ಬಿಂಬುಳಿ ಸವಿ
Team Udayavani, Feb 8, 2019, 12:30 AM IST
ಮರದಲ್ಲಿ ಗೊಂಚಲು ಗೊಂಚಲುಗಳಾಗಿ ಬಿಡುವ ಬಿಂಬುಳಿಯ ಹೆಸರು ಕೇಳಿದೊಡನೆ ಅದರ ಹುಳಿಯನ್ನು ನೆನೆದು ನಾಲಿಗೆಯ ಅಡಿಯಲ್ಲಿ ಚೊರ್ ಎಂದು ನೀರೂರುತ್ತದೆ. ಬಾಲ್ಯದಲ್ಲಿ ಉಪ್ಪು ನಂಚಿಕೊಂಡು ಸವಿದ ಬಿಂಬುಳಿಯನ್ನು ಉಪಯೋಗಿಸಿ ಹಲವು ಸವಿರುಚಿಗಳನ್ನು ತಯಾರಿಸಬಹುದು.
ಬಿಂಬುಳಿ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ಬಿಂಬುಳಿ- ಇಪ್ಪತ್ತು, ಸಾಸಿವೆ- ಕಾಲು ಕಪ್, ಅರಸಿನ- ಎರಡು ಚಮಚ, ಇಂಗು ಸುವಾಸನೆಗಾಗಿ, ಮೆಂತೆ- ಒಂದು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಕುದಿಯುತ್ತಿರುವ ಉಪ್ಪು$ ನೀರಿಗೆ ಹೆಚ್ಚಿದ ಬೀಂಪುಳಿಯನ್ನು ಹಾಕಿ ಕೂಡಲೆ ತೆಗೆದು ಜಾಲರಿಯಲ್ಲಿ ಆರಲು ಬಿಡಿ. ಉಪ್ಪು ನೀರನ್ನು ಚೆನ್ನಾಗಿ ಕುದಿಸಿ ಆರಲು ಬಿಡಿ. ಸಾಸಿವೆ ಮತ್ತು ಮೆಂತೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ. ಮೆಣಸಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ಇದಕ್ಕೆ ಇಂಗು ಮತ್ತು ಅರಸಿನ ಹಾಕಿ ಬಿಸಿ ಮಾಡಿಕೊಳ್ಳಿ. ಆರಿದ ನಂತರ ಇವುಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ನಂತರ ಸ್ವಲ್ಪ ಉಪ್ಪು ನೀರು ಸೇರಿಸಿ ಪುನಃ ರುಬ್ಬಿ ಬೇಯಿಸಿಟ್ಟ ಬಿಂಬುಳಿಗೆ ಸೇರಿಸಿ ಬೇಕಷ್ಟು ಉಪ್ಪು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈಗ ತಯಾರಾದ ಉಪ್ಪಿನಕಾಯಿಗೆ ಬೆಳ್ಳುಳ್ಳಿ ಒಗ್ಗರಣೆಯನ್ನು ಬೇಕಿದ್ದರೆ ನೀಡಬಹುದು.
ಬಿಂಬುಳಿ ವಿದ್ ಸ್ವೀಟ್‌ಕಾರ್ನ್ ಕೋಸಂಬ್ರಿ
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಬಿಂಬುಳಿ- ಎರಡು, ಕ್ಯಾರೆಟ್ ತುರಿ- ಆರು ಚಮಚ, ಮೂಲಂಗಿ ತುರಿ- ನಾಲ್ಕು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಕೊತ್ತಂಬರಿಸೊಪ್ಪು$ಸ್ವಲ್ಪ$, ಹಸಿಮೆಣಸು- ಒಂದು, ತೆಂಗಿನ ತುರಿ- ಮೂರು ಚಮಚ, ಬ್ಲೇಕ್‌ಸಾಲ್ಟ್- ಅರ್ಧ ಚಮಚ, ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ಕೆಂಪು ಮೆಣಸು, ಉದ್ದಿನಬೇಳೆ ಸೇರಿಸಿದ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ತುಪ್ಪದಲ್ಲಿ ನೀಡಿ. ನಂತರ ಕೆಂಪು ಮೆಣಸನ್ನು ಹುಡಿಮಾಡಿ ಚೆನ್ನಾಗಿ ಮಿಶ್ರಮಾಡಿ.
