ಬದುಕು ಕಲಿಸುವ ಭಾಷೆ ತಾಯಿಗಿಂತ ಮಿಗಿಲು: ಸರಸ್ವತಿ


Team Udayavani, Feb 8, 2019, 9:46 AM IST

vij-3.jpg

ವಿಜಯಪುರ: ಭಾಷೆ ಇಲ್ಲದಿದ್ದರೆ ಮಾತು, ವ್ಯವಹಾರ, ಸಾಹಿತ್ಯ, ಸಂಸ್ಕೃತಿ ಯಾವುದೂ ಇಲ್ಲ. ಭಾಷೆಯ ಜೊತೆಗೆ ಬದುಕನ್ನು ಕಲಿಸುವ ತಾಯಿಗಿಂತ ಮಿಗಿಲಾದವರು ಯಾರೂ ಇಲ್ಲ ಎಂದು ಡಾ| ಸರಸ್ವತಿ ಚಿಮ್ಮಲಗಿ ಅಭಿಪ್ರಾಯಪಟ್ಟರು.

ಜಿಲ್ಲಾ ಕದಳಿ ವೇದಿಕೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾಷೆಯ ಮೂಲಕ ಬದುಕು ರೂಪಿಸಿಕೊಳ್ಳುವಲ್ಲಿ ವಚನಕಾರ್ತಿಯರು ನಮ್ಮ ಆದರ್ಶವಾಗಿದ್ದಾರೆ. ಹೆಣ್ಣು ತಾಯಿ, ತಂಗಿ, ಹೆಂಡತಿಯಾಗಿ ಬಾಳನ್ನು ಬೆಳಗುವ ನಂದಾದೀಪ. ಅದಕ್ಕಾಗಿ ಶರಣರು ಹೆಣ್ಣು ಸಾಕ್ಷಾತ್‌ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದು ಹೇಳಿ ಹೆಣ್ಣನ್ನು ದೈವ ಸ್ಥಾನಕ್ಕೇರಿಸಿದ್ದಾರೆ ಎಂದು ವಿಶ್ಲೇಷಿದರು.

ಭಾರತಿ ಪಾಟೀಲ ಮಾತನಾಡಿ, ಕದಳಿ ವೇದಿಕೆಯಂತ ಸಂಘಟನೆಯಿಂದ ಹೆಣ್ಣು ಮಕ್ಕಳಲ್ಲಿ ಆತಸ್ಥೈರ್ಯ ಹೆಚ್ಚಾಗಿದೆ. ಪುರುಷರಿಗೆ ಸಮಾನವಾಗಿ ನಿಲ್ಲಲು ಸಂಘಟನೆಗಳು ಕಾರಣವಾಗಿವೆ ಎಂದರು.

ಪ್ರಭಾವತಿ ದೇಸಾಯಿ ಅವರ ನೀನಾದ ಗಜಲ್‌ ಕೃತಿ ಲೋಕಾರ್ಪಣೆ ಮಾಡಿದ ಜಂಬುನಾಥ ಕಂಚ್ಯಾಣಿ ಅವರು, ಕಾವ್ಯ ಸುಖಾಸುಮ್ಮನೆ ಹುಟ್ಟುವುದಿಲ್ಲ. ಅದು ಕವಿಯ ತಪಸ್ಸಿನ ಫಲದಿಂದ ಅಭಿವ್ಯಕ್ತಗೊಳ್ಳುವ ಅದ್ಭುತ್‌ ಸರ್ವಸೃಷ್ಟಿ ಎಂದು ಬಣ್ಣಿಸಿದರು. ಹೇಮಲತಾ ವಸ್ತ್ರದ ಕೃತಿ ಪರಿಚಯಿಸಿದರು. ದಿ| ಶಿವಗಂಗಮ್ಮ ದತ್ತಿ ಕುರಿತು ಮಲ್ಲಮ್ಮ ಬಿರಾದಾರ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ಸಮಾನವಾಗಿ ತಮ್ಮ ವಚನಗಳ ಮೂಲಕ ಅಭಿಪ್ರಾಯ ಮಂಡಿಸುವಲ್ಲಿ ಸಮರ್ಥರಾಗಿದ್ದ ಸಂಕವ್ವೆ, ಸತ್ಯಕ್ಕ, ಬೊಂತಾದೇವಿ, ಲಕ್ಕಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಮುಕ್ತಾಯಕ್ಕ ಅವರಂಥ ಶಿವಶರಣೆಯರ ಕಾಯಕನಿಷ್ಠೆ, ವ್ರತಾಚರಣೆ ಇಂದಿನ ನಮಗೆ ಆದರ್ಶ ಎಂದರು.

ಸಿದ್ಧಲಿಂಗ ಹದಿಮೂರ, ರಾಜಶೇಖರ ಉಮರಾಣಿ, ಮಹಾಂತ ಗುಲಗಂಜಿ, ಎಸ್‌.ಎಸ್‌. ತುಪ್ಪದ, ಸೋಮನಗೌಡ ಪಾಟೀಲ, ಎಸ್‌.ಡಿ. ಮಾದನಶೆಟ್ಟಿ, ವಿ.ಸಿ. ನಾಗಠಾಣ, ಬಿ.ಎಚ್. ಬಾದರಬಂಡಿ, ಈರಣ್ಣ ತೊಂಡಿಕಟ್ಟಿ, ಶರಣಗೌಡ ಪಾಟೀಲ, ಎ.ಎಸ್‌. ಕೋರಿ, ಜಿ.ಎನ್‌. ತೆಗ್ಗಳ್ಳಿ, ನಿರಂಜನ ದೇಸಾಯಿ, ಸುಭಾಸ ಯಾದವಾಡ, ಎಂ.ಎಂ. ಅಂಗಡಿ ಇದ್ದರು.

ಮ.ಗು.ಯಾದವಾಡ, ದತ್ತಿದಾನಿ ಪ್ರೊ| ಜಯಶ್ರೀ ಸಜ್ಜನ ಇದ್ದರು. ದಾಕ್ಷಾಯಣಿ ಬಿರಾದಾರ ಮಾತನಾಡಿದರು. ಗಂಗಾಬಾಯಿ ಗಲಗಲಿ ಸ್ವಾಗತಿಸಿದರು. ಕಾಶೀಬಾಯಿ ಬಿರಾದಾರ ವಂದಿಸಿದರು. ಸುನಂದಾ ಕೋರಿ, ಕೆ.ಸುನಂದಾ ನಿರೂಪಿಸಿದರು.

ಟಾಪ್ ನ್ಯೂಸ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.