ನಿಖಿಲ್ ಸ್ಪರ್ಧೆಗೆ ಜೆಡಿಎಸ್ ವರಿಷ್ಠರ ಹಿಂದೇಟು?
Team Udayavani, Feb 7, 2019, 1:40 AM IST
ಮಂಡ್ಯ: ಜೆಡಿಎಸ್ ನಾಯಕರ ಸ್ವಯಂಕೃತ ವಿವಾದಗಳು ಮತ್ತು ಜಿಲ್ಲೆಯ ಮುಖಂಡರ ಆಂತರಿಕ ಅಸಮ್ಮತಿಯ ಕಾರಣದಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಅಘೋಷಿತ ಜೆಡಿಎಸ್ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯ ಸಾಧ್ಯತೆಗಳು ಕ್ಷೀಣಿಸುವಂತಾಗಿದೆ.
ಸ್ಥಳೀಯ ನಾಯಕತ್ವದ ಪ್ರಶ್ನೆ ಹಾಗೂ ಅಂಬರೀಶ್ ಕುಟುಂಬದ ವಿರುದ್ಧ ಜೆಡಿಎಸ್ ನಾಯಕರು ಆಡಿರುವ ದುಡುಕು ಮಾತುಗಳಿಂದ ಜಿಲ್ಲೆಯಲ್ಲಿ ಜೆಡಿಎಸ್‌ಗೆ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗುತ್ತಿದ್ದು, ಇಂತಹ ಸನ್ನಿವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷದ ವರಿಷ್ಠರು ಹಿಂದೇಟು ಹಾಕುವಂತಾಗಿದೆ.
ಆಂತರಿಕ ಅಸಮ್ಮತಿ: ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗುವುದಕ್ಕೆ ಜೆಡಿಎಸ್‌ನೊಳಗೆ ಆಂತರಿಕ ಅಸಮ್ಮತಿ ವ್ಯಕ್ತವಾಗುತ್ತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ನಿಖೀಲ್ ಹೆಸರನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಸ್ಥಳೀಯ ನಾಯಕರಿಂದ ನಡೆಯುತ್ತಲೇ ಇಲ್ಲ. ಸುಮಲತಾ ಹೆಸರು ಚಾಲ್ತಿಗೆ ಬಂದ ನಂತರದಲ್ಲಿ ನಿಖೀಲ್ ನಾಮಸ್ಮರಣೆ ಮಾಡುವವರ ಸಂಖ್ಯೆಯೂ ಕ್ಷೀಣಿಸಿದೆ. ಈ ಬಗ್ಗೆಯೂ ಜೆಡಿಎಸ್ ವರಿಷ್ಠರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆಸಕ್ತಿ ತೋರದ ನಾಯಕರು: ಜಿಲ್ಲೆಯಲ್ಲಿ ಏಳು ಶಾಸಕರು, ಮೂವರು ವಿಧಾನಪರಿಷತ್ ಸದಸ್ಯರಿದ್ದು, ಅವರೆಲ್ಲರೂ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ ಎಂದು ಹೇಳುತ್ತಿದ್ದಾರೆಯೇ ವಿನ: ಎಲ್ಲೂ ಬಹಿರಂಗವಾಗಿ ಮತ್ತು ಒಮ್ಮತದಿಂದ ನಿಖೀಲ್ ಹೆಸರನ್ನು ಭಜಿಸದಿರುವುದು ಜೆಡಿಎಸ್ ಒಳಗಿನ ಆಂತರಿಕ ಒಡಕನ್ನು ಪ್ರದರ್ಶಿಸುತ್ತಿದೆ.
