](https://www.udayavani.com/wp-content/uploads/2025/02/Santhe-last-415x249.jpg)
Team Udayavani, Feb 7, 2019, 12:55 AM IST
ಕುಂದಾಪುರ: ಮಂಗನಕಾಯಿಲೆಯಿಂದ ಮಂಗಗಳು ಸಾವನ್ನಪ್ಪುತ್ತಿದ್ದು ಮನುಷ್ಯರಲ್ಲಿ ಕಂಡು ಬಂದಿಲ್ಲ. ಪಂಚಾಯತ್ ವ್ಯಾಪ್ತಿಗಳಲ್ಲಿ ಮಂಗನ ಕಾಯಿಲೆ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಹೇಳಿದರು.
ಬುಧವಾರ ಇಲ್ಲಿನ ತಾ.ಪಂ.ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಅರಣ್ಯ ಇಲಾಖೆಯವರು ಉತ್ತಮ ಸಹಕಾರ ನೀಡುತ್ತಿದ್ದು, ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ಪಂಚಾಯತ್‌ನಡೆಸುವಂತೆ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಆರ್. ಪೆಡ್ನೇಕರ್ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪೂರಕ ಪೌಷ್ಟಿಕ ಆಹಾರದ ಪೂರೈಕೆಯಲ್ಲಿ ಶೇ.78ರ ಗುರಿ ಸಾಧಿಸಲಾಗಿದೆ. ಪೌಷ್ಟಿಕ ಆಹಾರ ಪೂರೈಕೆಯಲಿ,್ಲ ಶಿಶು ಅಭಿವೃದ್ಧಿ ಯೋಜನೆಯಲ್ಲಿ 4.32 ಕೋ.ರೂ., ವಿಶೇಷ ಘಟಕ ಯೋಜನೆಯಲ್ಲಿ 39 ಲಕ್ಷ ರೂ., ಗಿರಿಜನ ಉಪಯೋಜನೆಯಲ್ಲಿ 39 ಲಕ್ಷ ರೂ. ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಅನುದಾನ ಮುಗಿಸಿ
14ನೇ ಹಣಕಾಸು ಯೋಜನೆಯಡಿ ತಾಲೂಕಿಗೆ ಬಂದ ಅನುದಾನದ ಸದ್ಬಳಕೆಯಾಗಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ಸೂಚಿಸಿದರು. ಡಿಸೆಂಬರ್ ಅಂತ್ಯದವರೆಗೂ ಕ್ರಿಯಾಯೋಜನೆ ನಡೆಯದ ಕಾರಣ ಅನುದಾನ ಖರ್ಚಾಗದೇ ಬಾಕಿಯಾಗಿದೆ. ಚುನಾವಣೆ ನೀತಿ ಸಂಹಿತೆ, ವರ್ಷಾಂತ್ಯ ಬೇಗ ಬರುವುದರಿಂದ ಶೀಘ್ರ ಕ್ರಿಯಾಯೋಜನೆ ಮಾಡಿ ಮಾರ್ಚ್ ಒಳಗೆ ಅನುದಾನ ನೀಡಲು ಸೂಚಿಸಿದರು.
ಅಣೆಕಟ್ಟು
ಸಾಮಾಜಿಕ ಅರಣ್ಯದಿಂದ ಅಡುಗೆ ಅನಿಲ, ಸೋಲಾರ್ ದೀಪ, ಸೋಲಾರ್ ಲ್ಯಾಂಪ್ ವಿತರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಸಣ್ಣ ನೀರಾವರಿ ಇಲಾಖೆ ವತಿಯಿಂದ 10 ಕಿಂಡಿ ಅಣೆಕಟ್ಟುಗಳಾಗಬೇಕಿದ್ದು 8 ಪೂರ್ಣಗೊಂಡಿವೆೆ. 1 ಕೆರೆ ನಿರ್ಮಾಣವಾಗಿದೆ. ಪ್ರವಾಹ ನಿಯಂತ್ರಣದಡಿ 5 ಕಾಮಗಾರಿಗಳ ಪೈಕಿ 2 ಪೂರ್ಣ ಗೊಂಡಿದ್ದು 2 ಪ್ರಗತಿಯಲ್ಲಿವೆೆ. 1 ಕಾಮಗಾರಿ ಇನ್ನೂ ಆರಂಭಿಸಿಲ್ಲ ಎಂದು ವಿವರಿಸಿದರು.
ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಎಸ್. ಕುಂದರ್, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ ಉಪಸ್ಥಿತರಿದ್ದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕುಂದಾಪುರ ತಾಲೂಕು ಉಡುಪಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದರು. ತಾಲೂಕಿನಲ್ಲಿ 6.14 ಕೋ.ರೂ. ಕಾಮಗಾರಿಯಾಗಿದ್ದು 24 ಲಕ್ಷ ರೂ. ಮಾನವಶ್ರಮಕ್ಕಾಗಿ ಸೇರಿ ಒಟ್ಟು 84 ಲಕ್ಷ ರೂ. ಅನುದಾನ ಬರಲು ಬಾಕಿಯಿದೆ. ಕಾರ್ಕಳ ತಾಲೂಕಿನಲ್ಲಿ 2.23 ಕೋ.ರೂ. ಕಾಮಗಾರಿ ಯಾಗಿದ್ದು 17 ಲಕ್ಷ ರೂ. ಬಾಕಿಯಿದೆ ಎಂದರು.
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.