ಗೆಳತಿಗೆ ಸಲಾಂ
Team Udayavani, Feb 8, 2019, 12:30 AM IST
ಸ್ವತಂತ್ರ ಭಾರತದ ಎಪ್ಪತ್ತನೇ ಗಣರಾಜ್ಯೋತ್ಸವ ನಮ್ಮ ಪಾಲಿಗೊಂದು ಮರೆಯಲಾಗದ ದಿನ. ಯಾಕೆಂದರೆ, ನನ್ನ ಗೆಳತಿ ಪ್ರೀತಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ದಿನವದು. ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎನ್‌ಸಿಸಿ ಕೆಡೆಟ್ ಅವಳು.
ಗಣರಾಜ್ಯೋತ್ಸವದಂತಹ ಪರೇಡ್‌ನಲ್ಲಿ ಭಾಗವಹಿಸುವುದು ಎಂದರೆ ಹೆಮ್ಮೆಯ ವಿಷಯವಲ್ಲವೆ! ಇಂತಹ ಭಾಗ್ಯ ನನ್ನ ಗೆಳತಿಯ ಪಾಲಿಗೆ ಒದಗಿಬಂದಿದೆ ಎಂದರೆ ಅದಕ್ಕಿಂತ ಸಂತೋಷದ ವಿಚಾರ ಬೇರುಂಟೆ? ಬಂಟ್ವಾಳ ತಾಲೂಕಿನ ಕನ್ಯಾನ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಆಕೆ ಕನ್ಯಾನದಲ್ಲಿರುವ ಶ್ರೀಸರಸ್ವತಿ ವಿದ್ಯಾಲಯಕ್ಕೆ ಪ್ರಾಥಮಿಕ ಶಿಕ್ಷಣಕ್ಕಾಗಿ ಸೇರಿದವಳು. ಕನ್ಯಾನದಲ್ಲಿಯೇ ಹುಟ್ಟಿರುವ ನಾನೂ ಅವಳದೇ ತರಗತಿಗೆ ಸೇರಿಕೊಂಡೆ. ನಂತರ ನಾವು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೇರೆ ಬೇರೆ ಶಾಲೆಯಲ್ಲಿ ಕಲಿತರೂ ಮತ್ತೆ ಪಿಯುಸಿ ಹಾಗೂ ಪದವಿಯನ್ನು ಪೂರೈಸಿದ್ದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿಯೇ. ಅವಳು ಕಾಲೇಜಿನ ಎನ್‌ಸಿಸಿಗೆ ಸೇರಿಕೊಂಡಳು. ನಾನೂ ಅವಳೊಂದಿಗೆ ಎನ್‌ಸಿಸಿಗೆ ಸೇರಿಕೊಳ್ಳಬೇಕೆಂದು ಬಯಸಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಆದರೆ, ನನ್ನ ಗೆಳತಿ ಮಾತ್ರ ಎಷ್ಟೇ ಕಷ್ಟ ಬಂದರೂ ಕಠಿಣ ಪರಿಶ್ರಮದಿಂದ ಮುನ್ನುಗ್ಗಬೇಕೆನ್ನುವ ಛಲ ಇದ್ದದ್ದರಿಂದ ಹಲವು ಹಂತಗಳನ್ನು ದಾಟಿ ದೆಹಲಿಯಲ್ಲಿ ನಡೆದ ಪರೇಡ್‌ಗೂ ಆಯ್ಕೆಯಾಗಿಬಿಟ್ಟಳು.
ಪ್ರೀತಿಯ ಗೆಳತಿಗಿದೋೆ ನಿನ್ನ ಸಹಪಾಠಿಗಳ, ಅಧ್ಯಾಪಕರ ಹಾಗೂ ಹೆತ್ತವರ ಪರವಾಗಿ ದೊಡ್ಡದೊಂದು ಸಲಾಂ.
ಸ್ವಾತಿ ಬಿ. ಶೆಟ್ಟಿ ಕನ್ಯಾನ
ದ್ವಿತೀಯ ಬಿ. ಎಸ್ಸಿ. ವಿವೇಕಾನಂದ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.