ಮೆಣಸುಕಾಯಿ
ಬೇಕಾಗುವ ಸಾಮಗ್ರಿ: ಬಿಳಿ ಎಳ್ಳು – ಎರಡು ಚಮಚ, ಕಪ್ಪು ಎಳ್ಳು- ಎರಡು ಚಮಚ, ಉದ್ದಿನಬೇಳೆ- ಎರಡು ಚಮಚ, ಕೆಂಪು ಮೆಣಸು- ಐದು, ತೆಂಗಿನ ತುರಿ- ಒಂದು ಕಪ್, ಬಿಂಬುಳಿ- ಎಂಟು, ಮೆಣಸಿನಪುಡಿ- ಒಂದು ಚಮಚ, ಬೆಲ್ಲ ಮತ್ತು ಉಪ್ಪು ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಹೆಚ್ಚಿದ ಬಿಂಬುಳಿಗೆ ಉಪ್ಪು, ಮೆಣಸಿನಪುಡಿ, ಬೆಲ್ಲ ಹಾಗೂ ಬೇಕಷ್ಟು ನೀರು ಸೇರಿಸಿ ಬೇಯಲು ಇಡಿ. ಎಳ್ಳನ್ನು ಮೊದಲು ಹುರಿದು ತೆಗೆದುಕೊಳ್ಳಿ. ಅದೇ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಮೆಣಸು ಮತ್ತು ಉದ್ದಿನ ಬೇಳೆಯನ್ನು ಹುರಿಯಿರಿ. ನಂತರ ಹುರಿದ ಮಸಾಲೆಗಳನ್ನೆಲ್ಲ ತೆಂಗಿನ ತುರಿಯೊಡನೆ ಬೇಕಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ. ಬೇಯಿಸಿಟ್ಟ ಬಿಂಬುಳಿಗೆ ಇದನ್ನು ಸೇರಿಸಿ ಕರಿಬೇವು ಮತ್ತು ಸೀಳಿದ ಹಸಿಮೆಣಸಿನ ಜೊತೆ ಕುದಿಸಿ ಇಳಿಸಿ. ದಪ್ಪವಾದ ಗಸಿಯಂತಿರುವ ಇದಕ್ಕೆ ಸಾಸಿವೆ ಒಗ್ಗರಣೆಯನ್ನು ಕರಿಬೇವಿನ ಜೊತೆ ನೀಡಿ.
ಗೊಜ್ಜು
ಬೇಕಾಗುವ ಸಾಮಗ್ರಿ: ಬಿಂಬುಳಿ- ಆರು, ಕೆಂಪು ಮೆಣಸಿನಪುಡಿ- ಒಂದು ಚಮಚ, ಅರಸಿನ- ಕಾಲು ಚಮಚ, ರಸಂ ಪೌಡರ್- ಎರಡು ಚಮಚ, ಉಪ್ಪು ಮತ್ತು ಬೆಲ್ಲ ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ಬಿಂಬುಳಿಗೆ ಬೆಲ್ಲ, ಉಪ್ಪು ಮೆಣಸಿನಪುಡಿ ಮತ್ತು ಅರಸಿನ ಸೇರಿಸಿ ಬೇಯಲು ಇಡಿ. ಇದು ಬೇಯುತ್ತಾ ಬರುವಾಗ ರಸಂ ಪೌಡರ್ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಸ್ವಲ್ಪ ನೀರು ಆರಿದ ನಂತರ ಒಲೆಯಿಂದ ಇಳಿಸಿ. ಬೆಳ್ಳುಳ್ಳಿ ಮತ್ತು ಕರಿಬೇವು ಸೇರಿಸಿದ ಸಾಸಿವೆ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.