ಅಂಬರೀಶ್ ಕುಟುಂಬದ ವಿರುದ್ಧ ಜೆಡಿಎಸ್ ನಾಯಕರು ಹಗುರವಾಗಿ ಮಾತನಾಡುವುದರೊಂದಿಗೆ ನಿಖೀಲ್ ಸ್ಪರ್ಧೆಯ ವಿಚಾರವಾಗಿ ಜೆಡಿಎಸ್‌ನೊಳಗೆ ಸೃಷ್ಟಿಯಾಗಿದ್ದ ಅಸಮಾಧಾನ ಹಾಗೂ ಸಾರ್ವಜನಿಕ ವಲಯದಲ್ಲಿ ಉಂಟಾಗಿದ್ದ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ನಿಖಿಲ್ ಕಾಣಿಸುತ್ತಿಲ್ಲ: ಕಳೆದ ಸಂಕ್ರಾಂತಿ ಹಬ್ಬದದಂದು ಸರ್ಕಾರಿ ಕಾರ್ಯಕ್ರಮವಾದ ಭತ್ತ ಖರೀದಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿಖಿಲ್, ಇಲ್ಲಿಯವರೆಗೂ ಮಂಡ್ಯ ಜಿಲ್ಲೆಯ ಕಡೆ ತಲೆ ಹಾಕಿಲ್ಲ. ಸೀತಾರಾಮ ಕಲ್ಯಾಣ ಸಿನಿಮಾದ ಪ್ರಮೋಷನ್‌ಗೂ ಜಿಲ್ಲೆಯತ್ತ ಮುಖ ಮಾಡಲಿಲ್ಲ. ಸಿನಿಮಾಕ್ಕೆ ಜೆಡಿಎಸ್ ಶಾಸಕರು ಗ್ರಾಮೀಣ ಜನರಿಗೆ ಉಚಿತ ಪ್ರದರ್ಶನ ಏರ್ಪಡಿಸಿರುವುದು ಬಹಿರಂಗಗೊಳ್ಳುತ್ತಿದ್ದಂತೆ ನಿಖೀಲ್, ಸಿನಿಮಾ ಪ್ರಚಾರಕ್ಕಾಗಿ ಮಂಡ್ಯಕ್ಕೆ ಆಗಮಿಸಲೇ ಇಲ್ಲ. ಅದಕ್ಕೂ ಮುನ್ನ ಪದೇ ಪದೇ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಬಿಂಬಿಸಿಕೊಂಡಿದ್ದರು.
ಲಕ್ಷ್ಮೀ ಅಶ್ವಿನ್ ಹೆಸರು ಚಾಲ್ತಿಗೆ
ನಿಖಿಲ್ ಸ್ಪರ್ಧೆಗೆ ಹಿಂದೇಟು ಹಾಕುತ್ತಿರುವ ಬೆನ್ನ ಹಿಂದೆಯೇ ಲಕ್ಷ್ಮೀ ಅಶ್ವಿನ್‌ಗೌಡ ಹೆಸರನ್ನು ಮಂಡ್ಯ ಕ್ಷೇತ್ರದಲ್ಲಿ ಹರಿಯ ಬಿಡುವ ಮೂಲಕ ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡಿರುವುದನ್ನು ಬಿಂಬಿಸಿಕೊಳ್ಳುವ ಪ್ರಯತ್ನಕ್ಕೆ ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಲಕ್ಷ್ಮೀ ಅಶ್ವಿನ್‌ಗೌಡ ಹಾಗೂ ಸುಮಲತಾ ಅವರ ಫೋಟೋ ಹರಿಯ ಬಿಟ್ಟು, ‘ಮಂಡ್ಯದ ಮಗಳು ಯಾರು?’ ಎಂಬ ಪ್ರಶ್ನೆ ಹಾಕಿದ್ದಾರೆ. ಕೊನೆಯ ಹಂತದವರೆಗೆ ನಿಖೀಲ್ ಸ್ಪರ್ಧೆಯನ್ನು ಮೊದಲ ಆದ್ಯತೆಯಾಗಿಸಿಕೊಂಡು ಅದು ಸಾಧ್ಯವಾಗದಿದ್ದರೆ ಲಕ್ಷ್ಮೀ ಅಶ್ವಿನ್‌ಗೌಡ ಅವರನ್ನು ಕಣಕ್ಕಿಳಿಸುವ ಆಲೋಚನೆಯೂ ಜೆಡಿಎಸ್ ವರಿಷ್ಠರ ರಾಜಕೀಯ ತಂತ್ರಗಾರಿಕೆಯ ಒಂದು ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.