ನಾಲ್ಕು ದೇಗುಲ ವಿಗ್ರಹ ಭಗ್ನಗೊಳಿಸಿ ವಿಕೃತಿ


Team Udayavani, Feb 7, 2019, 11:35 AM IST

mand.jpg

ಮದ್ದೂರು: ತಾಲೂಕು ಬೆಸಗರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ನಾಲ್ಕು ದೇಗುಲಗಳ ವಿಗ್ರಹ ವಿರೂಪಗೊಳಿಸಿ, ಕಂಚಿನ ಪ್ರತಿಮೆ ಹೊತ್ತೂಯ್ದಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಚುಂಚೇಗೌಡನದೊಡ್ಡಿ ಪಟ್ಟಲದಾಂಬ, ಪಣ್ಣೇ ದೊಡ್ಡಿ ವೀರಾಂಜನೇಯ, ಹೊಂಬಾಳೆಗೌಡನ ದೊಡ್ಡಿ ಶನಿ ಮಹಾತ್ಮ ಮತ್ತು ಬೆಳತೂರು ಗ್ರಾಮದ ಮುನೇಶ್ವರ ದೇವರ ವಿಗ್ರಹಗಳು ಭಗ್ನಗೊಂಡಿವೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೇ ರಾತ್ರಿ ನಡೆದ ಈ ನಾಲ್ಕು ಪ್ರಕರಣಗಳು ತಾಲೂಕಿನಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಗರ್ಭಗುಡಿ ಪ್ರವೇಶಿಸಿ ದೇವರ ವಿಗ್ರಹ ವಿರೂಪಗೊಳಿಸಿ, ಕೆಲವು ಹೊರತಂದು ಅಕ್ಕಪಕ್ಕದ ಜಮೀನಿನಲ್ಲಿ ವಿರೂಪ ಗೊಳಿಸಿ ಎಸೆದಿರುವ ಜೊತೆಗೆ ಪಣ್ಣೇದೊಡ್ಡಿ ಗ್ರಾಮದ ಆಂಜನೇಯಸ್ವಾಮಿ ದೇವರ ಕಂಚಿನ ಮೂರ್ತಿ ಯನ್ನು ಕಳವು ಮಾಡಿದ್ದಾರೆ. ಚುಂಚೇಗೌಡನದೊಡ್ಡಿ ಪಟ್ಟಲದಾಂಬ ದೇವಿ ಮೂಲ ವಿಗ್ರಹವನ್ನು ಒಡೆದು ಹಾಕಿ ಮದ್ದೂರು ಬೆಸಗರಹಳ್ಳಿ ರಸ್ತೆ ಬದಿಯ ಜಮೀನಿನಲ್ಲಿ ಎಸೆಯಲಾಗಿದೆ.

ಹೊಂಬಾಳೇಗೌಡನದೊಡ್ಡಿ ಶನಿಮಹಾತ್ಮ, ಬೆಳತೂರು ಮುನೇಶ್ವರ ದೇಗುಲಗಳ ಗರ್ಭಗುಡಿ ಯಲ್ಲಿದ್ದ ಮೂಲ ವಿಗ್ರಹಗಳನ್ನು ವಿರೂಪಗೊಳಿಸಿ ಹೊರತಂದು ಬಿಸಾಡಿರುವುದು ಹಲವು ಅನುಮಾ ನಗಳಿಗೆ ಎಡೆಮಾಡಿಕೊಟ್ಟಿದೆ. ಇದರು ಸ್ಥಳೀಯರು ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರ ಬೆಳಗ್ಗೆ ದೇವರ ವಿಗ್ರಹ ವಿರೂಪ ಗೊಳಿಸಿರುವ ಸುದ್ದಿ ಎಲ್ಲೆಡೆ ಹರಡಿ ಸ್ಥಳಕ್ಕೆ ಭಕ್ತರು ಆಗಮಿಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದರು.

ಎಸ್ಪಿ ಭೇಟಿ: ವಿಷಯ ತಿಳಿಯುತ್ತಿದ್ದಂತೆ ನಾಲ್ಕೂ ದೇಗುಲಗಳಿಗೆ ಎಸ್ಪಿ ಶಿವಪ್ರಕಾಶ್‌ ದೇವರಾಜ್‌, ಡಿವೈಎಸ್‌ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್‌ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಘಟನಾ ಸ್ಥಳಕ್ಕೆ ಕರೆಸಿ ವಿವರ ಪಡೆದರು. ಘಟನೆ ಸಂಬಂಧ ಮದ್ದೂರು ವೃತ್ತ ನಿರೀಕ್ಷಕ ಮಹೇಶ್‌ ಮಾರ್ಗದರ್ಶನದಲ್ಲಿ ಕೆಸ್ತೂರು ಠಾಣೆ ಪಿಎಸ್‌ಐ ಸಂತೋಷ್‌ ನೇತೃತ್ವದ ಪೊಲೀಸರ ತನಿಖಾ ತಂಡ ರಚಿಸಿರುವುದಾಗಿ ಡಿವೈಎಸ್‌ಪಿ ಶೈಲೇಂದ್ರ ತಿಳಿಸಿದರು. ಸದ್ಯಕ್ಕೆ ಬೆಸಗರಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬಿಗುವಿನ ವಾತಾವರಣ ಮೂಡಿದೆ. ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಒಂದು ಜಿಲ್ಲಾ ಶಸಸ್ತ್ರ ಮೀಸಲುಪಡೆ ಹಾಗೂ ಸ್ಥಳೀಯ ಪೊಲೀಸ್‌ ಸಿಬ್ಬಂದಿಯ ಬಂದೋಬಸ್ತ್ ಕೈಗೊಂಡಿದ್ದಾರೆ.

ರಸ್ತೆ ತಡೆ: ಬೆಸಗರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆರೆಮೇಗಲದೊಡ್ಡಿ ಶೇಖರ್‌ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಸ್ಥಳೀಯರು ಬೆಸಗರಹಳ್ಳಿ ಬಸ್‌ ನಿಲ್ದಾಣ ದಲ್ಲಿ ಪ್ರತಿಭಟನೆ ನಡೆಸಿ ಕೆಲಕಾಲ ಮದ್ದೂರು-ಮಂಡ್ಯ ಮುಖ್ಯರಸ್ತೆ ತಡೆ ನಡೆಸಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

ಟಾಪ್ ನ್ಯೂಸ್

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

1-pb

Communalization ಜತೆ ಆರೆಸ್ಸೆಸ್‌ ಆರಂಭ: ಬಿಳಿಮಲೆ ಹೇಳಿದ್ದು ವಿವಾದ

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ

Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Naxal-Rehablitation

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

barkuru-Kamabala

Kambala: ಆರು ಶತಮಾನಗಳ ಇತಿಹಾಸ ಹೊಂದಿರುವ ಬಾರ್ಕೂರು ಕಂಬಳ

Yatindra

Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ

IMD

Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!

1-pb

Communalization ಜತೆ ಆರೆಸ್ಸೆಸ್‌ ಆರಂಭ: ಬಿಳಿಮಲೆ ಹೇಳಿದ್ದು ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.